Vivo X200 Series Global Launch: ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ಪ್ರಮುಖ ಸ್ಮಾರ್ಟ್ಫೋನ್ ಕಂಪನಿಯಾದ ವಿವೋ (Vivo) ತನ್ನ ಪ್ರಮುಖ ಸರಣಿಯಾದ Vivo X200 ಅನ್ನು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ತಿಂಗಳ ಬಳಿಕ ವಿವೋ ಎಕ್ಸ್200 ಸಿರೀಸ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ. ಸದ್ಯದಲ್ಲಿಯೇ ಮಲೇಷಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ವಿವೋ ಕಂಪನಿಯು ನೂತನ ಎಕ್ಸ್ 200 ಸಿರೀಸ್ನಲ್ಲಿ ಮೂರು ಮಾಡೆಲ್ ಮೊಬೈಲ್ಗಳನ್ನು Vivo X200, X200 Pro, ಮತ್ತು X200 Pro Mini, ಒಳಗೊಂಡಿದೆ. ಇದರಲ್ಲಿ ಜೀಸ್ ಆಫ್ಟಿಕ್ಸ್ ಕೋ-ಇಂಜನಿರ್ಡ್ ಕ್ಯಾಮೆರಾ ಸಿಸ್ಟಮ್ ಅಳವಡಿಸಿದೆ. ವಿವೋ ಎಕ್ಸ್ 200 ಮೂರು ಮಾದರಿಗಳು ಈ ತಿಂಗಳ ಕೊನೆಯಲ್ಲಿ ಅಥವಾ ಡಿಸೆಂಬರ್ ಮೊದಲನೇ ವಾರ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ. ಅವುಗಳ ಬೆಲೆ ಸೇರಿದಂತೆ ಪ್ರತಿ ಮಾದರಿಯ ಪ್ರಮುಖ ವೈಶಿಷ್ಟ್ಯಗಳು ಕುರಿತಾದ ಮಾಹಿತಿ ಇಲ್ಲಿದೆ.
ವಿವೋ ಎಕ್ಸ್200 ಸಿರೀಸ್ ಮಾಡೆಲ್ಗಳು:
Vivo X200
ಸ್ಟ್ಯಾಂಡರ್ಡ್ Vivo X200 ಮಾದರಿಯು 6.67-ಇಂಚಿನ 10-ಬಿಟ್ OLED LTPS ಕ್ವಾಡ್-ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಿಂದ ನಡೆಸಲ್ಪಡುವ Vivo X200 ಗೇಮಿಂಗ್ ಮತ್ತು ಬಹುಕಾರ್ಯಕಗಳ ಕಾರ್ಯಕ್ಷಮತೆಯನ್ನು ಹೊಂದಿದೆ.
ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮೂರು ಶಕ್ತಿಶಾಲಿ 50MP ಲೆನ್ಸ್‌ಗಳನ್ನು ಒಳಗೊಂಡಿದ್ದು. 32 MP ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವೀಡಿಯೊ ಕರೆಗಳಿಗೆ ಸೂಕ್ತವಾಗಿದೆ. Vivo X200 ನ ಬ್ಯಾಟರಿ ಬಗ್ಗೆ ಮತ್ತೊಂದು ಪ್ರಮುಖ ಅಂಶವಾಗಿದೆ, ಏಕೆಂದರೆ ಇದು 5,800mAh ಬ್ಯಾಟರಿಯೊಂದಿಗೆ ಬರುತ್ತದೆ, ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಪಡೆಯಬಹುದು.
