WPL 2025: RCB ತಂಡದಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್! ಕಾರಣ ಏನು ?

WhatsApp Group Join Now
Telegram Group Join Now

ಮಹಿಳಾ ಪ್ರೀಮಿಯರ್ ಲೀಗ್ (WPL) ನ ಮೂರನೇ ಆವೃತ್ತಿಯು ಫೆಬ್ರವರಿ 14 ರಿಂದ ಪ್ರಾರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಜೈಂಟ್ಸ್ (GG) ಮುಖಾಮುಖಿ ಆಗಿದ್ದು. ಈ ಪಂದ್ಯದಲ್ಲಿ ಗುಜರಾತ್ ನೀಡಿರುವ 201 ರನ್ ಗಳ ಗುರಿ ಬೆನ್ನಟ್ಟಿ 6 ವಿಕೇಟ್ ಗಳಿಂದ ಗೆಲುವು ಸಾಧಿಸಿದೆ.

ಆದರೆ ಬೆಂಗಳೂರು ತಂಡಕ್ಕೆ ಇದೀಗ ದೊಡ್ಡ ಹೊಡೆತವೊಂದು ಎದುರಾಗಿದೆ. ವರದಿಗಳ ಪ್ರಕಾರ ಆರ್ ಸಿಬಿ ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ (Shreyanka Patil) ಗಾಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ಈ ಬಾರಿಯ ಡಬ್ಲ್ಯೂಪಿಲ್ ಟೂರ್ನಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

WPL 2025 RCb Shreyanka patil Out Of WPL
WPL 2025 RCB Shreyanka patil Out Of WPL

ಹೌದು ಟಗರು ಪುಟ್ಟಿ ಎಂದೇ ಖ್ಯಾತಿಯಾಗಿರುವ ಶ್ರೇಯಾಂಕಾ ಪಾಟೀಲ್ ಆರ್​ಸಿಬಿ ಪರ 15 ಪಂದ್ಯಗಳನ್ನಾಡಿದ್ದಾರೆ. ಆರ್​ಸಿಬಿ ಪರ 81 ರನ್ ಕಲೆಹಾಕಿದರೆ, ಹಾಗೂ ಬೌಲಿಂಗ್​ನಲ್ಲಿ 19 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಕಳೆದ ಬಾರಿ (WPL 2024) ಆರ್​ಸಿಬಿ ತಂಡ ಕಪ್ ಗೆಲ್ಲುವಲ್ಲಿ ಕನ್ನಡತಿ ಶ್ರೇಯಾಂಕಾ ಕೊಡುಗೆ ಅಮೂಲ್ಯವಾದದ್ದು.

ಶ್ರೇಯಾಂಕಾ ಪಾಟೀಲ್ (Shreyanka Patil) ಮೊಣಕಾಲಿನ ಗಾಯದ ಸಮಸ್ಯೆಯ ಕಾರಣ 2024ರ ಮಹಿಳಾ ಟಿ20 ವಿಶ್ವಕಪ್ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸ ಹಾಗೂ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗಳಿಂದಲೂ ಹೊರಗುಳಿದಿದ್ದರು. ಇದೀಗ ವುಮೆನ್ಸ್ ಪ್ರೀಮಿಯರ್ (WPL 2025) ಲೀಗ್ ಶುರುವಾದರೂ ತಂಡದಲ್ಲಿ ಶ್ರೇಯಾಂಕಾ ಕಾಣಿಸಿಕೊಂಡಿಲ್ಲ.

ಶ್ರೇಯಾಂಕಾ ಬದಲಿಗೆ ಆಲ್ರೌಂಡರ್ ಎಂಟ್ರಿ!

ಗಾಯಾಳು ಶ್ರೇಯಾಂಕಾ ಪಾಟೀಲ್ ಅವರ ಬದಲಿಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಪ್ರಮುಖ ಆಲ್ರೌಂಡರ್ ಅನ್ನೇ ಆಯ್ಕೆ ಮಾಡಿಕೊಳ್ಳಲಿದ್ದು, ಅನುಭವಿ ಆಲ್​ರೌಂಡರ್ ಸ್ನೇಹ್ ರಾಣಾ (Sneha Rana) ಅವರನ್ನು ಆಯ್ಕೆ ಮಾಡಿಕೊಳುವ ಸಾಧ್ಯತೆಯಿದೆ. ಕಳೆದ ಬಾರಿ ಗುಜರಾತ್ ಜೈಂಟ್ಸ್ ಪರ ಆಡಿರುವ ಸ್ನೇಹ್ ರಾಣಾ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ ಆರ್​ಸಿಬಿ ತಂಡದ ಮೊದಲ ಪಂದ್ಯದ ವೇಳೆ ಸ್ನೇಹ್ ರಾಣಾ ಡಗೌಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶ್ರೇಯಾಂಕಾ ಬದಲಿಯಾಗಿ ಸ್ನೇಹ್ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿ ಅಗಿದೆ.

ಈ ಸುದ್ದಿಯನ್ನೂ ಓದಿ: WPL ವೇಳಾಪಟ್ಟಿ, ಸಮಯ, ಸ್ಥಳ, ಲೈವ್ ಸ್ಟ್ರೀಮಿಂಗ್‌ನ ಸಂಪೂರ್ಣ ವಿವರ ಇಲ್ಲಿದೆ!

Leave a Comment