ಕರ್ನಾಟಕದ ಶಾಲಾ ವಿಧ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಬಸ್ ಪಾಸ್ ಅರ್ಜಿ ಆರಂಭ.
ವಿದ್ಯಾರ್ಥಿಗಳೇ ನೀವು ಕೂಡ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಬೇಕು ಅಂತ ಬಯಸಿದ್ದೀರಾ ಈ ಮುಂದೆ ನೀಡಿರುವ ಮಾಹಿತಿ ಓದಿರಿ.
ವಿಧ್ಯಾರ್ಥಿಗಳಿಗೆ ನಮ್ಮ ರಾಜ್ಯ ಸರಕಾರ ಶಾಲಾ ವಿಧ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಲು ಆರಂಭಿಸಿದೆ.
SC ಮತ್ತು ST ವರ್ಗದ ವಿಧ್ಯಾರ್ಥಿಗಳಿಗೆ ಸರ್ಕಾರದಿಂದ ಬಸ್ ಪಾಸ್ ಉಚಿತವಾಗಿ ನೀಡಲಾಗುತ್ತದೆ.
ಇದಲ್ಲದೇ ಶಾಲಾ ವಿದ್ಯಾರ್ಥಿನಿಯರಿಗೆ (ಹುಡುಗಿಯರಿಗೆ) ಸಹ ಒಂದು ವರ್ಷದ ಅವಧಿಗೆ ಬಸ್ ಪಾಸ್ ಅನ್ನು ಉಚಿತವಾಗಿ ನೀಡಲಾಗುತ್ತದೆ.
ಪೋಷಕರೇ ಮತ್ತು ವಿದ್ಯಾರ್ಥಿಗಳೇ ಉಚಿತವಾಗಿ ಬಸ್ ಪಾಸ್ ಪಡೆದುಕೊಳ್ಳ ಬೇಕೆಂದರೆ, ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ನೀಡಬೇಕು.
ಆಧಾರ್ ಕಾರ್ಡ್ (ವಿಧ್ಯಾರ್ಥಿಗಳ) ಪಾಲಕರ ಮೊಬೈಲ್ ನಂಬರ್ ನಿಮ್ಮ ಶಾಲೆ/ಕಾಲೇಜಿನ ಪ್ರವೇಶ ಶುಲ್ಕದ ಪತ್ರ (Reciept)
ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಾಸ್‌ಪೋರ್ಟ್ ಅಳತೆ ಫೋಟೋ ವಿದ್ಯಾರ್ಥಿಗಳ ಹಿಂದಿನ ವರ್ಷದ ಅಂಕ ಪಟ್ಟಿ
ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್‌ನಲ್ಲಿ ಅರ್ಜಿ ಹಾಕಬಹುದು ಅಥವಾ ನೀವು ನಿಮ್ಮ ಮೊಬೈಲ್ ನಲ್ಲೇ ಬಸ್ ಪಾಸ್ ಗೆ ಅರ್ಜಿ ಹಾಕಬಹುದು.
ಮೊಬೈಲ್ ಅಲ್ಲಿ ಅರ್ಜಿ ಹಾಕಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. sevasindhuservices.karnataka.gov.in