RCB vs GG: ಕ್ರಿಕೆಟ್ ಪ್ರಿಯರಿಗೆ ಸಂತೋಷದ ಸುದ್ದಿ ಇವತ್ತು, ಮಹಿಳಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಉಭಯ ತಂಡಗಳು ಮುಖಾಮುಖಿ ಆಗಲಿದ್ದು, ಈ ಪಂದ್ಯವು ಗುಜರಾತ್‌ನ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಕಾದಾಟ ನಡೆಸಲಿವೆ. ಕಳೆದ ಬಾರಿ ಚಾಂಪಿಯನ್ಸ್ ಆಗಿರುವ ಆರ್‌ಸಿಬಿ ಈ ಬಾರಿ ಸಹ ಬಲಿಷ್ಠ ತಂಡದೊಂದಿಗೆ ಸ್ಮೃತಿ ಮಂಧಾನಾ ನಾಯಕತ್ವದಲ್ಲಿ ಕನ್ನಕ್ಕೆ ಇಳಿಯಲಿದೆ. ಮೊದಲ ಪಂದ್ಯದಲ್ಲಿ ಗೆಲುವಿನ ಅಭಿಯಾನವನ್ನು ಆರಂಭಿಸುವ ಗುರಿಯನ್ನು ಹೊಂದಿದೆ. ಹಾಗೂ ಗುಜರಾತ್ ಜೈಂಟ್ಸ್ ತಂಡ ಸಹ ಈ ಮೊದಲ ಗೆಲುವಿನೊಂದಿಗೆ ಆರಂಭಿಸಲು ಸಜ್ಜಾಗಿದೆ.
ಪಂದ್ಯದ ವಿವರ:
ಉದ್ಘಾಟನಾ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಆಶ್ಲೇ ಗಾರ್ಡ್ನರ್ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡಗಳು ಸೆಣಸಾಡಲಿದ್ದು, ಉದ್ಘಾಟನಾ ಪಂದ್ಯವು ಗುಜರಾತ್‌ನ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ (WPL) ನ ಎಲ್ಲಾ ಪಂದ್ಯಗಳು ರಾತ್ರಿ 7.30ಕ್ಕೆ ಪ್ರಾರಂಭವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯುತ್ತದೆ.
ಗುಜರಾತ್ vs ಆರ್‌ಸಿಬಿ ಹೆಡ್ ಟು ಹೆಡ್ ದಾಖಲೆ:
ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಮೊದಲು ಉಭಯ ತಂಡಗಳು ಒಟ್ಟು ಐದು ಬಾರಿ ಮುಖಾಮುಖಿ ಆಗಿದ್ದು, ಇದರಲ್ಲಿ ಆರ್ ಸಿಬಿ 3 ಪಂದ್ಯಗಳನ್ನು ಗೆದ್ದುಕೊಂಡಿದೆ. ಗುಜರಾತ್ ವಿರುದ್ಧ ಗರಿಷ್ಠ 206 ರನ್ ಗಳ ಸ್ಕೋರ್ ದಾಖಲಿಸಿದೆ. ಹಾಗೂ ಗುಜರಾತ್ ತಂಡ 2 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರತ್ ತಂಡ ಗರಿಷ್ಠ 200 ರನ್ ಗಳ ಸ್ಕೋರ್ ದಾಖಲಿಸಿದೆ.
ಇವತ್ತಿನಿಂದ ಆರಂಭವಾಗುವ WPL ವೇಳಾಪಟ್ಟಿ, ಸಮಯ, ಸ್ಥಳ, ಲೈವ್ ಸ್ಟ್ರೀಮಿಂಗ್‌ನ ಸಂಪೂರ್ಣ ವಿವರ ಇಲ್ಲಿದೆ!
ಲೈವ್ ಸ್ಟ್ರೀಮಿಂಗ್ ಎಲ್ಲಿ ನೋಡಬಹುದು?: WPL 2025 RCB vs GG Live Streaming
ಮಹಿಳಾ ಪ್ರೀಮಿಯರ್ ಲೀಗ್ 2025 ನ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೂ ಲೈವ್ ಸ್ಟ್ರೀಮಿಂಗ್ ಡಿಸ್ನಿ+ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿಯೂ ನೇರಪ್ರಸಾರ ಮಾಡಲಾಗುತ್ತದೆ.
ಉಭಯ ತಂಡಗಳ ಸಾಂಭವ್ಯ 11 ಬಳಗ:
RCB ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾ), ಎಲ್ಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ಡ್ಯಾನಿ ವ್ಯಾಟ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (WK), ಕಿಮ್ ಗಾರ್ತ್, ಜಾರ್ಜಿಯಾ ವಾರೆಹಮ್, ಕನಿಕಾ ಅಹುಜಾ, ರೇಣುಕಾ ಸಿಂಗ್ ಠಾಕೂರ್, ನುಝತ್ ಪರ್ವೀನ್.
ಗುಜರಾತ್ ಜೈಂಟ್ಸ್: ಆಶ್ಲೀಗ್ ಗಾರ್ಡನರ್ (ನಾ), ಬೆತ್ ಮೂನಿ, ದಯಾಲನ್ ಹೇಮಲತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಮನ್ನತ್ ಕಶ್ಯಪ್, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಭಾರತಿ ಫುಲ್ಮಾಲಿ, ಸಾಯಾ ಫುಲ್ಮಾಲಿ, ಸಾಯಾ ಫುಲ್ಮಾಲಿ ಡೇನಿಯಲ್ ಗಿಬ್ಸನ್, ಪ್ರಕಾಶಿಕಾ ನಾಯಕ್, ಶಬ್ನಮ್ ಶಕಿಲ್, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್.