ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗುತ್ತಿರುವುದರಿಂದ ರಾಜ್ಯದ 14 ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಅದರಲ್ಲಿ ಬಹುತೇಕ 8 ಜಲಾಶಯ ಭರ್ತಿಯಾಗಿವೆ . ಹಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ತುಂಗಭದ್ರಾ, ಕೆಆರ್ಎಸ್, ಹಾರಂಗಿ, ಘಟಪ್ರಭಾ ಜಲಾಶಯಗಳು ಸೇರಿದಂತೆ ವಿವಿಧ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚಾದ ನೀರನ್ನು ಹೊರಗೆ ಹರಿಸಾಲಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮಾಹಿತಿ ಇಲ್ಲಿದೆ.
ಹವಾಮಾನ ವರದಿ:
ಭಾರತೀಯ ಹವಾಮಾನ ಇಲಾಖೆಯು ಮಳೆ ಮುನ್ಸೂಚನೆ ಪ್ರಕಾರ ಇವತ್ತು (ಜುಲೈ 27) ಕರಾವಳಿ ಜಿಲ್ಲೆಗಳು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಿದೆ
Karnataka Dam Water Level:
ಕರ್ನಾಟಕದ ಜಲಾಶಯಗಳು | ಒಟ್ಟು ಸಾಮರ್ಥ್ಯ (TMC) | ಇಂದಿನ ನೀರಿನ ಮಟ್ಟ (TMC) | ಒಳಹರಿವು (ಕ್ಯೂಸೆಕ್ಸ್) | ಹೊರ ಹರಿವು (ಕ್ಯೂಸೆಕ್ಸ್) |
ಆಲಮಟ್ಟಿ ಜಲಾಶಯ | 123.08 | 83.49 | 2,04,098 | 2,66,586 |
ತುಂಗಭದ್ರಾ ಜಲಾಶಯ | 105.79 | 101.73 | 87,766 | 84,149 |
ಮಲಪ್ರಭಾ ಜಲಾಶಯ | 37.73 | 25.46 | 21,606 | 194 |
ಕೆ.ಆರ್.ಎಸ್ | 49.45 | 48.82 | 66,945 | 74,021 |
ಲಿಂಗನಮಕ್ಕಿ ಜಲಾಶಯ | 151.75 | 108.40 | 65,167 | 1,853 |
ಕಬಿನಿ ಜಲಾಶಯ | 19.52 | 18.41 | 19,729 | 19,250 |
ಭದ್ರಾ ಜಲಾಶಯ | 71.54 | 57.54 | 35,318 | 202 |
ಹೇಮಾವತಿ ಜಲಾಶಯ | 37.10 | 35.22 | 52,999 | 63,580 |
ಹಾರಂಗಿ ಜಲಾಶಯ | 8.50 | 7.44 | 9,288 | 13,916 |
ಘಟಪ್ರಭಾ ಜಲಾಶಯ | 51.00 | 46.30 | 33,385 | 26,900 |
ವರಾಹಿ ಜಲಾಶಯ | 31.10 | 14.66 | 7,537 | 00 |
ವಾಣಿವಿಲಾಸ ಸಾಗರ | 30.42 | 17.89 | 00 | 147 |
ಸೂಫಾ | 145.33 | 86.89 | 35,786 | 00 |
ನಾರಾಯಣಪುರ ಜಲಾಶಯ | 33.31 | 26.86 | 2,04,098 | 2,66,586 |