SSLC ಪಾಸಾಗಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಿಂದ ಗುಡ್‌ನ್ಯೂಸ್ ಭಾರತೀಯ ಅಂಚೆ ಇಲಾಖೆಯಲ್ಲಿ ದೇಶಾದ್ಯಂತ ಖಾಲಿ ಇರುವ 44,228 ಗ್ರಾಮೀಣ ಡಾಕ್ ಸೇವಕ್, ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳನ್ನು ಭರ್ತಿಗೆ ಆನ್‌ಲೈನ್ ಮೂಲಕ ಅಧಿಸೂಚನೆ ಹೊರಡಿಸಿದೆ.
ಭಾರತೀಯ ಅಂಚೆ ಇಲಾಖೆ (India Post GDS) ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಭವಿಸಿದ ಪ್ರಮುಖ ವಿವರಗಳು ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ & ಅರ್ಜಿ ಸಲ್ಲಿಸುವ ವಿಧಾನ, ಅಧಿಕೃತ ಅಧಿಸೂಚನೆ, ಅರ್ಜಿ ಸಲ್ಲಿಸುವ ಲಿಂಕ್‌ಗಳು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ ಖಚಿತ ಪಡೆಸಿಕೊಂಡು ಅರ್ಜಿ ಸಲ್ಲಿಸಿ.
India Post GDS Recruitment 2024:
ಒಟ್ಟು ಹುದ್ದೆಗಳ ಸಂಖ್ಯೆ: 44,228
ಹುದ್ದೆಗಳ ಹೆಸರು:
ಗ್ರಾಮೀಣ ಡಾಕ್ ಸೇವಕ್ (GDS)
ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (BPM)
ಮತ್ತು ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್( ABPM)
ವಿದ್ಯಾರ್ಹತೆ:
ಭಾರತೀಯ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಯಾವುದೇ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಭಾರತೀಯ ಅಂಚೆ ಇಲಾಖೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು.
ಗರಿಷ್ಠ ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ ST ಅಭ್ಯರ್ಥಿಗಳಿಗೆ: 05 ವರ್ಷ
PwD ಅಭ್ಯರ್ಥಿಗಳಿಗೆ: 10 ವರ್ಷ
PwD (OBC) ಅಭ್ಯರ್ಥಿಗಳಿಗೆ: 13 ವರ್ಷ
PwD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ವೇತನ ಶ್ರೇಣಿ:
ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (BPM) ಹುದ್ದೆಗೆ: 12,000 ರಿಂದ 29,380 ರೂ.
ಗ್ರಾಮೀಣ ಡಾಕ್ ಸೇವಕ್ (GDS), ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM): 10,000 ರಿಂದ 24,470 ರೂ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು OBC ವರ್ಗದ ಅಭ್ಯರ್ಥಿಗಳು : 100 ರೂ.
SC / ST / ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಭಾರತೀಯ ಅಂಚೆ ಇಲಾಖೆಯ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಹತೆಗಳು:
ಸೈಕಲ್ ಚಲಿಸಲು ಬರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 15/07/2024
ಆನ್‌ಲೈನ್ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 05/08/2024
India Post GDS Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: indiapostgdsonline.gov.in
ಇತರೆ ಉದ್ಯೋಗ ಮಾಹಿತಿ:
- 2000 ಲೈನ್ಮೆನ್ಗಳ ನೇಮಕ SSLC ಪಾಸಾದವರು ಅರ್ಜಿ ಸಲ್ಲಿಸಬಹುದು
- ಕರ್ನಾಟಕ ಕೆಸೆಟ್ ಅಧಿಸೂಚನೆ ಪ್ರಕಟ
- KPSCಯಿಂದ 384 ಗೆಜೆಟೆಡ್ ಪ್ರೊಬೇಶನರಿ ಹುದ್ದೆಗೆ ಅರ್ಜಿ ಆಹ್ವಾನ