ಪೋಸ್ಟ್ ಆಫೀಸ್ ವಿವಿಧ ಯೋಜನೆಯಡಿ ಉತ್ತಮ ರಿಟರ್ನ್ಸ್ ಕೂಡ ಯೋಜನೆ ವಿವರ | Post Office Return Policys

WhatsApp Group Join Now
Telegram Group Join Now

Post Office Return Policys: ಕೇಂದ್ರ ಸರ್ಕಾರವು ಬಹುತೇಕ ಎಲ್ಲ ಯೋಜನೆಗಳನ್ನೂ ಪೋಸ್ಟ್ ಆಫೀಸ್ ಮೂಲಕವೇ ನಿರ್ವಹಿಸುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ (ಪೋಸ್ಟ್ ಆಫೀಸ್) ಬಡ್ಡಿದರವನ್ನು ಸತತ 3ನೇ ತ್ರೈಮಾಸಿಕಕ್ಕೂ ಸ್ಥಿರವಾಗಿದೆ. ಅಂದರೆ ಡಿಸೆಂಬರ್ 31ರ ವರೆಗೂ ಕಳೆದ ತ್ರೈಮಾಸಿಕ ಅವಧಿಯ ಶೇಕಡಾವಾರು ಬಡ್ಡಿದರವೇ ಮುಂದುವರಿಯಲ್ಲಿದೆ.

ಈ ಯೋಜನೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಕಾರಣ ಹಣ ಆರ್ಥಿಕ ಭದ್ರತೆ ಹೆಚ್ಚು ಇರುತ್ತದೆ. ಭಾರತದ ಬಹುಸಂಖ್ಯಾತರು ಬಡ ಮತ್ತು ಕೆಳಮಧ್ಯಮ ವರ್ಗದವರಿಂದ, ಕುಡಿದು ಸರ್ಕಾರ ಎಲ್ಲಾ ಆರ್ಥಿಕ ಭದ್ರತೆ ಒದಗಿಸುವ ಕಾರಣ ಈ ಯೋಜನೆಗಳನ್ನೇ ನಂಬಿಕೊಂಡು ಹೂಡಿಕೆ ಮಾಡುತ್ತಾರೆ. ಅದಲ್ಲದೇ ಉತ್ತಮ ರಿಟರ್ನ್ಸ್ ಕೂಡ ಸಿಗುವ ಯೋಜನೆಗಳೂ ಇದರಲ್ಲಿರುವುದು ಮುಖ್ಯ ಕಾರಣ ಎಂದು ಹೇಳಬಹುದು.

ಭಾರತೀಯ ಅಂಚೆ ಇಲಾಖೆ ಮಾಹಿತಿ ಪ್ರಕಾರ, 2024ರ ಡಿಸೆಂಬರ್ 31ರ ವರಗೆ ವಿವಿಧ ರಾಷ್ಟ್ರೀಯ ಉಳಿತಾಯ ಯೋಜನೆಗಳ ಬಡ್ಡಿದರ ವಿವರ ಈ ಕೆಳಗಿನಂತಿವೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಮಾಹಿತಿ:

1) ಪೋಸ್ಟ್ ಆಫೀಸ್ ಉಳಿತಾಯ ಖಾತೆ ಬಡ್ಡಿದರ: ಶೇಕಡಾ 4 %

2) ಒಂದು ವರ್ಷದ ಡೆಪಾಸಿಟ್‌ ಬಡ್ಡಿದರ: ಶೇಕಡ 6.9 (10 ಸಾವಿರ ರೂಪಾಯಿಗೆ ವಾರ್ಷಿಕ ಬಡ್ಡಿ 708 ರೂ.)

3) ಎರಡು ವರ್ಷದ ಒನ್ ಟೈಮ್ ಠೇವಣಿ ಬಡ್ಡಿದರ: ಶೇಕಡ 7 ( 10 ಸಾವಿರ ರೂ ಗೆ ವಾರ್ಷಿಕ ಬಡ್ಡಿ 719 ರೂ.)

4) ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ): ವಾರ್ಷಿಕ ಬಡ್ಡಿ ದರ ಶೇಕಡ 8.2 %

5) ಐದು ವರ್ಷದ ಒನ್ ಟೈಮ್ ಠೇವಣಿ ಬಡ್ಡಿದರ: ಶೇಕಡ 7.5 ( 10,000 ರೂ. ಗೆ ವಾರ್ಷಿಕ ಬಡ್ಡಿ 771 ರೂ.)

6)ಕಿಸಾನ್ ವಿಕಾಸ ಪತ್ರ ಬಡ್ಡಿದರ ಶೇಕಡ 7.5 % (115 ತಿಂಗಳಿಗೆ ಮೆಚ್ಯುರಿಟಿ)

7) ಅಂಚೆ ಇಲಾಖೆಯ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌): ಬಡ್ಡಿ ದರ ವಾರ್ಷಿಕ ಶೇಕಡಾ 8.2 % (10 ಸಾವಿರ ರೂ. ಗೆ ತ್ರೈಮಾಸಿಕ ಅವಧಿಗೆ 205 ರೂ. ಪಡೆಯಬಹುದು)

8) ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಡಿ (ಪಿಒಎಂಐಎಸ್‌): ಬಡ್ಡಿದರ ವಾರ್ಷಿಕ ಶೇಕಡ 7.4 (10,000 ರೂ ಗೆ ತಿಂಗಳಿಗೆ 62 ರೂ. ನೀಡಲಾಗುತ್ತದೆ.)

9) ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್‌ಎಸ್‌ಸಿ) ಏಳನೇ ಆವೃತ್ತಿ: ಬಡ್ಡಿದರ ವಾರ್ಷಿಕ ಶೇಕಡ 7.7 % (10 ಸಾವಿರ ರೂ. ಮೆಚ್ಯುರಿಟಿ ಮೊತ್ತ 14,490 ರೂ.)

ಇದನ್ನೂ ಓದಿ: ಕಾರ್ಮಿಕರ ಮಕ್ಕಳಿಗೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ 

10) ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌): ಬಡ್ಡಿ ದರ ವಾರ್ಷಿಕ 7.1 % ರಷ್ಟು

11) ಅಂಚೆ ಕಚೇರಿ ಆರ್‌ಡಿ ಖಾತೆ: ಬಡ್ಡಿದರ ಶೇಕಡಾ 6.7 %

12) ಮಹಿಳಾ ಸಮ್ಮಾನ್ ಯೋಜನೆ ಉಳಿತಾಯ ಪ್ರಮಾಣಪತ್ರ: ಬಡ್ಡಿ ದರ ವಾರ್ಷಿಕ ಶೇಕಡ 7.5 % (10,000 ರೂ. ಮೆಚ್ಯುರಿಟಿ ಮೊತ್ತ 11,602 ರೂ.)

13) ಮೂರು ವರ್ಷದ ಒನ್ ಟೈಮ್ ಠೇವಣಿ ಬಡ್ಡಿದರ: ಶೇಕಡ 7.1 ( 10,000 ರೂ. ಗೆ ವಾರ್ಷಿಕ ಬಡ್ಡಿ 719 ರೂ. ಅಧಿಕ)

ಇದನ್ನೂ ಓದಿ: ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್

Leave a Comment