ಗೂಗಲ್ ಪೇ ಮೂಲಕ 1 ಲಕ್ಷ ರೂ. ವರೆಗೆ ತ್ವರಿತ ಲೋನ್ ಪಡೆಯಿರಿ…! ಸಂಪೂರ್ಣ ಮಾಹಿತಿ ಇಲ್ಲಿದೆ | Google Pay Loan

WhatsApp Group Join Now
Telegram Group Join Now

Google Pay Loan: ನಮಸ್ಕಾರ ಸ್ನೇಹಿತರೇ ಈ ಲೇಖನದ ಮೂಲಕ ತಿಳಿಸುವುದೇಂದರೆ ಭಾರತದಲ್ಲಿ ಎಲ್ಲರೂ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಬಳಸುತ್ತಾರೆ, ಈಗ ಭಾರತೀಯ ಗೂಗಲ್ ಪೇ ( Google Pay) ತನ್ನ ಬಳಕೆದಾರರಿಗೆ ತ್ವರಿತ ಸಾಲವನ್ನು ಒದಗಿಸುತ್ತಿದೆ. ಸುಲಭವಾಗಿ 15,000 ರೂ 1 ಲಕ್ಷದ ವರೆಗೂ ಗೂಗಲ್ ಪೇ ಆ್ಯಪ್ ನಿಂದ ಕೆಲವೇ ನಿಮಿಷಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಸಾಲವನ್ನು ಪಡೆದುಕೊಳ್ಳಲು ಹೇಗೆ, ಅರ್ಹತೆ, ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.

ಗೂಗಲ್ ಪೇ ಲೋನ್
ನೀವೇನಾದರೂ ಗೂಗಲ್ ಪೇ ಬಳಕೆದಾರರಾಗಿದ್ದರೆ 15, 000 ರೂ. ದಿಂದ 1 ಲಕ್ಷ ರೂ. ವರೆಗೆ ವಯಕ್ತಿಕ ಶೀಘ್ರವಾಗಿ ಸಾಲವನ್ನು ಪಡೆದುಕೊಳ್ಳಬಹುದು. ಈ ಸಾಲವನ್ನು ವಿಶೇಷವಾಗಿ ಸಣ್ಣ ವ್ಯಾಪಾರಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಉಪಯೋಗವಾಗುತ್ತದೆ, ಸಣ್ಣ ವ್ಯಾಪಾರಿಗಳು ವಸ್ತುಗಳನ್ನು ಖರೀದಿ ಮಾಡಲು, ಸರಬರಾಜುಗಳಿಗೆ ಖರೀದಿಸಲು ಅಥವಾ ಇನ್ನಿತರ ವ್ಯವಹಾರದ ಬೆಳವಣಿಗೆಗೆ ಹೂಡಿಕೆ ಮಾಡಲು ಹಣವನ್ನು ಬಯಸಿದರೆ ಈ ಸಾಲ ತುಂಬ ಉಪಯುಕ್ತವಾಗುತ್ತದೆ.

Google Pay Loan:

ನಮಗೆ ಅನಿರೀಕ್ಷಿತ ಹಣದ ಅಗತ್ಯವು ಯಾವಾಗಲೂ ಬರುತ್ತದೆ. ಆಗ ನಾವು ಹೆಚ್ಚಾಗಿ ಬ್ಯಾಂಕ್ ಗಳಿಂದ ವೈಯಕ್ತಿಕ ಸಾಲವನ್ನು ಪಡೆಯುತ್ತೇವೆ. ಆದರೀಗ ನೀವೇನಾದರೂ ಗೂಗಲ್ ಪೇ ಬಳಕೆದಾರರಾಗಿದ್ದರೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಆಗಿದರೆ ಸ್ಕೋರ್ ಆಧಾರದ ಮೇಲೆ, ನೀವು ಗೂಗಲ್ ಪೇ (Google Pay Loan) ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಒಂದು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಗೂಗಲ್ ಪೇ ಯಿಂದ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಉತ್ತಮ ಆಗಿದ್ದರೆ. ನೀವು 1 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಗೂಗಲ್ ಪೇ ತನ್ನ ಗ್ರಾಹಕರಿಗೆ ಸಾಲವನ್ನು ನೇರವಾಗಿ ನೀಡುವುದಿಲ್ಲ, ಬದಲಾಗಿ ಇದು Axis ಬ್ಯಾಂಕ್, HDFC ಬ್ಯಾಂಕ್ ಮತ್ತು ಇತರ ಬ್ಯಾಂಕ್ ಗಳಿಂದ ಸಾಲದ ಹಣವನ್ನು ಕಂಪನಿಗಳಿಂದ ಸಾಲವನ್ನು ಒದಗಿಸಿಕೊಡಲಾಗುತ್ತದೆ.

