GTTC Recruitment 2024: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (Government Tool Room & Training Centre) ಖಾಲಿ ಇರುವ ಇನ್ಸ್ಟ್ರಕ್ಟರ್, ಟೆಕ್ನಿಷಿಯನ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯಿಂದ ಆನ್‌ಲೈನ್(Online) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
GTTC ನೇಮಕಾತಿ ಅಧಿಸೂಚನೆ ಗೆ ಸಂಬಂಧಿಸಿದ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳ ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ, ದಿನಾಂಕ, ಲಿಂಕ್‌ಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.
GTTC Recruitment 2024 ಸಂಕ್ಷಿಪ್ತ ವಿವರ:
ಒಟ್ಟು ಹುದ್ದೆಗಳ ಸಂಖ್ಯೆ: 98
ಹುದ್ದೆಗಳ ಹೆಸರು: ಇನ್ಸ್ಟ್ರಕ್ಟರ್, ಟೆಕ್ನಿಷಿಯನ್
ಉದ್ಯೋಗದ ಸ್ಥಳ: ಕರ್ನಾಟಕ
ಹುದ್ದೆಗಳ ವಿವರಗಳು:
ಲೆಕ್ಚರರ್ (ಎಂಜಿನಿಯರಿಂಗ್): 30
ಟೆಕ್ನಿಷಿಯನ್ ಗ್ರೇಡ್-III: 23
ಇನ್ಸ್ಟ್ರಕ್ಟರ್ ಗ್ರೇಡ್-I: 15
ಟೆಕ್ನಿಷಿಯನ್ ಗ್ರೇಡ್-II: 08
ಅಸಿಸ್ಟೆಂಟ್ ಗ್ರೇಡ್-II : 05
ಇನ್ಸ್ಟ್ರಕ್ಟರ್ ಗ್ರೇಡ್-II: 05
ಫೋರ್ಮ್ಯಾನ್ ಗ್ರೇಡ್-II: 04
ಟೆಕ್ನಿಷಿಯನ್ ಗ್ರೇಡ್-IV: 04
ಎಂಜಿನಿಯರ್: 02
ಆಫೀಸರ್ ಗ್ರೇಡ್-II: 02
ವಿದ್ಯಾರ್ಹತೆ:
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 03 ವರ್ಷ
SC, ST, ಪ್ರವರ್ಗ-I ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 05 ವರ್ಷ
ಹುದ್ದೆವಾರು ವೇತನ ಶ್ರೇಣಿ:
ಲೆಕ್ಚರರ್ (ಎಂಜಿನಿಯರಿಂಗ್): 45,300 ರಿಂದ 88,300 ರೂ.
ಎಂಜಿನಿಯರ್: 45,300 ರಿಂದ 88,300 ರೂ.
ಆಫೀಸರ್ ಗ್ರೇಡ್-II: 40,900 ರಿಂದ 78,200 ರೂ.
ಫೋರ್ಮ್ಯಾನ್ ಗ್ರೇಡ್-II: 37,900 ರಿಂದ 70,850 ರೂ.
ಇನ್ಸ್ಟ್ರಕ್ಟರ್ ಗ್ರೇಡ್-I: 30,350 ರಿಂದ 58,250 ರೂ.
ಟೆಕ್ನಿಷಿಯನ್ ಗ್ರೇಡ್-II: 30,350 ರಿಂದ 58,250 ರೂ.
ಇನ್ಸ್ಟ್ರಕ್ಟರ್ ಗ್ರೇಡ್-II: 27,650 ರಿಂದ 52,650 ರೂ.
ಟೆಕ್ನಿಷಿಯನ್ ಗ್ರೇಡ್-III: 27,650 ರಿಂದ 52,650 ರೂ.
ಟೆಕ್ನಿಷಿಯನ್ ಗ್ರೇಡ್-IV: 23,500 ರಿಂದ 47,650 ರೂ.
ಅಸಿಸ್ಟೆಂಟ್ ಗ್ರೇಡ್-II : 27,650 ರಿಂದ 52,650 ರೂ.
ಅರ್ಜಿ ಶುಲ್ಕ:
ಸಾಮಾನ್ಯ, OBC, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: 750 ರೂ.
SC, ST, ಪ್ರವರ್ಗ-I ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು: 500 ರೂ.
PWD ಅಭ್ಯರ್ಥಿಗಳು: 250 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳನ್ನು KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಆರಂಭ ದಿನಾಂಕ: 19/09/2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 28/09/2024
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29/09/2024
GTTC Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ಆನ್‌ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್‌ಸೈಟ್ ವಿಳಾಸ | gttc.karnataka.gov.in |
ಇತರೆ ಉದ್ಯೋಗ ಮಾಹಿತಿ:
- ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ನೇಮಕಾತಿ 2024
- ಜಿಲ್ಲಾ ಪಂಚಾಯತ್ ನೇರ ನೇಮಕಾತಿ 2024
- ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನೇಮಕಾತಿ ಉಡುಪಿಯಲ್ಲಿ ಪೋಸ್ಟಿಂಗ್