Marriage Assistane Scheme : ರಾಜ್ಯ ಸರ್ಕಾರದಿಂದ ಮದುವೆಗೆ 60,000 ರೂ. ಸಹಾಯಧನ ಪಡೆಯಲು ಅರ್ಜಿ ಆಹ್ವಾನ.!

WhatsApp Group Join Now
Telegram Group Join Now

Labour Card Marriage Assistane Scheme: ರಾಜ್ಯ ಸರ್ಕಾರವು ನೋಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದ್ದು ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮದುವೆ ಅಥವಾ ಕಾರ್ಮಿಕರ ಮಕ್ಕಳ ಮದುವೆಗೆ ಮಂಡಳಿಯಿಂದ ಸಹಾಯಧನ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕಾರ್ಮಿಕ ಇಲಾಖೆಯಿಂದ ಮದುವೆಗೆ ಸಹಾಯಧನ ಅರ್ಜಿ ಆಹ್ವಾನ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಯಾರೆಲ್ಲ ಅರ್ಹರು?, ಅರ್ಜಿ ಸಲ್ಲಿಸುವ ಹೇಗೆ ಅರ್ಜಿ ಸಲ್ಲಿಸಲು ದಾಖಲೆಗಳೇನ್ನು ಬೇಕು, ಈ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

ಯೋಜನೆ ಪ್ರಯೋಜನಗಳು:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕಕರ ಕಲ್ಯಾಣ ಮಂಡಳಿಯು (Marriage Assistane Scheme) ನೋಂದಾಯಿತ ಕಾರ್ಮಿಕರ ಮೊದಲನೆ ಮದುವೆಗೆ ಅಥವಾ ಅವನ / ಅವಳ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.60,000/- ಗಳನ್ನೂ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು.?
ವರ ಮತ್ತು ವಧುವಿನ ಆಧಾರ್ ಕಾರ್ಡ್
ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
ಉದ್ಯೋಗ ದೃಡೀಕರಣ ಪತ್ರ
ಮದುವೆಯ ಆಮಂತ್ರಣ ಪತ್ರ
ಬ್ಯಾಂಕ್ ವಿವರಗಳು
ರೇಷನ್ ಕಾರ್ಡ್
ಮ್ಯಾರೇಜ್ ಸರ್ಟಿಫಿಕೇಟ್
ಮದುವೆ ಕರ್ನಾಟದ ಹೊರಗೆ ನಡೆದಿದ್ದಲ್ಲಿ ಅಫಿಡವಿಟ್ ಸಲ್ಲಿಸುವುದು

ಅರ್ಜಿ ಸಲ್ಲಿಸಲು ಪ್ರಮುಖ ಸೂಚನೆಗಳು:

  • ಕಾರ್ಮಿಕರು ಮದುವೆಯ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
  • ಕಟ್ಟಡ ಕಾರ್ಮಿಕನ ಮಗ/ ಮಗಳು ಮದುವೆ ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯೋಮಿತಿಯನ್ನು ಹೊಂದಿರಬೇಕು.
  • ವಿವಾಹ ಜೋಡಿ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
  • ಮದುವೆ ಆಗಿರುವ ದಿನಾಂಕದಿಂದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
  • ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.

Marriage Assistane Scheme ಅರ್ಜಿ ಸಲ್ಲಿಸುವುದು ಹೇಗೆ..?

ಅರ್ಜಿದಾರರು ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಂಡು APPLY NOW ಲಿಂಕ್‌ ಮೇಲೆ ಕ್ಲಿಕ್ ಮಾಡಿ. ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ:
ಕಾರ್ಮಿಕ ಇಲಾಖೆ ಸಹಾಯವಾಣಿ ಸಂಖ್ಯೆ: 155214
ವೆಬ್‌ಸೈಟ್ ವಿಳಾಸ: kbocwwb.karnataka.gov.in
ಆನ್‌ಲೈನ್‌ ಅರ್ಜಿ ಸಲ್ಲಿಸಲು ಲಿಂಕ್‌: ಇಲ್ಲಿ ಕ್ಲಿಕ್ ಮಾಡಿ

 ಇದನ್ನೂ ಓದಿ: ಶೇ 90% ಸಹಾಯಧನದಲ್ಲಿ ಮಿನಿ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ

ಇದನ್ನೂ ಓದಿ: ಸರ್ಕಾರದಿಂದ ಸ್ವಾವಲಂಬಿ ಸಾರಥಿ ಫುಡ್‌ ಕಾರ್ಡ್‌ ಪಡೆಯಲು 4 ಲಕ್ಷ ರೂ. ಸಹಾಯಧನಕ್ಕೆ ಅರ್ಜಿ ಆಹ್ವಾನ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net