ಹಾಗಾಗಿಯೇ ನೀವು ವಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಯಾವುದೇ ಬ್ಯಾಂಕ್ ಖಾತೆ ತೆರೆಯಬೇಕಾಗಿಲ್ಲ ಮತ್ತು ಯಾವುದೇ ಬ್ಯಾಂಕಿಗೆ ಹೋಗುವ ಅಗತ್ಯವೂ ಇಲ್ಲ. ನೀವು ಸುಲಭವಾಗಿ ಗೂಗಲ್ ಪೇ ಯಿಂದ ನಿಮ್ಮ ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ತ್ವರಿತ ಒಂದು ಲಕ್ಷದವರೆಗೂ ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು 30,ಸಾವಿರ ರೂ. ಸಹಾಯಧನ 

Google Pay Loan ಸಾಲ ಪಡೆಯಲು ಅರ್ಹತೆ:
ಸಾಲಗಾರರು ಭಾರತದ ನಿವಾಸಿಯಾಗಿರಬೇಕು.
ಗೂಗಲ್ ಪೇ ಸಾಲವನ್ನು ಪಡೆದುಕೊಳ್ಳಲು ಅರ್ಜಿದಾರರ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.
ಹೊಸ ಬಳಕೆದಾರರು ಮತ್ತು ಹೊಸ ಖಾತೆಯನ್ನು ತೆರೆದವರು ಅರ್ಜಿಯನ್ನು ಸಲ್ಲಿಸಲು ಅರ್ಹರಲ್ಲ.
ಗೂಗಲ್ ಪೇ ಲೋನ್ ಪಡೆಯಲು 21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
ಅರ್ಜಿದಾರರು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಇದಕ್ಕಿಂತ ಮೊದಲು ಕ್ರೆಡಿಟ್ ಸ್ಕೋರ್/ಸಿಬಿಲ್ ಸ್ಕೋರ್ ಆಧಾರದ ಮೇಲೆ ಅಥವಾ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಂಡಿರಬಾರದು ಹಾಗೂ ಸಾಲ ಬಾಕಿ ಇರಬಾರದು.

ಗೂಗಲ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ನೀವು Google Pay App ಅನ್ನು ಓಪನ್ ಮಾಡಬೇಕು.
ನಂತರ ಹೋಂ ಪೇಜ್ ಓಪನ್ ಆಗುತ್ತದೆ, ಅಲ್ಲಿ ನೀವು ಲೋನ್ ಎಂಬ Icon ಮೇಲೆ ಕ್ಲಿಕ್ ಮಾಡಿ.
ಆನಂತರ ನಿಮಗೆ ಸಾಲದ ವಿಭಾಗದ ಪುಟವು ಕಾಣುತ್ತದೆ.
ಪೂರ್ವ ಅನುಮೋದಕ ಸಾಲದ ಆಫರ್‌ಗಳ ವಿಭಾಗದ ಅಡಿಯಲ್ಲಿ ಬರುತ್ತವೆ.
ಆಫ‌ರ್(offers)ಗಳು ನಿಮ್ಮ ಮೊತ್ತಕ್ಕೆ ಸರಿಹೊಂದುತ್ತವೆ ಎಂದು ನೀವು ಭಾವಿಸಿದರೆ EMI ಆಯ್ಕೆ ಮಾಡಿ.
EMI ಬೇಕಾಗುವ ಸರಿಯಾದ ವಿವರ, ಅಗತ್ಯ ದಾಖಲೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
ಅರ್ಜಿ ಭರ್ತಿ ಮಾಡಿದ ನಂತರ ನೀವು OTP ಪಡೆಯುತ್ತೀರಿ. OTP ಅನ್ನು ನಮೂದಿಸಿ.
ನಂತರ ನಿಮ್ಮ ಅರ್ಜಿಯನ್ನು ಪರಿಶೀಲಿಸಲು ಬ್ಯಾಂಕ್ ನಿರೀಕ್ಷಿಸಿ.

ಕೆಲವು ಸಮಯದ ನಂತರ ಬ್ಯಾಂಕ್ ಅರ್ಜಿಯನ್ನು ಪರಿಶೀಲಿಸಿದ ನಂತರ ಸಾಲಗಳ ಟ್ಯಾಬ್ ಅನ್ನು ಪರಿಶೀಲಿಸಿ. ಬ್ಯಾಂಕ್‌ಗಳು ಅರ್ಜಿದಾರರ ಖಾತೆಗೆ ಹಣವನ್ನು ವರ್ಗಾಯಿಸುವ ಮೊದಲೇ, ಸಂಸ್ಕರಣಾ ಶುಲ್ಕಗಳು ಮತ್ತು ಸಾಲದ ಸ್ಟ್ಯಾಂಪ್ ತೆರಿಗೆ ಕಟ್ ಮಾಡಲಾಗುತ್ತದೆ. ನಂತರ, ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ: ಸರ್ಕಾರದಿಂದ ಜನಸಾಮಾನ್ಯರಿಗೆ 5 ಲಕ್ಷ ರೂ. ಗಿಫ್ಟ್​ ಈ ಯೋಜನೆ ಪಡೆಯೋದು ಹೇಗೆ? 

ಈ ರೀತಿ ಎಲ್ಲರೂ ಸುಲಭವಾಗಿ ಗೂಗಲ್ ಪೇ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ ನಂತರ ಆ ಹಣವನ್ನು ಪ್ರತಿ ತಿಂಗಳು EMI ರೀತಿಯಲ್ಲಿ ಹಣವನ್ನು ಪಾವತಿಸಬೇಕು.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net