BSNL ಹೋಳಿ ಹಬ್ಬಕ್ಕೆ ಧಮಾಕ ಆಫರ್ 2GB ಡೇಟಾ, ಉಚಿತ ಕಾಲ್, 14 ತಿಂಗಳ ವ್ಯಾಲಿಡಿಟಿ | BSNL Holi Dhamaka Offer 2025

WhatsApp Group Join Now
Telegram Group Join Now

BSNL Holi Dhamaka Offer 2025: ಭಾರತ ಸರ್ಕಾರ ಸೌಮ್ಯದ ಟೆಲಿಕಾಂ ಕಂಪನಿ  ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈ ವರ್ಷದ ಹೋಳಿ ಹಬ್ಬಕ್ಕೆ ತನ್ನ ಗ್ರಾಹಕರಿಗೆ ಧಮಾಕ ಆಫರ್ ಘೋಷಿಸಿದ್ದು. ಈ ಹಬ್ಬದ ಪ್ರಯುಕ್ತ ಕಂಪನಿಯು ಹೊಸ ಒಂದು ಯೋಜನೆಯ ಮಾನ್ಯತೆ (ಅವಧಿ)ಯನ್ನು ಒಂದು ತಿಂಗಳು ವಿಸ್ತರಿಸಿದೆ ಅಥವಾ ಕಂಪನಿಯು ಈ ಯೋಜನೆಯಡಿ 30 ದಿನಗಳ ಅವಧಿಯನ್ನು ಉಚಿತವಾಗಿ ನೀಡುತ್ತಿದೆ.

ಈ ಅಗ್ಗದ ಬೆಲೆಯಲ್ಲಿ ದೀರ್ಘಾವಧಿ ಮಾನ್ಯತೆಯ ರಿಚಾರ್ಜ್ ಯೋಜನೆ ಪರಿಚಯಿಸುವ ಮೂಲಕ ಬಿಎಸ್ಎನ್ಎಲ್ ಮತ್ತೊಮ್ಮೆ ತನ್ನದಲ್ಲದ ಹೊಸ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಆಫರ್ ನಲ್ಲಿ ಹೆಚ್ಚುವರಿಯಾಗಿ 60GB ಡೇಟಾ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ. ಹಾಗಾದ್ರೆ BSNL ನೀಡುತ್ತಿರುವ ಹೋಳಿ ಆಫರ್ ಪ್ಲಾನ್ ಯಾವುದು ಇದ್ರಾ ಬೆಲೆ ಎಷ್ಟು ಎಲ್ಲವು ಇಲ್ಲಿದೆ.

BSNL ರೂ. 2399 ರೂಗಳ ಯೋಜನೆ (BSNL Holi Dhamaka Offer 2025)

ಹೋಳಿ ಹಬ್ಬದ ಪ್ರಯುಕ್ತ ಬಿಎಸ್‌ಎನ್‌ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಟ್ವಿಟ್ಟರ್ ಮೂಲಕ ಹೊಸ ಯೋಜನೆಯನ್ನು ಪ್ರಕಟಿಸಿದೆ. BSNL ₹2399 ರೂಪಾಯಿಗಳ ರಿಚಾರ್ಜ್ ಯೋಜನೆಯಲ್ಲಿ ಅನಿಯಮಿತ ಕರೆಗಳು ಮತ್ತು ದಿನಕ್ಕೆ 2GB ಡೇಟಾವನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್‌ ಈ ಯೋಜನೆಯಡಿ ಗ್ರಾಹಕರಿಗೆ 425 ದಿನಗಳ ವ್ಯಾಲಿಡಿಟಿ ನೀಡುತ್ತದೆ.

ಒಮ್ಮೆ ಈ ರೀಚಾರ್ಜ್ ಮಾಡಿದರೆ ಒಂದು ವಷ೯ಕ್ಕಿಂತ ಅಧಿಕ ದಿನ ರೀಚಾರ್ಜ್ ಮಾಡುವ ಚಿಂತೆ ಇರುವುದಿಲ್ಲ. ಅಂದರೆ ಸುಮಾರು 14 ತಿಂಗಳುಗಳ ಕಾಲ ನೀವು ರೀಚಾರ್ಜ್ ನಿಂದ ಮುಕ್ತರಾಗಿರುತ್ತೀರಿ. ಈ BSNL ಯೋಜನೆಯ ಬೆಲೆ 2399 ರೂಗಳ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿಯಿರಿ.

ಈ ಪ್ಯಾಕ್ ದಿನಕ್ಕೆ 6ರೂ.ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ 30ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುವುದಾಗಿ ಬಿ‌ಎಸ್‌ಎನ್‌ಎಲ್ ತಿಳಿಸಿದೆ.

BSNL Holi Dhamaka Offer 2025

ಈ ಹೋಳಿ ಆಫರ್ ಯೋಜನೆಯ ಪ್ರಯೋಜನ?

ಬಿಎಸ್‌ಎನ್‌ಎಲ್ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. BSNLನ 2,399 ರೂಗಳ ಯೋಜನೆಯು ಈ ಹಿಂದೆ 395 ದಿನಗಳ ಮಾನ್ಯತೆ ಆಗಿತ್ತು. ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳನ್ನು ನೀಡುತ್ತಿತ್ತು. ಆದರೆ ಈಗ ಹೋಳಿ ಹಬ್ಬದ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್‌ 30 ದಿನಗಳ ಅಧಿಕ ಉಚಿತ ವ್ಯಾಲಿಡಿಟಿ, 2GB ದೈನಂದಿನ ಡೇಟಾ ಮತ್ತು ಅನಿಯಮಿತ ಕರೆಗಳ SMS ಪ್ರಯೋಜನವನ್ನು ನೀಡುತ್ತಿದೆ. ಈಗ ಗ್ರಾಹಕರಿಗೆ 425 ದಿನಗಳ ಅವಧಿ ಮತ್ತು ಒಟ್ಟು 850GB ಡೇಟಾವನ್ನು ನೀಡುತ್ತಿದೆ.

2,399ರೂ.  ಪ್ರಿಪೇಯ್ಡ್ ಪ್ಲಾನ್ ಪ್ರಯೋಜನ: 
ಬಿ‌ಎಸ್‌ಎನ್‌ಎಲ್ 2,399ರೂ. ಪ್ರಿಪೇಯ್ಡ್ ಪ್ಲಾನ್ ನ ಪ್ರಯೋಜನಗಳೆಂದರೆ, ಇದರಲ್ಲಿ 425 ದಿನಗಳ ವ್ಯಾಲಿಡಿಟಿ ಅನಿಯಮಿತ ಕರೆ, ನಿತ್ಯ 100 ಎಸ್ಎಂಎಸ್, ನಿತ್ಯ 2ಜಿ‌ಬಿ ಹೈಸ್ಪೀಡ್ ಡೇಟಾ ಪ್ರಯೋಜನ ಇದಲ್ಲದೆ, ಮೊಬೈಲ್ ಬಳಕೆದಾರರಿಗೆ BiTVಗೆ ಉಚಿತ ಚಂದಾದಾರಿಕೆ ಜೊತೆಗೆ ಹಲವು ಓ‌ಟಿ‌ಟಿ ಅಪ್ಲಿಕೇಶನ್‌ಗಳಿಗೂ ಉಚಿತ ಪ್ರವೇಶ ಕೂಡ ಸಿಗಲಿದೆ. 

Leave a Comment