ನಮಸ್ಕಾರ ವಿದ್ಯಾರ್ಥಿ ಮಿತ್ರರೇ ಮತ್ತೊಂದು ಹೊಸ ಲೇಖನದಲ್ಲಿ ನಿಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ಬಡ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ IDFC FIRST Bank MBA Scholarship 2024-26 ನಿಂದ ನೀಡಲಾಗುವ ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆಯಬಹುದು.
ಇತ್ತೀಚಿನ ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣ ಎನ್ನುವುದು ಇನ್ನೂ ಹಲವರಿಗೆ ಗಗನ ಕುಸುಮ ಆಗಿರುತ್ತದೆ. ಅದರಲ್ಲಿಯೂ ಎಂಜಿನಿಯರಿಂಗ್, ಮೆಡಿಕಲ್, ಎಂಬಿಎಯಂತಹ ಉನ್ನತ ಶಿಕ್ಷಣದಲ್ಲಿದಲ್ಲಿನ ದುಬಾರಿ ಫೀಸ್ ಮತ್ತು ಡೊನೇಷನ್ ಕಾರಣದಿಂದ ಬಡ ಮತ್ತು ಮಧ್ಯಮ ವರ್ಗದ ಪೋಷಕರು ಮತ್ತು ವಿದ್ಯಾರ್ಥಿಗಳು ಹಣ ಹೊಂದಿಸಲು ಇಂದಿಗೂ ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದೆ ಬಂದಿರುವ ಐಡಿಎಫ್ಸಿ ಫಸ್ಟ್ ಬ್ಯಾಂಕ್ (IDFC FIRST Bank MBA Scholarship 2024-26) ಬಡ ಮತ್ತು ಪ್ರತಿಭಾವಂತ ಎಂಬಿಎ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 2 ವರ್ಷಕ್ಕೆ 2 ಲಕ್ಷ ರೂ. ನೀಡುತ್ತಿದ್ದು. ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಕೆಳಗಿನ ಮಾಹಿತಿ ಸಂಪೂರ್ಣ ಓದುವ ಮೂಲಕ ಆನ್ಲೈನ್ ಅಪ್ಲೈ ಮಾಡಬಹುದು.
IDFC First Bank MBA scholarship 2024-26:
ಐಡಿಎಫ್ಸಿ ಫಸ್ಟ್ ಬ್ಯಾಂಕ್ ವಿದ್ಯಾರ್ಥಿವೇತನದ ಮುಖ್ಯ ಗುರಿ ಎಂಬಿಎ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ವಿದ್ಯಾರ್ಥಿವೇತನವನ್ನು 2018ರಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆ ಮೂಲಕ ಅರ್ಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಪ್ರತಿ ವರ್ಷ 1 ಲಕ್ಷ ರೂ. ಹಾಗೂ ಒಟ್ಟು ಎರಡು ವರ್ಷಗಳ ವಿದ್ಯಾಭ್ಯಾಸಕ್ಕೆ 2 ಲಕ್ಷ ರೂ. ನೆರವು ಒದಗಿಸಲಾಗುತ್ತದೆ.
ಅರ್ಹತಾ ಮಾನದಂಡಗಳು:
ಭಾರತೀಯ ಪ್ರಜೆ ಆಗಿರಬೇಕು.
ವಿದ್ಯಾರ್ಥಿ ಪೋಷಕರ ವಾರ್ಷಿಕ ಆದಾಯ 6 ಲಕ್ಷ ರೂ. ಮೀರಿರಬಾರದು.
ಎಂಬಿಎ ಕೋರ್ಸ್ನ ಮೊದಲ ವರ್ಷದಲ್ಲಿ ಓದುತ್ತಿರಬೇಕು.
ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್ ಹೊಂದಿರಬೇಕು.
ಅಗತ್ಯ ದಾಖಲೆಗಳು:
ಕಾಲೇಜಿಗೆ ಪ್ರವೇಶ ಪಡೆದಿರುವ ಪುರಾವೆ (ಕಾಲೇಜು ಹೆಸರು, ಅಡ್ಮಿಷನ್ ರಸೀದಿ ಒಳಗೊಂಡಿರಬೇಕು).
ಶುಲ್ಕ ಪಾವತಿಸಿದ ರಸೀದಿ.
ಪದವಿ ತರಗತಿಯ ಅಂಕಪಟ್ಟಿ ಮತ್ತು ಉತ್ತೀರ್ಣರಾದ ಪ್ರಮಾಣಪತ್ರದ ಪ್ರತಿ.
ಆದಾಯ ಪ್ರಮಾಣ ಪತ್ರ.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2024
ಪ್ರಮುಖ ಲಿಂಕ್ಗಳು:
ವೆಬ್ಸೈಟ್ ವಿಳಾಸ: buddy4study.com
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಇತರೆ ಉದ್ಯೋಗ ಮಾಹಿತಿ:
- ಭಾರತೀಯ ಅಂಚೆ ಇಲಾಖೆಯಲ್ಲಿ 44,228 ಹುದ್ದೆಗೆ ಅರ್ಜಿ ಆಹ್ವಾನ
- ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
- ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ನೇಮಕಾತಿ 2024