SBI ನಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ರಿಟರ್ನ್ ನೀಡುವ FD ಯೋಜನೆ | Amrit Vrishti Scheme 2024-25

WhatsApp Group Join Now
Telegram Group Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವತಿಯಿಂದ ದೇಶದಾದ್ಯಂತ ಗ್ರಾಹಕರಿಗೆ ಹೊಸ ಹೊಸ ಫಿಕ್ಸೆಡ್ ಡೆಪಾಸಿಟ್ (FD) ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಹೆಸರೇ (Amrit Vrishti Scheme) ಅಮೃತ್ ವೃಷ್ಟಿ ಎಂಬುದು, ಇದು ಗ್ರಾಹಕರಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಯೋಜನೆಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ” ಅಮೃತ್ ವೃಷ್ಟಿ ” ಎಂಬ ಹೆಸರಿನ ಒಂದು ಹೊಸ ಸೀಮಿತ ಅವಧಿಯ ಠೇವಣಿ ಯೋಜನೆಯನ್ನು ಆರಂಭಿಸಿದೆ. ಇದು ಒಂದು ಫಿಕ್ಸೆಡ್ ಡೆಪಾಸಿಟ್ (FD) ಯೋಜನೆಯಾಗಿದ್ದು. ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಬಡ್ಡಿದರವನ್ನು ನೀಡುವ ಉದ್ದೇಶ ಹೊಂದಿದೆ.

Amrit Vrishti Scheme

ಈ ಹೊಸ FD ಯೋಜನೆಯಡಿ ದೇಶೀಯ ಮತ್ತು ಅನಿವಾಸಿ ಭಾರತೀಯ ಗ್ರಾಹಕರಿಗೆ ತುಂಬಾ ಉಪಯುಕ್ತವಾಗುವ ರೀತಿಯಲ್ಲಿ ಅಮೃತ್ ವೃಷ್ಟಿ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಅಮೃತ್‌ ವೃಷ್ಟಿ ಯೋಜನೆಯು ಜುಲೈ 2024 ರಲ್ಲಿ ಜಾರಿಗೆ ತರಲಾಗಿದೆ.

“ಅಮೃತ್ ವೃಷ್ಟಿ” ಯೋಜನೆಯು ಕೇವಲ 444 ದಿನಗಳ ಠೇವಣಿಯ ಮೇಲೆ ವಾರ್ಷಿಕ 7.25% ಬಡ್ಡಿದರವನ್ನು ನೀಡುತ್ತದೆ. ಹಾಗೂ SBI ಯಿಂದ ಹಿರಿಯ ನಾಗರಿಕರಿಗೆ ಹೆಚ್ಚುವರಿ 7.25% ರಷ್ಟು ಬಡ್ಡಿದರವನ್ನು ಒದಗಿಸಲಾಗುತ್ತದೆ. ಈ ಯೋಜನೆಯಡಿ ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಗರಿಷ್ಠ ಆದಾಯವನ್ನು ಪಡೆಯಬಹುದು. ಈ ಠೇವಣಿಗಳ ಮೇಲೆ ಗ್ರಾಹಕರು ಸಾಲವನ್ನು ಸಹ ಪಡೆಯಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದ್ರೆ ಸಾಕು 10 ಲಕ್ಷ ರೂ. ರಿಟರ್ನ್ ಸಿಗುತ್ತೆ!

ಹೇಗೆ ಠೇವಣಿ ಮಾಡಬಹುದು?
ಭಾರತೀಯರ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ನ FD ಯೋಜನೆಯಡಿ ಹೂಡಿಕೆ ಮಾಡಲು ಬಯಸಿದರೆ, ನಿಮ್ಮ ಹತ್ತಿರದ SBI ಶಾಖೆಗಳು, Yono SBI ಮತ್ತು Yono Lite (ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಲ್ಲಿ) ಹಾಗೂ SBI ಇಂಟರ್ನೆಟ್ ಬ್ಯಾಂಕಿಂಗ್ (INB) ನಂತಹ ಚಾನೆಲ್‌ಗಳ ಮೂಲಕ ಬುಕ್ ಮಾಡಬಹುದು..

ಇನ್ನೂ SBI ಅಮೃತ್‌ ವೃಷ್ಟಿ (Amrit Vrishti Scheme) ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮಧ್ಯಂತರ ವಿಶೇಷ ಅವಧಿಯ ಠೇವಣಿಗಳು ಮುಕ್ತಾಯದ ಮೇಲೆ ಪಡೆಯಬಹುದು. ಬಡ್ಡಿ, TDS ನಿವ್ವಳ, ಗ್ರಾಹಕರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: ಮಹಿಳೆಯರಿಗೆ ಸಿಗಲಿದೆ 11,000 ರೂ. ಹೇಗೆ ಪಡೆಯುವ ಇಲ್ಲಿದೆ ಮಾಹಿತಿ

ಈ ಯೋಜನೆಯ ಅವಧಿ:
ಅಮೃತವೃಷ್ಟಿ ಸ್ಥಿರ ಠೇವಣಿ ಯೋಜನೆಯ ಅವಧಿಯು ಜುಲೈ 15, 2024 ರಿಂದ 31 ಮಾರ್ಚ್ 2025 ನಡುವೆ ಮಾತ್ರ ಹೂಡಿಕೆಗೆ ಅವಕಾಶ ಇರುತ್ತದೆ. ಏಪ್ರಿಲ್ 1, 2025 ರ ನಂತರ ಸಾಧ್ಯವಾಗುವುದಿಲ್ಲ. SBI ಅಮೃತ್ ವೃಷ್ಟಿಗೆ ಠೇವಣಿ ಅವಧಿ 444 ದಿನಗಳು ಆಗಿರುತ್ತದೆ.

ಇನ್ನೂ ಈ ಯೋಜನೆಯಡಿ ಹೂಡಿಕೆ ಮಾಡಿ ಮೇಲೆ 7 ದಿನಗಳಿಗಿಂತ ಕಡಿಮೆ ಅವಧಿಯವರೆಗೆ ಬ್ಯಾಂಕ್‌ನಿಂದ ಉಳಿದಿರುವ ಠೇವಣಿಗಳಿಗೆ ಯಾವುದೇ ಬಡ್ಡಿಯನ್ನು ಮರು ಪಾವತಿಸಲಾಗುವುದಿಲ್ಲ.

ಇದನ್ನೂ ಓದಿ: ಈಗ 18 ವರ್ಷದೊಳಗಿನ ಮಕ್ಕಳಿಗೂ ಪ್ಯಾನ್​ ಕಾರ್ಡ್​ ಕಡ್ಡಾಯ 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net