Karnataka Labor Card Scholarship: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Labor Welfare Board) ವತಿಯಿಂದ 2024-25ನೇ ಶೈಕ್ಷಣಿಕ ವರ್ಷಕ್ಕೆ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಸರ್ಕಾರದಿಂದ ಸಹಾಯವಾಗುವಂತೆ ಶೈಕ್ಷಣಿಕ ಸಹಾಯಧನವನ್ನು (ವಿದ್ಯಾರ್ಥಿವೇತನ) ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :
ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರಾಗಿರಬೇಕು.
ಪೋಷಕರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೀಡಲಾದ ಕಾರ್ಮಿಕ ಕಾರ್ಡ್ ಹೊಂದಿರಬೇಕು.
ಪೋಷಕರ ಮಾಸಿಕ ಆದಾಯವು 35, 000 ರೂ. ಗಿಂತ ಕಡಿಮೆ ಅಥವಾ ಸಮನಾಗಿರಬೇಕು.
ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. ಹಾಗೂ SC/ST ವಿದ್ಯಾರ್ಥಿಗಳು 45% ಅಂಕಗಳನ್ನು ಪಡೆಯಬೇಕು.
Karnataka Labor Card Scholarship
- 1 ರಿಂದ 4 ನೇ ತರಗತಿ: 1,100 ರೂ.
- 5 ರಿಂದ 8 ನೇ ತರಗತಿ: 1,250 ರೂ.
- 9 ರಿಂದ 10 ನೇ ತರಗತಿ: 3,000 ರೂ.
- ಪ್ರಥಮ ಮತ್ತು ದ್ವೀತಿಯ ಪಿಯುಸಿ: 4,600 ರೂ.
- ಪದವಿ: 6,000 ರೂ.
- ಬಿಇ/ ಬಿ.ಟೆಕ್: 10,000 ರೂ.
- ಸ್ನಾತಕೋತ್ತರ ಪದವಿ: 10,000 ರೂ.
- ಪಾಲಿಟೆಕ್ನಿಕ್, ಡಿಪ್ಲೋಮಾ, ಐ.ಟಿ.ಐ: 4,600 ರೂ.
- BSC ನರ್ಸಿಂಗ್, ಪ್ಯಾರಾಮೆಡಿಕಲ್: 10,000 ರೂ.
- ಬಿ.ಎಡ್: 6,000 ರೂ.
- ವೈದ್ಯಕೀಯ: 11,000 ರೂ.
- LLB, LLM: 10,000 ರೂ.
- ಡಿ.ಎಡ್: 4,600 ರೂ.
- ಪಿ. ಎಚ್ ಡಿ, ಎಂಫಿಲ್ : 11,000 ರೂ.
ಅರ್ಜಿ ಸಲ್ಲಿಸುವ ವಿಧಾನ:
Karnataka Labor Card Scholarship ಎಸ್ ಎಸ್ ಪಿ (SSP) ವೆಬ್‌ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಹೊಸ ವಿದ್ಯಾರ್ಥಿಗಳು ಮಾತ್ರ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ ನ ಮುಖಾಂತರ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: PUC ಪಾಸಾದ ವಿದ್ಯಾರ್ಥಿಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ
ಪ್ರಮುಖ ದಿನಾಂಕ ಮತ್ತು ಅರ್ಜಿ ಸಲ್ಲಿಸಲು ಲಿಂಕ್:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30, 2024
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ : kbocwwb.karnataka.gov.in/register ಅಥವಾ klwbapps.karnataka.gov.in
ಇದನ್ನೂ ಓದಿ: PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 20,000 ರೂ. ಸ್ಕಾಲರ್‌ಶಿಪ್