ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯ ಕೋರ್ಸ್’ಳ ಜೊತೆಗೆ ಕೌಶಲ ವಿಷಯದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 11,000 ರಿಂದ 17,000 ರೂ. ವರೆಗೆ ಸೆಂಟರ್ ಫಾರ್ ರಿಸರ್ಚ್ ಇನ್ ಸ್ಕಿಮ್ಸ್ ಆಯಂಡ್ ಪಾಲಿಸೀಸ್ ಸಂಸ್ಥೆ ಶಿಷ್ಯ ವೇತನ ನೀಡುತ್ತಿದ್ದು, ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಹರು, ಯಾವ ದಾಖಲೆಗಳು ನೀಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ಅರ್ಹತಾ ಮಾನದಂಡಗಳು:
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಾಮಾನ್ಯ ಕೋರ್ಸ್ಗಳ ಜೊತೆಗೆ ಕೌಶಲ ವಿಷಯ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಒಂದು ವರ್ಷದ (ಎರಡು ಸೆಮಿಸ್ಟರ್) ಪ್ರತಿ ತಿಂಗಳು 11,000 ರಿಂದ 17,000 ರೂ. ಶಿಷ್ಯವೇತನ ಪಡೆಯಬಹುದು.
ಇದೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕೊನೆಯ ಐದು ಮತ್ತು ಆರನೇ ಸೆಮಿಸ್ಟರ್ ನಲ್ಲಿ ಶಿಷ್ಯ ವೇತನದ ಸೌಲಭ್ಯ ಪಡೆಯಬಹುದು.
Graduate Students Scholarship:
14,340 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿ:
ಹತ್ತು ಜನ ನಿವೃತ್ತ ಐಎಎಸ್ ಅಧಿಕಾರಿಗಳು ಸ್ಥಾಪಿಸಿರುವ ‘ಕ್ರಿಸ್ಟ್’ (ಸೆಂಟರ್ ಫಾರ್ ರಿಸರ್ಚ್ ಇನ್ ಸ್ಕಿಮ್ಸ್ ಆಯಂಡ್ ಪಾಲಿಸೀಸ್) ಜೊತೆ ಉನ್ನತ ಶಿಕ್ಷಣದಲ್ಲಿ ಕೌಶಲಾಧಾರಿತ ಕೋರ್ಸ್ಗಳನ್ನು ಪರಿಚಯಿಸುವ ಒಪ್ಪಂದಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಸಹಿ ಹಾಕಿದೆ. ಮೊದಲ ವರ್ಷದಲ್ಲಿ 60 ಕಾಲೇಜುಗಳನ್ನು ಆಯ್ದುಕೊಂಡ 3,600 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿದೆ. ಇನ್ನೂ ಮೂರು ವರ್ಷಗಳಲ್ಲಿ 239 ಕಾಲೇಜುಗಳಿಗೆ ಈ ಯೋಜನೆ ವಿಸ್ತರಿಸುವ ಗುರಿ ಹೊಂದಿದೆ. ಹಾಗೂ 2026-27 ರ ವರ್ಷದ ವೇಳೆಗೆ 14,340 ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಿದೆ.
ಯಾವ ಕೋರ್ಸ್ಗಳಿಗೆ ವಿದ್ಯಾರ್ಥಿ ವೇತನ:
Graduate Students Scholarship: ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ, ಬಿ.ಸಿ.ಎ ಜೊತೆಗೆ ವಿದ್ಯಾರ್ಥಿಗಳು ಕೌಶಲ ವಿಷಯಗಳಾದ ಇ-ಕಾಮರ್ಸ್, ಆಹಾರ ಸರಪಳಿ ನಿರ್ವಹಣೆ, ಹಣಕಾಸು ಸೇವೆ ಮತ್ತು ಜೀವವಿಮೆ, ಎಲೆಕ್ಟ್ರಾನಿಕ್ಸ್, ದತ್ತಾಂಶ ವಿಶ್ಲೇಷಣೆ, ಔಷಧ ಮಾರುಕಟ್ಟೆ ಮತ್ತು ಮಾರಾಟ, ಔಷಧ ತಯಾರಿ ಮತ್ತು ಗುಣಮಟ್ಟ, ಸರಕು ಸಾಗಣೆ ಉದ್ಯಮ, ರಿಟೇಲ್, ಹೆಲ್ತ್ ಕೇರ್, ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ, ಜೀವನ ವಿಜ್ಞಾನ, ಡಿಜಿಟಲ್ ಮಾರುಕಟ್ಟೆ, ಫ್ಯಾಷನ್ ಡಿಸೈನ್, ಬ್ಯಾಂಕಿಂಗ್, ಸಿನಿಮಾ ನಿರ್ಮಾಣ, ಜಾಹೀರಾತು, ಮಾಧ್ಯಮ ಮತ್ತು ಮನರಂಜನೆ, ಮಾಹಿತಿ ತಂತ್ರಜ್ಞಾನ ಕೋರ್ಸ್ಗಳನ್ನು ಒಳಗೊಂಡಿದೆ.
ಯಾವಾಗ ಪ್ರವೇಶ ಪ್ರಾರಂಭ:
ಸಾಮಾನ್ಯ ಕೋರ್ಸ್ಗಳ ಜೊತೆಗೆ ಕೌಶಲ್ಯ ಅಭಿವೃದ್ಧಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದೇ ತಿಂಗಳು 30 ರಿಂದ ಅರ್ಜಿಗಳನ್ನು ಪ್ರಾರಂಭಿಸಲ್ಲಿದೆ. ಆಗಸ್ಟ್ ತಿಂಗಳಿಂದ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಲಿವೆ.