ಹತ್ತನೇ ತರಗತಿ (SSLC) ಪಾಸಾಗಿ ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದು. ಭಾರತೀಯ ಅಂಚೆ ಇಲಾಖೆ (India Post Recruitment 2025) ಯಲ್ಲಿ ಖಾಲಿ ಇರುವ ಸ್ಟಾಫ್ ಕಾರ್ ಡ್ರೈವರ್ (Staff Car Driver) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜ ಆಹ್ವಾನಿಸಲಾಗಿದೆ.
ಇಲಾಖೆ: ಭಾರತೀಯ ಅಂಚೆ ಇಲಾಖೆ
ಒಟ್ಟು ಹುದ್ದೆಗಳ ಸಂಖ್ಯೆ: 25
ಹುದ್ದೆಗಳ ಹೆಸರು: ಸ್ಟಾಫ್ ಕಾರ್ ಡ್ರೈವರ್
India Post Recruitment 2025 ಹುದ್ದೆಗಳ ವಿವರ:
ಮಧ್ಯ ಪ್ರದೇಶದಲ್ಲಿ (Central Region) : 01
ಎಂಎಂಎಸ್ ಚೆನ್ನೈನಲ್ಲಿ: 15
ದಕ್ಷಿಣ ಪ್ರದೇಶದಲ್ಲಿ (Southern Region): 04
ಪಶ್ಚಿಮ ಪ್ರದೇಶದಲ್ಲಿ (Western Region): 05
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ 10 ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಜೊತೆಗೆ ಅಭ್ಯರ್ಥಿಯು ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಹಾಗೂ ಕನಿಷ್ಠ 03 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು.
ವಯಸ್ಸಿನ ಮಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಗರಿಷ್ಠ ವಯಸ್ಸು 56 ವರ್ಷದೊಳಗೆ ಇರಬೇಕು.
ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (ಸಿಪಿಸಿ) ಪ್ರಕಾರ ಲೆವೆಲ್ 2 ವೇತನ ಶ್ರೇಣಿಯಲ್ಲಿ ಪ್ರತಿ ತಿಂಗಳು 19,900 ರೂ. ಸಂಬಳ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ದಿ ಸೀನಿಯರ್ ಮ್ಯಾನೇಜರ್, ಮೇಲ್ ಮೋಟಾರ್ ಸರ್ವಿಸ್, ನಂ. ಗೆ ಕಳುಹಿಸಬೇಕು. ವಿಳಾಸ: 37, ಗ್ರೀಮ್ಸ್ ರಸ್ತೆ, ಚೆನ್ನೈ – 600 006. ಇಂಡಿಯಾ.
India Post Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 10 ಜನವರಿ, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 8, 2025
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಮತ್ತು ಅರ್ಜಿ ಫಾರ್ಮ್ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಲಿಂಕ್: indiapost.gov.in
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1036 ಹುದ್ದೆಗಳ ನೇಮಕಾತಿ ಪಿಯುಸಿ, ಪದವಿ ಪಾಸಾದವರು ಅರ್ಜಿ ಸಲ್ಲಿಸಿ
ಇದನ್ನೂ ಓದಿ: ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ SSLC, PUC ಪಾಸಾದವರು ಅರ್ಜಿ ಸಲ್ಲಿಸಿ!