ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಪುಟ್ಟ ಮಕ್ಕಳೊಂದಿಗೆ ಸಖತ್ ಸರಳವಾಗಿ ಹೊಸ ವರ್ಷ 2025 ಆಚರಣೆ ಮಾಡಿದ್ದಾರೆ. ರಾಧಿಕಾ ಮತ್ತು ಯಶ್ ಕ್ಯೂಟ್ ಫ್ಯಾಮಿಲಿ ಫೋಟೋ ಸೋಶಿಯಲ್ ಬಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ರಾಧಿಕಾ ಪಂಡಿತ್ ಹೊಸ ವರ್ಷಕ್ಕೆ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಹಾಗೂ ಪತಿಯ ಜೊತೆಗಿನ ಫ್ಯಾಮಿಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಫೋಟೋದಲ್ಲಿ ನಾಲ್ವರನ್ನು ನೋಡಿ ಯಶ್ ಮತ್ತು ರಾಧಿಕಾ ಅಭಿಮಾನಿಗಳು ಖುಷಿಯಾಗಿದ್ದಾರೆ.
ಫ್ಯಾಮಿಲಿ ಪೋಟೋ ಪೋಸ್ಟ್ ಮಾಡಿ ಈರೀತಿ ಶುಭಾಶಯಗಳನ್ನು ತಿಳಿಸಿದ್ದಾರೆ. ‘ಕೋಸಿ ವೈಬ್ಸ್ ಆಂಡ್ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಪೂರ್ತಿ ಖುಷಿ, ಪ್ರೀತಿ, ಸಂತೋಚದಿಂದ ತುಂಬಿರಲಿ. ನಮ್ಮಿಂದ ನಿಮಗೆ ಹೊಸ ವರ್ಷಗಳು’ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.
ಬಹುತೇಕ ಸಮಯ ಹೊಸ ವರ್ಷವನ್ನು ಯಶ್ ದಂಪತಿಗಳು ಪ್ರಯಾಣ ಮಾಡಿ ವಿಶೇಷ ಸ್ಥಳದಲ್ಲಿ ಆಚರಿಸಿಕೊಳ್ಳುತ್ತಾರೆ. ಕಳೆದ ವರ್ಷ ಹಾಗೂ ಈ ವರ್ಷ ಸರಳವಾಗಿ ಮನೆಯಲ್ಲೇ ಹೊಸ ವರ್ಷವನ್ನು ಆಚರಿಸಿದ್ದಾರೆ.
ಯಶ್ ಸದ್ಯ ಟಾಕ್ಸಿಕ್ ಸಿನಿಮಾದ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 2025ರಲ್ಲಿ ಟಾಕ್ಸಿಕ್ ರಿಲೀಸ್ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಹಾಗಾಗಿ ಅವರು ಸಮಯ ಸಿಕ್ಕಾಗ ತಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಆದ್ಯತೆ ನೀಡುತ್ತಾರೆ.
ಇದನ್ನೂ ಓದಿ: ಶೇ 90% ಸಹಾಯಧನದಲ್ಲಿ ಮಿನಿ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ
ಡಾಲಿ ಧನಂಜಯ್ ನಿಶ್ಚಿತಾರ್ಥ ಸಂಭ್ರಮದ ಮುದ್ದಾದ ಪೋಟೋ ಇಲ್ಲಿವೆ