ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗಾಗಿ ಹೊಸ ಯೋಜನೆಯನ್ನ ಆರಂಭಿಸಿದ್ದು, ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ, ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿ, ತಿಂಗಳಿಗೆ ₹7000 ನೀಡಲಾಗುವುದು.
ಕೇಂದ್ರ ಸರ್ಕಾರ ಈ ಹೊಸ ಯೋಜನೆಯಡಿ, ಮಹಿಳೆಯರಿಗೆ ತಿಂಗಳಿಗೆ 7000 ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು 10ನೇ ತರಗತಿ ಉತ್ತೀರ್ಣರಾದವರು ಯೋಜನೆಗೆ ಅರ್ಜಿ ಸಲ್ಲಿಸಲು ಅಹ೯ರರು. ಅಜಿ೯ದಾರರ ವಯೋಮಿತಿ 18 ರಿಂದ 70 ವರ್ಷಗಳ ನಡುವೆ ಇರಬೇಕು.
ಅಜಿ೯ ಸಲ್ಲಿಸಲು ಅಹ೯ತೆ:
ಅಜಿ೯ದಾರರ ವಯಸ್ಸಿನ ಪ್ರಮಾಣಪತ್ರ, ವಿಳಾಸ ಪ್ರಮಾಣಪತ್ರ ಮತ್ತು 10ನೇ ತರಗತಿಯ ಅಂಕಪಟ್ಟಿಯನ್ನ ಸಲ್ಲಿಸಬೇಕು. ‘ಬಿಮಾ ಸಕಿ ಯೋಜನೆ’ (Bima Sakhi Scheme) ಎಂದು ಕರೆಯಲ್ಪಡುವ ಈ ಯೋಜನೆಯಡಿ, ಮಹಿಳೆರಿಗೆ ಮೊದಲ ವರ್ಷ ರೂ. 7000, ಎರಡನೇ ವರ್ಷ ರೂ. 6000 ಮತ್ತು ಮೂರನೇ ವರ್ಷ ರೂ. 5000 ಸ್ಟೈಫಂಡ್ ನೀಡಲಾಗುತ್ತದೆ. ಇದಲ್ಲದೆ, ಜತೆಗೆ ಕಮಿಷನ್ ಸಹ ಪಡೆಯಬಹುದು.
ಈ ಯೋಜನೆಯನ್ನ ಭಾರತೀ ಜೀವ ನಿಮಾ ನಿಗಮ (LIC) ಜಾರಿಗೆ ತಂದಿದೆ. ಮೊದಲ ಮೂರು ವರ್ಷಗಳವರೆಗೆ ಮಹಿಳೆಯರಿಗೆ ಎಲ್ಐಸಿ ತರಬೇತಿ ನೀಡುವುದರ ಜತೆಗೆ ಸ್ಟೈಫಂಡ್ ನೀಡಲಾಗುವುದು.
ಅಜಿ೯ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಮಹಿಳೆಯರು ಆನ್ಲೈನ್ ಅಥವಾ ಆಫ್ಲೈನ್ ಎರಡು ತರ ಅರ್ಜಿ ಸಲ್ಲಿಸಬಹುದು. ನೀವು ಅಜಿ೯ ಸಲ್ಲಿಸಲು https://licindia.in/hi/test2 ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಎಲ್ಐಸಿ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಈ ಸುದ್ದಿಯನ್ನೂ ಓದಿ: ಇಂಥವರಿಗೆ ‘ಗೃಹಲಕ್ಷ್ಮೀ’ ಯೋಜನೆಯ ಹಣ ಸಿಗುವುದಿಲ್ಲ: ಕಾರಣ ಇಲ್ಲಿದೆ!