ರಸಗೊಬ್ಬರ ಮತ್ತು ರಾಸಾಯನಿಕ ಉತ್ಪಾದನಾ ಕಂಪನಿ ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಕೌಂಟ್ಸ್ ಎಸ್ಎಕ್ಯುಟಿವ್, ಟೆಕ್ನಿಷಿಯನ್ ಅಪ್ರೆಂಟಿಸ್ (ಕೆಮಿಕಲ್), ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್), ಅಟೆಂಡೆಂಟ್ ಆಪರೇಟರ್ (Apprentice) ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿಮಿಟೆಡ್ (RCF) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಹುದ್ದೆಗಳಿವೆ, ವೇತನ ಎಷ್ಟು, ವಯೋಮಿತಿ ಏನು, ವಿದ್ಯಾರ್ಹತೆ ಏನಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಸೇರಿದಂತೆ ವಿವಿಧ ವಿವರವನ್ನು ಕೆಳಗೆ ನೀಡಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 378
ಹುದ್ದೆಗಳ ಹೆಸರು: ಅಕೌಂಟ್ ಎಕ್ಸಿಕ್ಯೂಟಿವ್, ಸೆಕ್ರೇಟರಿಯಲ್ ಅಸಿಸ್ಟಂಟ್.
ಉದ್ಯೋಗದ ಸ್ಥಳ: ಮುಂಬೈ (ಮಹಾರಾಷ್ಟ್ರ)
RCF Recruitment 2024 ಹುದ್ದೆಗಳ ವಿವರ:
ಅಕೌಂಟ್ಸ್ ಎಕ್ಸಿಕ್ಯೂಟಿವ್: 51
ಸೆಕ್ರೆಟರಿಯಲ್ ಅಸಿಸ್ಟೆಂಟ್: 96
ನೇಮಕಾತಿ ಎಕ್ಸಿಕ್ಯೂಟಿವ್ (ಎಚ್ಆರ್): 35
ಟೆಕ್ನಿಷಿಯನ್ ಅಪ್ರೆಂಟಿಸ್ (ಕೆಮಿಕಲ್): 20
ಟೆಕ್ನಿಷಿಯನ್ ಅಪ್ರೆಂಟಿಸ್ (ಸಿವಿಲ್): 14
ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್): 06
ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್): 10
ಟೆಕ್ನಿಷಿಯನ್ ಅಪ್ರೆಂಟಿಸ್ (ಇನ್ಸ್ಟ್ರುಮೆಂಟೇಶನ್):20
ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್): 20
ಅಟೆಂಡೆಂಟ್ ಆಪರೇಟರ್: 74
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್: 03
ಪ್ರಯೋಗಾಲಯ ಸಹಾಯಕ: 14
ಬಾಯ್ಲರ್ ಅಟೆಂಡೆಂಟ್: 03
ಎಲೆಕ್ಟ್ರಿಷಿಯನ್: 04
ತೋಟಗಾರಿಕೆ ಸಹಾಯಕ: 06
ಮೆಡಿಕಲ್ ಲ್ಯಾಬ್ ಟೆಕ್ನಿಶಿಯನ್: 02
ಶೈಕ್ಷಣಿಕ ಅರ್ಹತೆ:
ಅಕೌಂಟ್ ಎಕ್ಸಿಕ್ಯೂಟಿವ್: ಬಿ.ಕಾಮ್, ಬಿಬಿಎ, ಪದವಿ.
ಸೆಕ್ರೇಟರಿಯಲ್ ಅಸಿಸ್ಟಂಟ್, ನೇಮಕಾತಿ ಎಕ್ಸಿಕ್ಯೂಟಿವ್ (ಎಚ್ಆರ್): ಪದವಿ
ಟೆಕ್ನಿಷಿಯನ್ ಅಪ್ರೆಂಟಿಸ್ ಡಿಪ್ಲೊಮ ಮೆಕ್ಯಾನಿಕಲ್ / ಕೆಮಿಕಲ್ / ಸಿವಿಲ್ / ಕಂಪ್ಯೂಟರ್ / ಇಲೆಕ್ಟ್ರಿಕಲ್, ಅಟೆಂಡಂಟ್ ಆಪರೇಟರ್ ಕೆಮಿಕಲ್ ಪ್ಲಾಂಟ್, ಬಾಯ್ಲರ್ ಅಟೆಂಡಂಟ್: ಈ ಎಲ್ಲಾ ಅನುಗುಣವಾಗಿ ಡಿಪ್ಲೊಮಾ ಪದವಿಯನ್ನು ಪಡೆದಿರಬೇಕು.
ಹಾರ್ಟಿಕಲ್ಚರ್ ಅಸಿಸ್ಟಂಟ್, ಲ್ಯಾಬೋರೇಟರಿ ಅಸಿಸ್ಟಂಟ್, ಮೆಡಿಕಲ್ ಲ್ಯಾಬೋರೇಟರಿ ಟೆಕ್ನೀಷಿಯನ್ ಪೆಥಾಲಜಿ : ದ್ವೀತಿಯ ಪಿಯುಸಿ ಪಾಸಾಗಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಆಗಿರಬೇಕು. ಮತ್ತು ಗರಿಷ್ಠ 25 ವರ್ಷದೊಳಗೆ ಇರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷ
RCF Recruitment 2024 ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 7,000 ರಿಂದ 9,000 ರೂ. ವೇತನ ಪಡೆಯುತ್ತಾರೆ.
ಅರ್ಜಿ ಶುಲ್ಕ:
ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 10 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಡಿಸೆಂಬರ್ 2024
RCF Recruitment 2024 ಪ್ರಮುಖ ಲಿಂಕ್ಗಳು:
ಅಧಿಸೂಚನೆ ಓದಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: rcfltd.com
ಇದನ್ನೂ ಓದಿ: ಪದವಿ ಪಾಸಾದವರಿಗೆ KSRLPS ನಲ್ಲಿ ಉದ್ಯೋಗ