Prerana Micro Credit Finance Scheme Karnataka: ಕರ್ನಾಟಕ ಸರಕಾರದಿಂದ ಪ್ರೇರಣಾ(ಮೈಕ್ರೋ ಕ್ರೆಡಿಟ್ ಫೈನಾನ್ಸ್) ಯೋಜನೆಯಡಿ (Micro credit scheme) ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಹಾಯಧನ ಮತ್ತು ಶೇ 75% ಸಬ್ಸಿಡಿಯಲ್ಲಿ ಸಾಲವನ್ನು ಪಡೆಯಲು ಅರ್ಹ ಮಹಿಳಾ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಂದರೆ ಕನಿಷ್ಠ 10 ಜನ ಸದಸ್ಯರಿರುವ ಸಂಘಗಳಿಗೆ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಮೈಕ್ರೋ ಕ್ರೆಡಿಟ್ ಸಾಲ(micro finance) ಮತ್ತು ಇದಕ್ಕೆ ಸಬ್ಸಿಡಿ ನೀಡಲು ಅರ್ಹರಿಂದ ಆಸ್ಟೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Prerana Micro Credit Finance Scheme Karnataka
ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಪರಿಶಿಷ್ಟ ಜಾತಿ ಸಮುದಾಯದ (SC/ST) ನಿಗಮಗಳಿಂದ ಮಹಿಳೆಯರನ್ನು ಪ್ರೋತ್ಸಾಹಿಸಲು ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಸ್ವಾವಲಂಬನೆ ಮತ್ತು ಸಬಲೀಕರಣ ಉದ್ದೇಶಕ್ಕಾಗಿ ಪ್ರೇರಣಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಏನಿದು ಯೋಜನೆ?
ನಗರ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಮತ್ತು ಉತ್ಪಾದಕ ಉದ್ಯಮವನ್ನು ಸ್ಥಾಪಿಸಲು ಗರಿಷ್ಠ 10 ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರನ್ನು ಹೊಂದಿರುವ ನೋಂದಾಯಿತ ಸ್ವಸಹಾಯ ಸಂಘಕ್ಕೆ ಪ್ರತಿ ಸದಸ್ಯರಿಗೆ 15,000 ರೂ. ಸಹಾಯಧನ ಮತ್ತು 10,000 ರೂ. ಸಾಲ, ಒಟ್ಟು 25,000 ರೂ. ಗಳಂತೆ ಒಂದು ಸಂಘಕ್ಕೆ ಗರಿಷ್ಟ 2.50ಲಕ್ಷ ರೂ. ಅನುದಾನವನ್ನು ಒದಗಿಸಲಾಗುವುದು.
ಈ ಸಾಲವನ್ನು ನಿಗಮದಿಂದಲೇ ನೀಡಲಾಗುತ್ತಿದ್ದು, ಇದಕ್ಕೆ ವಾರ್ಷಿಕ ಶೇ.4% ರೂ. ದರದಲ್ಲಿ ಬಡ್ಡಿ ವಿಧಿಸಲಾಗುತ್ತಿದ್ದು, 36 ಮಾಸಿಕ ಸಮ ಕಂತುಗಳಲ್ಲಿ ಸಾಲವನ್ನು ” ನಿಗಮಕ್ಕೆ ಮರುಪಾವತಿ ಮಾಡಬೇಕಾಗಿರುತ್ತದೆ. ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳು ಇದರ ಲಾಭವನ್ನು ಪಡೆದುಕೊಳ್ಳಬಹುದು.
ಪ್ರೇರಣಾ ಯೋಜನೆಯ ಪ್ರಯೋಜನಗಳು:
ಒಂದು ಸಂಘ ಅಥವಾ ಘಟಕಕ್ಕೆ 2.50 ಲಕ್ಷ ನೀಡಲಾಗುತ್ತದೆ.
ನಿಗಮದ ಪ್ರತಿಯೊಬ್ಬ ವ್ಯಕ್ತಿಗೆ: 25,000 ರೂ.
ಇದರಲ್ಲಿ 15.000 ರೂ. ಸಹಾಯಧನ ಮತ್ತು ರೂ. 10,000 ಸಾಲದ ರೂಪದಲ್ಲಿ ನೀಡಲಾಗುತ್ತದೆ.
ಅರ್ಹತೆಗಳು:
ಸ್ವ ಸಹಾಯ ಸಂಘದ (SHG) ಸದಸ್ಯರಾಗಿರಬೇಕು.
ಅರ್ಜಿದಾರರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಸಮುದಾಯಕ್ಕೆ ಸೇರಿದವರಾಗಿರಬೇಕು.
ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
ಅರ್ಜಿದಾರರು 21 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ1,50,000 ರೂ. ಗ್ರಾಮೀಣ ಮತ್ತು ನಗರ ಅರ್ಜಿದಾರರಿಗೆ 2,00,000 ರೂ. ಮೀರಬಾರದು.
ಅರ್ಜಿದಾರರು/ಅವರ ಕುಟುಂಬದ ಸದಸ್ಯರು ಈ ಹಿಂದೆ ಕರ್ನಾಟಕ ನಿಗಮ/ಸರ್ಕಾರದಿಂದ ಸಬ್ಸಿಡಿ ಪಡೆದಿರಬಾರದು. ಸ್ವ-ಸಹಾಯ ಗುಂಪಿನ ಸದಸ್ಯತ್ವವನ್ನು ಪಡೆಯಬೇಕು.
ಸ್ವ-ಉದ್ಯೋಗ ಫಲಾನುಭವಿಗಳು ಸ್ವ-ಸಹಾಯ ಸಂಘದ ಕನಿಷ್ಠ 200 sft (ಬಾಡಿಗೆ/ಗುತ್ತಿಗೆ/ಸ್ವಂತ) ಜಾಗ ಹೊಂದಿರಬೇಕು.
ಪೋಸ್ಟ್ ಆಫೀಸ್ ಯೋಜನೆಯಡಿ 10 ವರ್ಷಗಳ ನಂತರ 8 ಲಕ್ಷ ರೂಪಾಯಿಗಳ ಆದಾಯ ರಿಟರ್ನ್
Prerana Micro Credit Finance Scheme Karnataka ದಾಖಲೆಗಳು:
1) ಸ್ವ-ಸಹಾಯ ಸಂಘ ನೋಂದಣಿಯಾಗಿರುವ ಪ್ರಮಾಣ ಪತ್ರ ಮತ್ತು ಪೂರಕ ದಾಖಲೆಗಳು.
2) ಸದಸ್ಯರ ಆಧಾರ್ ಕಾರ್ಡ.
3) ಸಂಘದ ಬ್ಯಾಂಕ್ ಪಾಸ್ ಬುಕ್.
4) ಸದಸ್ಯರ ಆಧಾರ್ ಕಾರ್ಡ.
5) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಪ್ರಮಾಣಪತ್ರ
6) ಭೂರಹಿತ ಭೂ ಕಾರ್ಮಿಕರ ಪ್ರಮಾಣಪತ್ರ
ಕರ್ನಾಟಕ ಸರ್ಕಾರದಿಂದ ಕಾರು, ಗುಡ್ಸ್ ವಾಹನ ಖರೀದಿಸಲು 3 ಲಕ್ಷ ರೂ. ಆರ್ಥಿಕ ನೇರವು
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು 23-11-2024 ರೊಳಗೆ ನೇರವಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಗ್ರಾಮ ಒನ್/ಕರ್ನಾಟಕ ಒನ್/ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
SBI ನಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ರಿಟರ್ನ್ ನೀಡುವ FD ಯೋಜನೆ