CISF Recruitment 2025: ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF Recruitment 2025) ನಲ್ಲಿ ಖಾಲಿ ಇರುವ ಕಾನ್ಸ್‌ಟೇಬಲ್/ಟ್ರೇಡ್ಸ್‌ಮನ್ ಹುದ್ದೆಗಳ ಭತಿ೯ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಅಹ೯ ಮತ್ತು ಆಸಕ್ತ ಅಭ್ಯಾಥಿ೯ಗಳು ಏಪ್ರಿಲ್ 3 ರೊಳಗೆ ಸಿಐಎಸ್ಎಫ್‌ನ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)
ಒಟ್ಟು ಹುದ್ದೆಗಳ ಸಂಖ್ಯೆ: 1161 ಹುದ್ದೆಗಳು
ಹುದ್ದೆ ಹೆಸರು: ಕಾನ್ಸ್ಟೇಬಲ್ ಮತ್ತು ವ್ಯಾಪಾರಸ್ಥ

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಕಾನ್ಸ್ಟೇಬಲ್/ಕುಕ್493
ಕಾನ್‌ಸ್ಟೆಬಲ್/ಕಾಬ್ಲರ್09
ಕಾನ್ಸ್ಟೇಬಲ್/ಟೈಲರ್23
ಕಾನ್ಸ್ಟೇಬಲ್/ಕ್ಷೌರಿಕ199
ಕಾನ್‌ಸ್ಟೆಬಲ್/ವಾಷರ್‌ಮನ್262
ಕಾನ್ಸ್ಟೇಬಲ್/ಸ್ವೀಪರ್152
ಕಾನ್ಸ್ಟೇಬಲ್/ಪೇಂಟರ್02
ಕಾನ್ಸ್ಟೇಬಲ್/ಕಾರ್ಪೆಂಟರ್09
ಕಾನ್ಸ್ಟೇಬಲ್/ಎಲೆಕ್ಟ್ರಿಷಿಯನ್04
ಕಾನ್ಸ್ಟೇಬಲ್/ಗಾರ್ಡನರ್ (Mali)04
ಕಾನ್ಸ್ಟೇಬಲ್/ವೆಲ್ಡರ್01
ಕಾನ್ಸ್ಟೇಬಲ್/ಚಾರ್ಜ್ ಮೆಕ್ಯಾನಿಕ್01
ಕಾನ್ಸ್ಟೇಬಲ್/MP ಅಟೆಂಡೆಂಟ್02
ಒಟ್ಟು ಹುದ್ದೆಗಳಲ್ಲಿ ಮಹಿಳೆಯರಿಗೆ103 ಹುದ್ದೆಗಳು

Table of Contents

CISF Recruitment 2025 ವಿದ್ಯಾಹ೯ತೆ:

ಸಿಐಎಸ್ಎಫ್ ಕಾನ್ಸ್ಟೇಬಲ್ ವಿವಿಧ ಹುದ್ದೆಗಳಿಗೆ ಸಲ್ಲಿಸಲು, ಅಭ್ಯರ್ಥಿಯು ಕನಿಷ್ಠ 10ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು, ಅಭ್ಯರ್ಥಿಯ ವಯಸ್ಸು ಆಗಸ್ಟ್ 1, 2025 ಕ್ಕೆ 18 ರಿಂದ 23 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ

ವಯೋಮಿತಿ ಸಡಿಲಿಕೆ:
ಒಬಿಸಿ ವರ್ಗದ ಅಭ್ಯರ್ಥಿಗಳಿಗೆ: 03 ವರ್ಷ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ: 05 ವರ್ಷ

ಆಯ್ಕೆ ಪ್ರಕ್ರಿಯೆ:

ಸಿಐಎಸ್ಎಫ್ ಕಾನ್ಸ್‌ಟೇಬಲ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್‌ಟಿ), ದಾಖಲೆ ಪರಿಶೀಲನೆ, ವ್ಯಾಪಾರ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ನಂತರ ದಾಖಲೆಗಳ ಪರೀಶಿಲನೆ ಒಳಗೊಂಡಿರುತ್ತದೆ.

ವೇತನಶ್ರೇಣಿ:

ಸಿಐಎಸ್ಎಫ್ ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾಗುವ ಅಭ್ಯಾಥಿ೯ಗಳಿಗೆ ಪ್ರತಿ ತಿಂಗಳು ರೂ. 21700-69100/- ಸಂಬಳವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಸಾಮಾನ್ಯ (UR), OBC ಮತ್ತು EWS ವರ್ಗದ ಅಭ್ಯರ್ಥಿಗಳು: 100/- ಪಾವತಿಸಬೇಕು.
ಎಸ್‌ಸಿ/ಎಸ್‌ಟಿ, ಮಹಿಳಾ ಮತ್ತು ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ: ಕಚೇರಿ ಸಹಾಯಕರು ನೇಮಕಾತಿ ಪದವೀಧರರಿಗೆ ಸುವರ್ಣಾವಕಾಶ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಮಾರ್ಚ್ 5, 2025
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 3, 2025

CISF Recruitment 2025 ಪ್ರಮುಖ ಲಿಂಕ್ ಗಳು:

ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: cisf.gov.in 

ಈ ಸುದ್ದಿಯನ್ನೂ ಓದಿ: DCC ಬ್ಯಾಂಕ್ ನೇಮಕಾತಿ 2025

Leave a Comment