Legislative Department Office Assistant Recruitment: ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧೀನದ ಶಾಸಕಾಂಗ ಇಲಾಖೆಯಡಿ ಖಾಲಿ ಇರುವ ಕಚೇರಿ ಸಹಾಯಕರು ಹುದ್ದೆಗಳನ್ನು ಭರ್ತಿ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಆಸಕ್ತರು ಏಪ್ರಿಲ್ 10 ರೊಳಗೆ ಇಮೇಲ್ ಮೂಲಕ ಅರ್ಜಿ ಕಳುಹಿಸಬಹುದು.
ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧೀನ ಶಾಸಕಾಂಗ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
Legislative Department Office Assistant Recruitment
ನೇಮಕಾತಿ ಸಂಸ್ಥೆ: ಕಾನೂನು ಮತ್ತು ನ್ಯಾಯ ಸಚಿವಾಲಯ ಅಧೀನದ ಶಾಸಕಾಂಗ ಇಲಾಖೆ
ಹುದ್ದೆ ಹೆಸರು: ಕಚೇರಿ ಸಹಾಯಕರು
ಒಟ್ಟು ಹುದ್ದೆಗಳ ಸಂಖ್ಯೆ: 05
ವೇತನ: ರೂ. 35,000/-
ವಿದ್ಯಾರ್ಹತೆ:
ಅಭ್ಯಾಥಿ೯ಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಬಿ.ಟೆಕ್, ಬಿಸಿಎ ಅಥವಾ 1 ವರ್ಷದ ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಪಡೆದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅಜಿ೯ ಸಲ್ಲಿಸುವ ಅಭ್ಯಾಥಿ೯ಗಳ ಕನಿಷ್ಠ ವಯಸ್ಸು 21 ವರ್ಷ ಹಾಗೂ ಗರಿಷ್ಠ 40 ವರ್ಷ ವಯೋಮಿತಿ ಮೀರಿರಬಾರದು.
ವೇತನ:
ಈ ಹುದ್ದೆಗೆ ಆಯ್ಕೆಯಾಗುವ ಅಭ್ಯಾಥಿ೯ಗಳಿಗೆ ಮಾಸಿಕ ರೂ.35,000. ನೀಡಲಾಗುತ್ತದೆ. ಒಂದು ವರ್ಷ ನಂತರ ಶೇಕಡ. 10 ವೇತನ ಹೆಚ್ಚಳ ಮಾಡಲಾಗುತ್ತದೆ.
ಅಜಿ೯ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯಾಥಿ೯ಗಳು legislative.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ ಅಥವಾ ಕೆಳಗೆ ನೀಡಿರುವ ಲಿಂಕ್ ಮೂಲಕ ಅಜಿ೯ ಡೌನ್‌ಲೋಡ್ ಮಾಡಿ. ತಮ್ಮ ದಾಖಲೆಗಳನ್ನು ಭರ್ತಿ ಮಾಡಿ.
ನಂತರ ಸ್ಕ್ಯಾನ್ ಮಾಡಿದ ಅರ್ಜಿಯನ್ನು ಇಮೇಲ್ ವಿಳಾಸಕ್ಕೆ prashant.bhardwaj78@gov.in ಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆಯಾದ ದಿನಾಂಕ: ಮಾರ್ಚ್ 26, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 10, 2025
Legislative Department Office Assistant Recruitment ಪ್ರಮುಖ ಲಿಂಕಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: legislative.gov.in
ಈ ಸುದ್ದಿಯನ್ನೂ ಓದಿ: ಸಹಾಯಕ ವ್ಯವಸ್ಥಾಪಕರು ಹುದ್ದೆಗಳ ನೇಮಕಾತಿ
ಈ ಸುದ್ದಿಯನ್ನೂ ಓದಿ: NITM ಬೆಳಗಾವಿ ನೇಮಕಾತಿ 2025