ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana) ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಬಡ ಕುಟುಂಬ ಸ್ವತಃ ಸುರಿನಲ್ಲಿ ಇರಬೇಕು. ಎಂಬ ಆಸೆಯಿಂದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಮುಖ ಮಿಷನ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಅರ್ಹ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಯನ್ನು ನಿರ್ಮಿಸುವ ಯೋಜನೆಯಾಗಿದೆ.
PM ಆವಾಸ ಯೋಜನೆಯಡಿ ಮುಂಬರುವ ಐದು ವರ್ಷದಲ್ಲಿ 1 ಕೋಟಿ ಮನೆಗಳನ್ನು ನಿರ್ಮಿಸುವುದು ಕೇಂದ್ರ ಸರ್ಕಾರ ಗುರಿಯಾಗಿದೆ, ದೇಶದಾದ್ಯಂತ ಒಂದು ಕೋಟಿ ಕುಟುಂಬಗಳಿಗೆ ಮನೆ ನಿರ್ಮಿಸಲು ಹಣಕಾಸು ನೆರವು ನೀಡಲಾಗುತ್ತದೆ. ನಗರ ಪ್ರದೇಶಗಳಲ್ಲಿ ಸುಸಜ್ಜಿತ ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ 1 ಚದರ ಅಡಿಗೆ 3 ಸಾವಿರ ರೂ. ಆರ್ಥಿಕ ನೆರವು ನೀಡಲಿದೆ.
Pradhan Mantri Awas Yojana ಮನೆ ನಿರ್ಮಿಸಲು ಸಬ್ಸಿಡಿ:
ಇನ್ನು ಈ ಯೋಜನೆಯಡಿ ಇಂಟರೆಸ್ಟ್ ಸಬ್ಸಿಡಿಯಲ್ಲಿ ಬಡ ಕುಟುಂಬಗಳಿಗೆ 25 ರಿಂದ 35 ಲಕ್ಷ ರೂಪಾಯಿ ವರೆಗೆ ಶೇಕಡಾ 4 ರ ಬಡ್ಡಿದರದಲ್ಲಿ ಸಾಲವನ್ನು ಸಹ ಪಡೆಯಬಹುದು. ಈ ಒಟ್ಟು ಮೊತ್ತದಲ್ಲಿ 1 ಲಕ್ಷ 80 ಸಾವಿರ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ 2.3 ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:
ಅರ್ಜಿದಾರರು ಭಾರತದ ನಿವಾಸಿ ಆಗಿರಬೇಕು.
ಅರ್ಜಿದಾರರು ಶಾಶ್ವತ ಮನೆ ಹೊಂದಿರಬಾರದು.
ಅರ್ಜಿದಾರರಿಗೆ ವಯಸ್ಸು 18 ವರ್ಷ ತುಂಬಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 03 ರಿಂದ 06 ಲಕ್ಷ ರೂ. ನಡುವೆ ಇರಬೇಕು.
ಅರ್ಜಿದಾರರ ರೇಷನ ಕಾರ್ಡ್ ಅಥವಾ ಪಿಬಿಎಲ್ ಪಟ್ಟಿಯಲ್ಲಿರಬೇಕು.
ಸರ್ಕಾರದ ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು.
ಇದನ್ನೂ ಓದಿ: ಮಹಿಳೆಯರಿಗೆ ಸಿಗಲಿದೆ 11,000 ರೂ. ಹೇಗೆ ಪಡೆಯುವ ಮಾಹಿತಿ ಇಲ್ಲಿದೆ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು (Documents) :
ಆಧಾರ ಕಾರ್ಡ್ (Aadhar Card)
ಫಲಾನುಭವಿಯ ಜಾಬ್ ಕಾರ್ಡ್(Job card)
ಬ್ಯಾಂಕ್ ಪಾಸ್ ಬುಕ್(Bank Passbook)
ಸ್ವಚ್ಛ ಭಾರತ್ ಮಿಷನ್ ನೋಂದಣಿ ನಂಬರ್
ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್‌ನಲ್ಲಿ (Online) ಅರ್ಜಿಯನ್ನು ಸಲ್ಲಿಸಬಹುದು.
ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : pmaymis.gov.in
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ ಸಾಕು 10 ಲಕ್ಷ ರೂ. ರಿಟರ್ನ್ ಸಿಗುತ್ತೆ!