ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ 60,000 ರೂ. ವಿದ್ಯಾರ್ಥಿವೇತನ | Aditya Birla Capital Scholarship

WhatsApp Group Join Now
Telegram Group Join Now

Aditya Birla Capital Scholarship: ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ವಿದ್ಯಾರ್ಥಿವೇತನವನ್ನು ನೀಡುತ್ತಿರುತ್ತವೆ. ಹಾಗೆಯೇ ಇದೀಗ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

9ನೇ ತರಗತಿಯಿಂದ ಪದವಿ ಶಿಕ್ಷಣವನ್ನು ಪಡೆಯುತ್ತಿರುವ ಅರ್ಹ ಎಲ್ಲಾ ವಿದ್ಯಾರ್ಥಿಗಳಿಗೆ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ 12,000 ರೂ. ರಿಂದ 60,000 ರೂ. ವರೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ವಿದ್ಯಾರ್ಥಿ ವೇತನದ ವಿವರ:
ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗುವಂತೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ 12 ಸಾವಿರ ರೂ. ಯಿಂದ 60 ಸಾವಿರ ರೂ. ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

Aditya Birla Capital Scholarship 2024

ಅರ್ಹತೆಗಳು:
ವಿದ್ಯಾರ್ಥಿಗಳು 9 ರಿಂದ 12ನೆ ತರಗತಿಯಲ್ಲಿ ಅಥವಾ 3 ವರ್ಷದ ಪದವಿ ಅಥವಾ 4 ವರ್ಷದ ವೃತ್ತಿಪರ ಕೋರ್ಸ್‌ಗಳನ್ನು ಭಾರತ ಯಾವುದೇ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ರೂ. ಗಿಂತ ಕಡಿಮೆ ಇರಬೇಕು.

ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ:

  1. 9 ರಿಂದ 2nd PUC ಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 12,000 ರೂ.
  2. ಸಾಮಾನ್ಯ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 18,000 ರೂ.
  3. 3 ವರ್ಷದ ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ: 48,000 ರೂ.
  4. 4 ವರ್ಷದ ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ: 60,000 ರೂ.

ಇದನ್ನೂ ಓದಿ: ಪಿಎಂ ಕಿಸಾನ್‌ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ? 

Aditya Birla Capital Scholarship 2024 ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
ಪಾಸ್ ಪೋರ್ಟ್ ಸೈಜ್ ಪೋಟೋ
ಹಿಂದಿನ ವರ್ಷದ ಅಂಕಪಟ್ಟಿ
ಅರ್ಜಿದಾರರ ಆಧಾರ ಕಾರ್ಡ್ ಅಥವಾ ಯಾವುದೇ ಗುರುತಿನ ಚೀಟಿ
ವಿದ್ಯಾರ್ಥಿ ಕುಟುಂಬ ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್
ಶೈಕ್ಷಣಿಕ ದಾಖಲಾತಿಗಳು

ಅರ್ಜಿ ಸಲ್ಲಿಸಲು ದಿನಾಂಕ ಮತ್ತು ಲಿಂಕ್‌ಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/10/ 2024
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಿಳೆಯರಿಗೆ ಸಿಗಲಿದೆ 11,000 ರೂ. ಹೇಗೆ ಪಡೆಯುವ ಇಲ್ಲಿದೆ ಮಾಹಿತಿ

Leave a Comment