Senior Citizen Scheme: ಪ್ರಸಕ್ತ ಸಾಲಿನಲ್ಲಿ ವಿವಿಧ ಸೆರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್ ಮತ್ತು ಮಲ್ಟಿಪಲ್ ಸ್ಕ್ಲಿರೋಸಿಸ್ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆ ಮಾಡುತ್ತಿರುವರಿಗೆ ಪ್ರತೀ ತಿಂಗಳು ರೂ. 1000/- ಪ್ರೋತ್ಸಾಹಧನವನ್ನು ನೀಡುವ ಸಲುವಾಗಿ ಜಿಲ್ಲಾ ಮಟ್ಟದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು:
ಈ ವಿಷೇಶವ ಯೋಜನೆಯ ಲಾಭ ಪಡೆಯಲು ಅಂಗವಿಕಲತೆಯ ಪ್ರಮಾಣ ಶೇ.75 ಮತ್ತು ಅದಕ್ಕಿಂತ ಹೆಚ್ಚಿರಬೇಕು. ಹಾಗೂ ವಿಶೇಷ ಗುರುತಿನ ಚೀಟಿ, ವೈದ್ಯಕೀಯ, ಜಾತಿ, ಆದಾಯ, ನಿವಾಸಿ ಧೃಡೀಕರಣ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ ಹಾಗೂ ಆರೈಕೆದಾರರ ಬ್ಯಾಂಕ್ ಖಾತೆ ಪುಸ್ತಕದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಯಾವುದೇ ವಯಸ್ಸಿನ ಹಾಗೂ ಆದಾಯ ಮಿತಿ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?.
ಅರ್ಹರು ಅರ್ಜಿ ನಮೂನೆಯನ್ನು dwdsc.karnataka.gov.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು. ನೇರವಾಗಿ ಜಿಲ್ಲಾ, ತಾಲ್ಲೂಕು, ಗ್ರಾಮೀಣ ವಿವಿದೊದ್ದೇಶ ಪುನರ್ವಸತಿ ಕಾರ್ಯರ್ತರಿಂದ ಅರ್ಜಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಅವರ ಮೂಲಕವೇ ಸಲ್ಲಿಸಬೇಕು.
ಹಣ ಪಡೆಯುವುದು ಹೇಗೆ:
ಜಿಲ್ಲಾ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಆರೈಕೆದಾರರ ಬ್ಯಾಂಕ್ ಖಾತೆ/ಅಂಚೆ ಕಛೇರಿ ಉಳಿತಾಯ ಖಾತೆಗೆ ಪ್ರೋತ್ಸಾಹ ಧನವನ್ನು ಜಮಾ ಮಾಡಲಾಗುತ್ತದೆ. ಅರ್ಹ ವಿಕಲಚೇತನ ವ್ಯಕ್ತಿಗಳ ಆರೈಕೆದಾರರು ಇದೆ ಅಕ್ಟೋಬರ್ 30 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:
ಚಿತ್ರದುರ್ಗ-9880821934,
ಉಡುಪಿ ಜಿಲ್ಲೆ :0820-2574810
ಬೆಳಗಾವಿ: 0831-2476096
ದಸರಾ ಪ್ರಯುಕ್ತ ಗೃಹಲಕ್ಷ್ಮೀ ಫಲಾನುಭವಿಗಳಿಗೆ 2 ಕಂತಿನ ಹಣ ಒಟ್ಟಿಗೆ 4,000 ರೂ. ಈ ದಿನ ಜಮಾ ಆಗಲಿದೆ