ಪಶುಸಂಗೋಪನೆ ಇಲಾಖೆಯಿಂದ ವೆಟರ್ನರಿ ಆಫೀಸರ್ ಅಧಿಸೂಚನೆ ಪ್ರಕಟ | KPSC Veterinary Officers Recruitment 2024

WhatsApp Group Join Now
Telegram Group Join Now

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದಲ್ಲಿ ಸೇರಿ ಖಾಲಿ ಇರುವ ಪಶುವೈದ್ಯಾಧಿಕಾರಿ ವೆಟರ್ನರಿ ಆಫೀಸರ್(Veterinary Officers) ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು KPSC ಯಿಂದ ಆನ್‌ಲೈನ್ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ವೆಟರ್ನರಿ ಆಫೀಸರ್(Veterinary Officers) ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಬೇಕಾಗುವ ಅರ್ಹತೆಗಳು, ಒಟ್ಟು ಹುದ್ದೆ ಸಂಖ್ಯೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ವೇತನ ಶ್ರೇಣಿ ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

KPSC Veterinary Officers Recruitment 2024 ಸಂಕ್ಷಿಪ್ತ ವಿವರ:

ಒಟ್ಟು ಹುದ್ದೆಗಳ ಸಂಖ್ಯೆ : 400 (342+58 ಬ್ಯಾಕ್ ಲಾಕ್)

ಹುದ್ದೆಗಳ ಹೆಸರು : ಪಶುವೈದ್ಯಾಧಿಕಾರಿ (Veterinary Officers)

ಉದ್ಯೋಗದ ಸ್ಥಳ : ಕರ್ನಾಟಕ

ಶೈಕ್ಷಣಿಕ ಅರ್ಹತೆ:
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ BVSc, BVSc & AH, B.sc, ಸಂಬಂಧಿತ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಪಶುಸಂಗೋಪನೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಪೂರೈಸಿರಬೇಕು.

ವಯೋಮಿತಿ ಸಡಿಲಿಕೆ:
ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ: 35 ವರ್ಷ
ಹಿಂದುಳಿದ ವರ್ಗಗಳ, 2A, 2B, 3A,3B, ಅಭ್ಯರ್ಥಿಗಳಿಗೆ : 38 ವರ್ಷ
SC, ST ವರ್ಗದ ಅಭ್ಯರ್ಥಿಗಳಿಗೆ : 40 ವರ್ಷ

ವೇತನ ಶ್ರೇಣಿ:
ಪಶುಸಂಗೋಪನೆ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 52,650 ರಿಂದ 97,100 ರೂ. ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆ ಕರ್ನಾಟಕ (AHVS Karnataka) ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

KPSC Veterinary Officers Recruitment 2024

KPSC Veterinary Officers Recruitment 2024 ಅರ್ಜಿ ಶುಲ್ಕ:
ಸಾಮಾನ್ಯ ವರ್ಗಗಳ ಅಭ್ಯರ್ಥಿಗಳು: 600 ರೂ.
ಹಿಂದುಳಿದ ವರ್ಗಗಳ, 2A, 2B, 3A,3B, ಅಭ್ಯರ್ಥಿಗಳು: 300 ರೂ.
ಮಾಜಿ ಸೈನಿಕ ಅಭ್ಯರ್ಥಿಗಳು: 50 ರೂ.
SC, ST ವರ್ಗದ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಅಧಿಕೃತ ವೆಬ್‌ಸೈಟ್ kpsc.kar.nic.in ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

AHVS Karnataka ಪ್ರಮುಖ ದಿನಾಂಕಗಳು :
ಆನ್‌ಲೈನ್‌ ಅರ್ಜಿ ಸ್ವೀಕರಿಸಲು ಪ್ರಾರಂಭ ದಿನಾಂಕ: 12 ಆಗಸ್ಟ್,2024
ಆನ್‌ಲೈನ್‌ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 12, ಸಪ್ಟೆಂಬರ್ 2024

KPSC Veterinary Officers Recruitment 2024 ಪ್ರಮುಖ ಲಿಂಕ್‌ಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ: kpsc.kar.nic.in

ಇತರೆ ಉದ್ಯೋಗ ಮಾಹಿತಿ:‌

  1. 734 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನೇಮಕಾತಿ
  2. ಭಾರತೀಯ ಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಹುದ್ದೆಗಳ ನೇಮಕಾತಿ 
  3. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ ಪದವಿ ಪಾಸಾದವರು ಅರ್ಜಿ ಸಲ್ಲಿಸಿ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net