BSNL 90-day plan: ಭಾರತ ಸಕಾ೯ರ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) 4G ನೆಟ್‌ವರ್ಕ್ ವಿಸ್ತರಣೆಯೊಂದಿಗೆ ಗ್ರಾಹಕರಿಗೆ ಕಡಿಮೆ ಬೆಲೆಯ ರಿಚಾಜ್೯ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. ಕಡಿಮೆ ಬೆಲೆಯಲ್ಲಿ 90 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಜಿಯೋ ಮತ್ತು ಏರ್‌ಟೆಲ್‌ಗೆ ಪೈಪೋಟಿ ನೀಡಲು ಬೀಡುಗಡೆಮಾಡಿದೆ.
ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ವು ದೇಶದ ಎಲ್ಲಾ ಭಾಗದಲ್ಲಿಯೂ 4G ನೆಟ್‌ವರ್ಕ್ ಅಳವಡಿಕೆ ಜೊತೆಯಲ್ಲಿಯೇ ಅತೀ ವೇಗದಲ್ಲೇ ಜಿಯೋ ಮತ್ತು ಏರ್‌ಟೆಲ್‌ಗೆ ಸ್ಪಧಿ೯ ಆಗುತ್ತಿದೆ. ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಬಜೆಟ್ ಫ್ರಂಡ್ಲಿ ರೀಚಾರ್ಜ್ ಪ್ಲಾನ್ ಗಳಿಂದ ಬಳಕೆದಾರರನ್ನು ತನ್ನತ ಸೆಳೆಯತ್ತಿದೆ. 2024ರ ಬೆಲೆ ಏರಿಕೆ ನಂತರ ಎಲ್ಲಾ ಸೀಮ್ ಬಳಕೆದಾರರು ಬಹುತೇಕ ತಮ್ಮ ಸೆಕೆಂಡರಿ ಸಿಮ್ ಸಂಖ್ಯೆಯನ್ನು ಎಂಎನ್‌ಪಿ ಮೂಲಕ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿಕೊಂಡಿದ್ದಾರೆ. ಇದೀಗ ಬಿಎಸ್‌ಎನ್‌ಎಲ್ ಅತಿ ಕಡಿಮೆ ಬೆಲೆಗೆ 90 ದಿನದ ಪ್ರಿಪೇಯ್ಡ್ ಪ್ಲಾನ್ ಘೋಷಣೆ ಮಾಡಿದೆ. ಈ ಹೊಸ ಪ್ಲಾನ್ ಇತರೆ ಕಂಪನಿಗಳಿಗೆ ಹೋಲಿಸಿದದರೆ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ.
90 ದಿನ ವ್ಯಾಲಿಡಿಟಿ ಪ್ಲಾನ್
BSNL India ನೀಡುತ್ತಿರುವ 90 ದಿನ ವ್ಯಾಲಿಡಿಟಿ ಪ್ಲಾನ್ ಬೆಲೆ ಕೇವಲ 411 ರೂ ಆಗಿದ್ದು. ಈ 90 ದಿನ ಪ್ಲಾನ್‌ನಲ್ಲಿ (BSNL 90-day plan) ಗ್ರಾಹಕರಿಗೆ ಪ್ರತಿದಿನ 4G 2GB ಡೇಟಾ ಸಿಗಲಿದೆ. ಬೇರೆ ಟೆಲಿಕಾಂ ಕಂಪನಿಗಳು ಇಷ್ಟೊಂದು ಕಡಿಮೆ ಬೆಲೆಗೆ ದೀರ್ಘಾವಧಿಯ ಬಜೆಟ್ ಫ್ರೆಂಡ್ಲಿ ಪ್ಲಾನ್ ಸಿಗುವುದಿಲ್ಲ. ಈ ಪ್ಲಾನ್ ಡೇಟಾ ವೋಚರ್ ಪ್ಲಾನ್ ಆಗಿದ್ದು, ಇದರಲ್ಲಿ ಯಾವುದೇ ರೀತಿಯ ಅನ್‌ಲಿಮಿಟೆಡ್ ಕಾಲಿಂಗ್ ಆಯ್ಕೆಯನ್ನು ಗ್ರಾಹಕರಿಗೆ ಸಿಗುವುದಿಲ್ಲ. ಗ್ರಾಹಕರು ಈ ಡೇಟಾ ಪ್ಲಾನ್ ಜೊತೆಯಲ್ಲಿ ಅನ್‌ಲಿಮಿಟೆಡ್ ಕಾಲಿಂಗ್ ಬೇಕಾದ್ರೆ ಇನ್ನೊಂದು ಪ್ಲಾನ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. 90 ದಿನಗಳ 411 ರೂಪಾಯಿ ಪ್ಲಾನ್‌ನಲ್ಲಿ ಗ್ರಾಹಕರಿಗೆ 180GB ಡೇಟಾ ಸಿಗಲಿದೆ. ಕಾಲಿಂಗ್‌ಗಾಗಿ ಕಡಿಮೆ ಬೆಲೆಯ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡು, ಈ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.

365 ದಿನ ವ್ಯಾಲಿಡಿಟಿ ಪ್ಲಾನ್
ಇತ್ತೀಚೆಗಷ್ಟೇ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ 365 ದಿನದ (ವಾಷ೯ದ) ಪ್ಲಾನ್ ಬಿಡುಗಡೆ ಮಾಡಿತ್ತು. ಇದರಲ್ಲಿ 1,515 ರೂ. ರೀಚಾರ್ಜ್ ಮಾಡಿಸಿದರೆ ಒಂದು ವರ್ಷದವರಗೆ ಯಾವುದೇ ರಿಚಾಜ್೯ ಪ್ಲಾನ್ ಆಕ್ಟಿವೇಟ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ಈ ಪ್ಲಾನ್ ನಲ್ಲಿ ಅನ್‌ಲಿಮಿಟೆಡ್ ಕರೆಗಳು ಒಳಗೊಂಡಿತ್ತು. ಪ್ರತಿದಿನ ಉಚಿತವಾಗಿ 100 (SMS) ಮತ್ತು ಹೈಸ್ಪೀಡ್ 2GB ಡೇಟಾ ಸಿಗುತ್ತದೆ.
5 ರೂ. ಗೆ 2GB ಡೇಟಾ
ಬಿಎಸ್‌ಎನ್‌ಎಲ್ ನ ಮತ್ತೊಂದು ಆಕಷ೯ಕ ಯೋಜನೆಯು 277 ರೂ. ಮೊತ್ತದಲ್ಲಿ ನಿಮಗೆ ಒಟ್ಟು 120GB ಡೇಟಾ ನೀಡಲಾಗುತ್ತದೆ. ಈ ಯೋಜನೆಯ ಅವಧಿ ಬಂದು 60 ದಿನಗಳು ಎರಡು ತಿಂಗಳು ಆಗಿರುತ್ತದೆ . ಈ ಯೋಜನೆಯ ಪ್ಲಾನ್ ಪ್ರಕಾರ, ನಿಮಗೆ ಪ್ರತಿದಿನ 2GB ಡೇಟಾ ಸಿಗುತ್ತದೆ. 60 ದಿನದ ಈ ಯೋಜನೆಯ ಬೆಲೆಯನ್ನು ಲೆಕ್ಕ ಹಾಕಿದರೆ, ನೀವು ಪ್ರತಿದಿನ 5 ರೂಪಾಯಿಯಲ್ಲಿ 2GB ಡೇಟಾವನ್ನು ಬಳಸಬಹುದು.