ಆಧಾರ್ ಕಾರ್ಡ್ ನಲ್ಲಿ ಪೋಟೋ, ಹೆಸರು, ವಿಳಾಸ, ತಿದ್ದುಪಡಿ ಮಾಡಲು ಮತ್ತೆ ದಿನಾಂಕ ವಿಸ್ತರಣೆ | Aadhaar Card Update

WhatsApp Group Join Now
Telegram Group Join Now

Aadhaar Card Update: ಭಾರತೀಯರ ಪ್ರಮುಖ ಗುರುತಿನ ಚೀಟಿಯಾದ ಆಧಾರ್ ಕಾರ್ಡ್‌ (Aadhaar Card) ಬಳಕೆದಾರರ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್ ಮಾಡಲು ಡಿಸೆಂಬರ್ 14ರಂದು ಕೊನೆಯ ದಿನವಾಗಿದೆ. ಹಲವರಿಗೆ ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ತಿದ್ದುಪಡಿ ಮಾಡಲು ಸರ್ಕಾರದಿಂದ ಅವಕಾಶವನ್ನು ನೀಡಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಅಪ್ಡೇಟ್‌ ಪ್ರಕ್ರಿಯೆಯನ್ನು ಸರಳವಾಗಿಸಿದ್ದು, 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಹೊಂದಿರುವವರಿಗೆ ತಮ್ಮ ಆಧಾರ ಕಾರ್ಡ್ ನಲ್ಲಿರುವ ಪೋಟೋ ಜೊತೆಗೆ, ಹೆಸರು ಬದಲಾವಣೆ, ಜನ್ಮದಿನಾಂಕ ಬದಲಾವಣೆ, ಫೋಟೋ ಬದಲಾವಣೆ ಅಥವಾ ವಿಳಾಸ ಬದಲಾಯಿಸಲು ಇಚ್ಛಿಸಿದರೆ, mobile number ನೀವು ಅದನ್ನು ಅಪ್ಡೇಟ್ ಮಾಡಬಹುದು.

Aadhaar Card Update

ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ನಿಮ್ಮ ಪೋಟೋ ಇಷ್ಟವಾಗದಿದ್ದರೆ, ಇದೀಗ ಆನ್‌ಲೈನ್ ಮೂಲಕ ಬದಲಾಯಿಸಬಹುದು. ಆಧಾರ್‌ ಕಾರ್ಡ್ ನಲ್ಲಿರುವ ಫೋಟೋವನ್ನು ಸುಲಭವಾಗಿ ಹೊಸ ಫೋಟೋವನ್ನು ಅಪ್‌ಲೋಡ್ ಮಾಡಬಹುದು. ಆಧಾರ್ ಕಾರ್ಡ್ ನಲ್ಲಿನ ಫೋಟೋ ಬದಲಾಯಿಸುವ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ.

ಆಧಾರ್ ಕಾರ್ಡ್ ಫೋಟೋ ಬದಲಾಯಿಸುವುದು ಹೇಗೆ ? :
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ, ಆಧಾರ್ ಕಾರ್ಡ್‌ನಿಂದ ನಿಮ್ಮ ಫೋಟೋವನ್ನು ಬದಲಾಯಿಸಬಹುದು ಅಥವಾ ನವೀಕರಿಸಬಹುದು.ಆದರೆ ಈ ಪ್ರಕ್ರಿಯೆಯನ್ನು ಮನೆಯಿಂದಲೇ ಮಾಡಲು ಸಾದ್ಯವಿಲ್ಲ. ಇದಕ್ಕಾಗಿ ನೀವು ಹತ್ತಿರದ ಆಧಾರ್ ಆನ್‌ಲೈನ್ ಕೇಂದ್ರಕ್ಕೆ ಭೇಟಿ ನೀಡಬೇಕು.

ಪೋಸ್ಟ್​ ಆಫೀಸ್​ ಯೋಜನೆಯಡಿ 10 ವರ್ಷಗಳ ನಂತರ 8 ಲಕ್ಷ ರೂಪಾಯಿಗಳ ಆದಾಯ ರಿಟರ್ನ್ 

ತಿದ್ದುಪಡಿ ಹೇಗೆ ಮಾಡುವುದು?

  1. ಮೊದಲು ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
  2. ಯುಐಡಿಎಐ (UIDAI) ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ/ತಿದ್ದುಪಡಿ/ನವೀಕರಣ ಫಾರ್ಮ್ ಡೌನ್‌ಲೋಡ್ ಮಾಡಿ. ಅಲ್ಲಿ ನೀಡಲಾಗಿರುವ ವಿವರಗಳನ್ನು ಭರ್ತಿ ಮಾಡಿ.
  3. ಆನಂತರ ಆಧಾರ್ ಕಾರ್ಯನಿರ್ವಾಹಕರಿಗೆ ಬಯೋಮೆಟ್ರಿಕ್ ವಿವರಗಳನ್ನು ಸಲ್ಲಿಸಿ.
  4. ಆಧಾರ್ ಕೇಂದ್ರದ ಕಾರ್ಯನಿರ್ವಾಹಕರು ಎಲ್ಲಾ ವಿವರಗಳನ್ನು ಮತ್ತು ಬಯೋಮೆಟ್ರಿಕ್ ಅನ್ನು ಪರಿಶೀಲಿಸುತ್ತಾರೆ.
  5. ಆಮೇಲೆ ನಿಮ್ಮ ಹೊಸ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ಚಿತ್ರವನ್ನು ಆಧಾರ್ ಸಂಖ್ಯೆಯಲ್ಲಿ ಸೇರಿಸಲಾಗುತ್ತದೆ. ನೀವು ಬಯಸಿದಲ್ಲಿ ನಿಮ್ಮ ಲೈವ್ ಫೋಟೋವನ್ನು ಸಹ ಸೇರಿಸಬಹುದು.
  6. ರೂ.100 ಶುಲ್ಕ ಪಾವತಿಸಬೇಕು.
  7. ನಂತರ ಆಧಾರ್ ಕಾರ್ಯನಿರ್ವಾಹಕರು ನಿಮಗೆ ಯುಆರ್‌ಎನ್ ಹೊಂದಿರುವ ಸ್ವೀಕೃತಿ ಸ್ಲಿಪ್ ಅನ್ನು ನೀಡುತ್ತಾರೆ
  8. ನೀವು ಯುಐಡಿಎಐ ಆಧಾರ್ ನವೀಕರಣ ಸ್ಥಿತಿಯನ್ನು ಪರಿಶೀಲಿಸಲು ಒದಗಿಸಲಾದ ಯುಆರ್‌ಎನ್ ಅನ್ನು ಬಳಸಬಹುದು.
  9. ಆನಂತರ 90 ದಿನಗಳಲ್ಲಿ ವಿವರಗಳನ್ನು (Aadhaar Card Update) ನವೀಕರಿಸಿ, ಪೋಸ್ಟ್ ಮೂಲಕ ನಿಮ್ಮ ಮನೆಗೆ ಹೊಸ ಆಧಾರ ಕಾರ್ಡ್ ಬರುತ್ತದೆ.

ಸರ್ಕಾರದಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಅರ್ಜಿ ಆಹ್ವಾನ 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net