ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು (NIMHANS Recruitment 2025) ಇಲ್ಲಿ ಖಾಲಿಯಿರುವ ಕ್ಷೇತ್ರ ದತ್ತಾಂಶ ಸಂಗ್ರಹಕಾರ (Field Data Collector) ಹುದ್ದೆಗಳನ್ನು ಭತಿ೯ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಕೊನೆಯ ದಿನಾಂಕದೊಳಗೆ ಅಜಿ೯ ಸಲ್ಲಿಸಬಹುದು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು (NIMHANS) ಫೀಲ್ಡ್ ಡೇಟಾ ಕಲೆಕ್ಟರ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)
ಒಟ್ಟು ಹುದ್ದೆಗಳ ಸಂಖ್ಯೆ: 32 ಹುದ್ದೆಗಳು
ಹುದ್ದೆಗಳ ಹೆಸರು : ಫೀಲ್ಡ್ ಡೇಟಾ ಕಲೆಕ್ಟರ್ (Field Data Collector)
ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)
NIMHANS Recruitment 2025 ವಿದ್ಯಾರ್ಹತೆ :
ನಿಮ್ಹಾನ್ಸ್ ಅಧಿಸೂಚನೆಯ ಪ್ರಕಾರ ಅಜಿ೯ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪಿಯುಸಿ, ಐಟಿಐ, ಮನೋವಿಜ್ಞಾನ/ಸಮಾಜ ಕಾರ್ಯ/ಸಮಾಜಶಾಸ್ತ್ರ/ಗ್ರಾಮೀಣಾಭಿವೃದ್ಧಿ/ಮಹಿಳಾ ಅಧ್ಯಯನದಲ್ಲಿ ಪದವಿಯನ್ನು ಹೊಂದಿರಬೇಕು.
ವಯೋಮಿತಿ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು ನೇಮಕಾತಿ ಅಧಿಸೂಚನೆಯ ಪ್ರಕಾರ, ಅಜಿ೯ದಾರರ ವಯಸ್ಸು ಗರಿಷ್ಠ ವಯಸ್ಸು 40 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ:
ನಿಮ್ಹಾನ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಆಯ್ಕೆಯಾದ ಅಭ್ಯಾಥಿ೯ಗಳಿಗೆ ಪ್ರತಿ ತಿಂಗಳು ₹15,000/- ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಸಂದರ್ಶನ (Walk-In Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
ನೇರ ಸಂದರ್ಶನದ ಸ್ಥಳ:
ಪರೀಕ್ಷಾ ಹಾಲ್, 4 ನೇ ಮಹಡಿ, NBRC ಕಟ್ಟಡ, ನಿಮ್ಹಾನ್ಸ್, ಬೆಂಗಳೂರು-560029, ಕರ್ನಾಟಕ 19-ಮಾರ್ಚ್-2025 ರಂದು ಬೆಳಿಗ್ಗೆ 10:00 ಗಂಟೆ.
Exam Hall, 4th Floor, NBRC Building, NIMHANS, Bengaluru-560029, Karnataka on 19-Mar-2025 10:00 AM
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 12-ಮಾರ್ಚ್-2025
ವಾಕ್-ಇನ್ ಇಂಟರ್ವ್ಯೂ ದಿನಾಂಕ: 19-ಮಾರ್ಚ್-2025
NIMHANS Recruitment 2025 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ನಿಮ್ಹಾನ್ಸ್ ವೆಬ್‌ಸೈಟ್: nimhans.ac.in
ಈ ಸುದ್ದಿಯನ್ನೂ ಓದಿ: ಅಸ್ಸಾಂ ರೈಫಲ್ಸ್ ನೇಮಕಾತಿ SSLC, ಪಿಯುಸಿ, ಡಿಪ್ಲೊಮ ಪಾಸಾದವರಿಗೂ ಅವಕಾಶ
ಈ ಸುದ್ದಿಯನ್ನೂ ಓದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 93960 ರೂ. ವೇತನ