Hero Splendor Plus : ಹೊಸ ಅವತಾರದಲ್ಲಿ ಬಡವರ ಬಂಡಿ ಶೀಘ್ರ ಬಿಡುಗಡೆ 70KM ಮೈಲೇಜ್

WhatsApp Group Join Now
Telegram Group Join Now

2025 Hero Splendor Plus With Disc Brake Coming Soon: ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ದ್ವಿಚಕ್ರ ವಾಹನವಾಗಿರುವ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) 2025 ರಲ್ಲಿ ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಬಡವರ, ರೈತರ ಮತ್ತು ಮಧ್ಯಮ ವರ್ಗದವರ ನೆಚ್ಚಿನ ಮೋಟಾರ್‌ಸೈಕಲ್ ಎಂದೇ ಹೆಸರುವಾಸಿ ಯಾಗಿರುವ, ‘ಹೀರೋ ಸ್ಪ್ಲೆಂಡರ್ ಪ್ಲಸ್’ ಮತಷ್ಟು ನವೀಕರಣಗಳೊಂದಿ, ಅತಿ ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

2025ರ ಹೊಸ ‘ಹೀರೋ ಸ್ಪ್ಲೆಂಡರ್ ಪ್ಲಸ್’ ಬೈಕ್‌ ನೂತನ ಮಾಡೆಲ್‌ ನೊಂದಿಗೆ ದೇಶಾದ್ಯಂತ ಕಂಪನಿಯ ವಿವಿಧ ಡೀಲರ್‌ಶಿಪ್‌ ಗಳಿಗೂ ತಲುಪಿಸಲಾಗಿದೆ ಎಂದು ವರದಿಯಾಗಿದೆ. ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಹೊಸ ‘ಸ್ಪ್ಲೆಂಡರ್ ಪ್ಲಸ್’ ಮೋಟಾರ್‌ಸೈಕಲ್‌ ಎರಡು ಹೊಸ ಬಣ್ಣ ಆಯ್ಕೆಗಳೊಂದಿಗೆ ಬರಲಿವೆ ಎಂದು ಹೇಳಲಾಗಿದೆ. ಹಾಗೂ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್‌ನಲ್ಲಿರುವ ದೊಡ್ಡ ಬದಲಾವಣೆಯೆಂದರೆ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್‌ ಮಾಡೆಲ್‌ನಂತೆ ಮುಂಭಾಗದಲ್ಲಿ (ಫ್ರಂಟ್) ಡಿಸ್ಕ್ ಬ್ರೇಕ್. ಹಾಗೂ ಹಿಂಭಾಗ (ರೇರ್) ಸಾಮಾನ್ಯ ಡ್ರಮ್ ಬ್ರೇಕ್ ಸೆಟಪ್‌ನ್ನು ಮೊದಲಿನಂತೆ ಒಳಗೊಂಡಿರಲಿದೆ. ಆದರೆ ಈ ಎಂಜಿನ್‌ನ್ನು ಒಬಿಡಿ 2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಿರಬಹುದು ಎಂದು ಎನ್ನಲಾಗಿದೆ. ಇದಲ್ಲದೆ ಈ ಮಾಡೆಲ್‌ನಲ್ಲಿ ಎರಡು ಹೊಸ ಬಣ್ಣಗಳ ಆಯ್ಕೆಗಳು ಸಹ ಲಭ್ಯವಿರುತ್ತವೆ ಎಂದು ಹೇಳಲಾಗಿದೆ.

ಸ್ಪ್ಲೆಂಡರ್ ಪ್ಲಸ್’ ಬೆಲೆ ಮತ್ತು ಎಂಜಿನ್ ಸಾಮಥ್ಯ೯ ?

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ‘ಹೀರೋ ಸ್ಪ್ಲೆಂಡರ್’ ಬೈಕ್ ಹಲವು ವಿಧದ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಅವುಗಳಲ್ಲಿ ‘ಸ್ಪ್ಲೆಂಡರ್ ಪ್ಲಸ್’ ಸ್ಟ್ಯಾಂಡರ್ಡ್ ಮಾಡೆಲ್ ನ ಮೂಲ ಬೆಲೆ ಬಂದು ರೂ. 77,176 ರಿಂದ ರೂ.79,926 (ಎಕ್ಸ್-ಶೋರೂಂ) ಹೊಂದಿದೆ. ಹಾಗೂ 97.2 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಹೊಂದಿದು, ಈ ಬೈಕ್ 70 ಕೆಎಂಪಿಎಲ್‌ (kMPL) ವರೆಗೂ ಮೈಲೇಜ್ ಕೊಡುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್:
2025ರ ಹೊಸ ‘ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್’ ಬೈಕ್ ಕನಿಷ್ಠ ರೂ.81,001 ಮತ್ತು ಗರಿಷ್ಠ ರೂ.84,301 (ಎಕ್ಸ್ ಶೋರೂಂ) ದರವನ್ನು ಒಳಗೊಂಡಿರುತ್ತದೆ. ಇದು 97.2 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, ಸ್ಟ್ಯಾಂಡರ್ಡ್ ಮಾಡೆಲ್‌ನಂತೆಯೇ 70 KMವರೆಗೆ ಮೈಲೇಜ್ ಕೊಡುತ್ತದೆ.

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ :
2025ರ ‘ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್’ ಬೈಕ್ ನ ಮೂಲ ಬೆಲೆ ಬಂದು ರೂ.84,050 ದಿಂದ ರೂ.88,050 (ಎಕ್ಸ್-ಶೋರೂಂ) ಹೊಂದಿದು. ಇದು 124.7 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 69 KM ವರೆಗೂ ಮೈಲೇಜ್ ನೀಡುವ ಸಾಮಥ್ಯ೯ ಹೊಂದಿದೆ.

Leave a Comment