Vivo X200 Pro ಮತ್ತು Vivo X200 Pro:
X200 Pro Mini ನ ಕ್ಯಾಮೆರಾ ಸಹ ಆಕರ್ಷಕವಾಗಿದೆ. ಇದು 50MP LYT818 ಮುಖ್ಯ ಕ್ಯಾಮರಾ, 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 100x ಡಿಜಿಟಲ್ ಜೂಮ್ ಸಾಮರ್ಥ್ಯವನ್ನು ಒಳಗೊಂಡಿದೆ. ಮೊತ್ತೊಂದೆಡೆ ವಿವೋ ಎಕ್ಸ್200 ಪ್ರೋ, ಎಕ್ಸ್200 ಪ್ರೋ ಮಿನಿ ಕ್ರಮವಾಗಿ 6,000mAh, 5,800mAh ಬ್ಯಾಟರಿಯನ್ನು ಒಳಗೊಂಡಿದೆ. ಇವು 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ (X200 Pro Mini) ಎರಡನ್ನೂ ಸಪೋರ್ಟ್ ಮಾಡುತ್ತವೆ.
ವಿವೋ ಎಕ್ಸ್200 ಸಿರೀಸ್ ವಿಶೇಷತೆಗಳು: ಅಕ್ಟೋಬರ್ನಲ್ಲಿ ಚೈನಾದಲ್ಲಿ ವಿವೋ ಎಕ್ಸ್200 ಸಿರೀಸ್ 12ಜಿಬಿ+256ಜಿಬಿ ಸ್ಟೋರೇಜ್ ವೆರಿಯಂಟ್ ಸಿಎನ್ವೈ 4,300 (ಸುಮಾರು 51 ಸಾವಿರ) ಆರಂಭಿಕ ದರದಲ್ಲಿ ಲಾಚ್ ಆಯಿತು.
ಮೂರು ಮಾದರಿಯ ವಿಶೇಷತೆಗಳು:
ವಿವೋ ಎಕ್ಸ್200 ಲೈನ್ಅಪ್ನಲ್ಲಿನ ಎಲ್ಲ ಮಾಡೆಲ್ಗಳು MediaTek Dimensity 9400 ಪ್ರೊಸೆಸರ್ ಅನ್ನು ಒಳಗೊಂಡಿದ್ದು. ವಿವೋ ಎಕ್ಸ್200, ವಿವೋ ಎಕ್ಸ್200 ಪ್ರೋ, ವಿವೋ ಎಕ್ಸ್200 ಪ್ರೋ ಮಿನಿ ಮಾಡೆಲ್ಗಳು ಟೈಟಾನಿಯಂ ಮತ್ತು ಟೈಟಾನಿಯಂ ಗ್ರೀನ್ ಕಲರ್ ಆಪ್ಷನ್ಗಳು ಹೊಂದಿವೆ.
Vivo X200 ಸರಣಿ ಬೆಲೆ
Vivo 200 12GB+256GB ರೂಪಾಂತರಕ್ಕಾಗಿ 4,299 CNY (ಅಂದಾಜು ₹51,000) ನಿಂದ ಪ್ರಾರಂಭವಾಗುತ್ತದೆ. ಇತರ ರೂಪಾಂತರಗಳು ಸೇರಿವೆ: 12GB+512GB: 4,699 CNY (₹55,700 ಅಂದಾಜು) 16GB+512GB: 4,999 CNY (₹59,300 ಅಂದಾಜು) 16GB+1TB: 5,499 CNY (₹65,300, ಪ್ರಾರಂಭದ 900 CNY ಮೂಲ ರೂಪಾಂತರಕ್ಕೆ (ಅಂದಾಜು ₹62,800) Vivo X200 Pro Mini 12GB+256GB ಆವೃತ್ತಿಗೆ 4,699 CNY (ಅಂದಾಜು ₹55,700) ರಿಂದ ಪ್ರಾರಂಭವಾಗುತ್ತದೆ ಮತ್ತು 16GB+1TB ಟಾಪ್-ಎಂಡ್ ರೂಪಾಂತರಕ್ಕಾಗಿ 5,799 CNY (ಅಂದಾಜು ₹68,800) ವರೆಗೆ ಹೋಗುತ್ತದೆ.