ಮತ್ಸ್ಯ ವಾಹಿನಿ: ಯೋಜನೆಯಡಿ ತ್ರಿ ಚಕ್ರ ವಾಹನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನ | Matsya Sampada Yojana

WhatsApp Group Join Now
Telegram Group Join Now

Matsya Sampada Yojana: ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮೂಲಕ ತಿಳಿಸುವುದೇಂದರೆ ಮೀನುಗಾರಿಕೆ ಇಲಾಖೆಯ ವತಿಯಿಂದ 2024 – 25 ನೇ ಸಾಲಿನ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (Matsya Sampada Scheme) ಸ್ಥಳೀಯವಾಗಿ ಮೀನುಗಳನ್ನು ಮಾರಾಟ ಮಾಡುವವರಿಗೆ ತ್ರಿ ಚಕ್ರ ಇ-ವಾಹನದಲ್ಲಿ ಮಾರಾಟ ಮಾಡಲು ಅನುಕೂಲವಾಗುಂತೆ ಪರವಾನಗಿ ಆಧಾರಿತ ವಾಹನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಮೀನು ಮಾರಾಟಗಾರರಿಗೆ ಸದುಪಯೋಗವಾಗುವಂತಹ ಈ ಯೋಜನೆಯಡಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ (Pradhan Mantri Matsya Sampada Yojana) ಪರಿಸರ ಸ್ನೇಹಿ ಕಿಯೋಸ್ಕ್ “ಮತ್ಸ್ಯವಾಹಿನಿ” ಯೋಜನೆಯಡಿ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಮತ್ಸ್ಯವಾಹಿನಿ ವಾಹನಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:
ಮೀನು ಮಾರಾಟಗಾರರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಮಂಗಳೂರು ಪ್ರಾಂಚೈಸಿಗಳು, ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ಪಡೆದಿರಬೇಕು.
ಮೀನುಗಾರರ ಉತ್ಪಾದಕ ಸಂಸ್ಥೆಗಳು, ಮೀನುಗಾರಿಕೆ ಸಹಕಾರ ಸಂಘಗಳು, ಮಹಿಳಾ ಸ್ವಸಹಾಯ ಗುಂಪುಗಳು, ನಿರುದ್ಯೋಗಿ ಯುವಕ-ಯುವತಿಯರು ಅರ್ಹರಾಗಿರುತ್ತಾರೆ.

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ((PMMSY)) ಮೀನು ಮಾರಾಟಗಾರರಿಗೆ ಮಾಹೆಯಾನ 3000 ರೂ. ಶುಲ್ಕದಂತೆ ಪರವಾನಗಿ ಮುಖಾಂತರ ಮತ್ಸ್ಯವಾಹಿನಿ ವಾಹನಗಳನ್ನು ನೀಡಲಾಗುತ್ತದೆ.
ಫಲಾನುಭವಿಗಳು ಸಾಮಾನ್ಯ ವರ್ಗ 1 ಲಕ್ಷ ರೂ. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ(SC/ST), ಮಹಿಳಾ ಫಲಾನುಭವಿಗಳಿಗೆ 50 ಸಾವಿರ ರೂ. ಪ್ರಾರಂಭಿಕ ಭದ್ರತಾ ಠೇವಣಿಯನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸಲು ನವೆಂಬರ್ 11, 2024 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕ ಮೊಬೈಲ್ ಸಂಖ್ಯೆ: 8722574158, 7204911897, ಮೀನುಗಾರಿಕೆ ಉಪ ನಿರ್ದೇಶಕರ ಮೊ.9449593156.

ಹೆಚ್ಚಿನ ಮಾಹಿತಿಗಾಗಿ: ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂರ್ಪಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದನದ ಶೇಡ್ ನಿರ್ಮಾಣಕ್ಕೆ ಸರ್ಕಾರದಿಂದ 57, 000 ರೂ. ಸಹಾಯಧನ ಅರ್ಜಿ ಆಹ್ವಾನ!

2024 -25 ನೇ ಸಾಲಿನ ಹಿಂಗಾರು & ಮುಂಗಾರು ಬೆಳೆ ವಿಮೆ ನೋಂದಣಿ ಪ್ರಾರಂಭ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net