ಕರ್ನಾಟಕ ರಾಜ್ಯ ಸರಕಾರದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಯೋಜನೆಯಡಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ ವಿವಿಧ ಜಿಲ್ಲೆಗಳ ಕುರಿ ಸೊಸೈಟಿಯ ನೋಂದಾಯಿತ ಸದಸ್ಯರಿಂದ ಸಹಾಯಧನಕ್ಕೆ ಅರ್ಜಿ ಕರೆಯಲಾಗಿದೆ. ಆಸಕ್ತ ಈ ಯೋಜನೆಯ ಪ್ರಯೋಜನ ಪಡೆಯಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವಿವಿಧ ಜಿಲ್ಲೆಗಳ ಉಪನಿರ್ದೇಶಕರು ಕೇಂದ್ರ ಕಛೇರಿ ಭೇಟಿ ನೀಡಬಹುದು.
ಕುರಿ ಮತ್ತು ಮೇಕೆ ಸಾಕಾಣಿಕೆದಾರರನ್ನು ಪ್ರೋತ್ಸಾಹಿಸುವ ಮುಖ್ಯ ಉದ್ದೇಶದಿಂದ ರಾಜ್ಯ ಸರಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ. ಕುರಿಗಾಹಿಗಳಿಗೆ ಈ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ತಲಾ 1.75 ಲಕ್ಷ ರೂ. ಆರ್ಥಿಕ ನೆರವು ನೀಡುತ್ತದೆ.
Amrita Swabhimani Kurigahi Scheme:
ಏನಿದು ಅಮೃತ ಸ್ವಾಭಿಮಾನಿ ಯೋಜನೆ:
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಯೋಜನೆಯಡಿ ಬರುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಫಲಾನುಭವಿಗಳಿಗೆ ತಲಾ 1.75 ಲಕ್ಷ ರೂ. ಪೈಕಿ 50% ರಷ್ಟನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ 25% ಅನುದಾನ ಸಿಗಲಿದೆ. ಉಳಿದ 25% ರಷ್ಟು ಹಣವನ್ನು ಫಲಾನುಭವಿಗಳು ಬರಿಸಬೇಕು.
ಪರಿಹಾರ ಧನ:
Amrita Swabhimani Kurigahi Scheme ಕುರಿ ಮತ್ತು ಮೇಕೆಗಳ ಅಕಾಲಿಕ ಸಾವನ್ನಪ್ಪಿದರೆ ‘ಅನುಗ್ರಹ ಯೋಜನೆ’ಯಡಿ ಪ್ರತಿ ಕುರಿಗೆ 5,000 ರೂ. ಪರಿಹಾರ ಸಹ ನೀಡಲಾಗುತ್ತದೆ. ಹಾಗೂ ಕುರಿಗಾರರು ಆಕಸ್ಮಿಕ, ಅಕಾಲಿಕ ಮರಣ ಹೊಂದಿದರೆ ವಿಮಾ ಸೌಲಭ್ಯ ಯೋಜನೆಯಲ್ಲಿ ನಿರಾಶ್ರಿತರ ಕುಟುಂಬದ ಅವಲಂಬಿತರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ:
ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದು, ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಇದೇ ಜುಲೈ 18 ರೊಳಗಾಗಿ ಬೆಳಗಾವಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 9449076232, 0831-2431294 ಸಂಪರ್ಕಿಸಲು ಕೋರಲಾಗಿದೆ. ಅಥವಾ ಇ-ಮೇಲ್ ವಿಳಾಸ kswddcbelgaum@gmail.com ಸಂಪರ್ಕಿಸಿ. Amrita Swabhimani Kurigahi Scheme ಜಿಲ್ಲಾವಾರು ಕಚೇರಿ ದೂರವಾಣಿ ಸಂಖ್ಯೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದಿಂದ ಸಿಗಲಿದೆ 15,000 ರೂ. ಜೊತೆಗೆ 3 ಲಕ್ಷ ರೂ. ಸಾಲ ಸೌಲಭ್ಯ