ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC Recruitment 2025) ನಲ್ಲಿ ಖಾಲಿ ಇರುವ ಹಿರಿಯ ಕಾರ್ಯನಿರ್ವಾಹಕ (ವಾಣಿಜ್ಯ) ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಟಿಪಿಸಿ) ನಲ್ಲಿ ಖಾಲಿ ಇರುವ ಹಿರಿಯ ಕಾರ್ಯನಿರ್ವಾಹಕ (ವಾಣಿಜ್ಯ) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ, ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸೇರಿದಂತೆ ಇತರೆ ಎಲ್ಲಾ ಮಾಹಿತಿಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
NTPC Recruitment 2025
ಹುದ್ದೆಗಳ ಹೆಸರು: ಹಿರಿಯ ಕಾರ್ಯನಿರ್ವಾಹಕ (ವಾಣಿಜ್ಯ)
ಒಟ್ಟು ಹುದ್ದೆಗಳ ಸಂಖ್ಯೆ: 08
ಉದ್ಯೋಗದ ಸ್ಥಳ: ಅಖಿಲ ಭಾರತ
ವೇತನ: 1,00,000 ರೂ.
ಶೈಕ್ಷಣಿಕ ಅರ್ಹತೆ:
ಎನ್ಟಿಪಿಸಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್ ಪದವಿಯ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ ಪಿಜಿಡಿಎಂ ಅಥವಾ ಎಂಬಿಎ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಜೊತೆಗೆ ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷಗಳ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರಬೇಕು.
ವಯೋಮಿತಿ:
ಎನ್ಟಿಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 38 ವರ್ಷದೊಳಗೆ ಇರಬೇಕು.
ವೇತನ ಶ್ರೇಣಿ:
ಎನ್ಟಿಪಿಸಿಯ ಈ ಹಿರಿಯ ಕಾರ್ಯನಿರ್ವಾಹಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು: 300 ರೂ.
ಎಸ್ಸಿ/ಎಸ್ಟಿ, ಪಿಡಬ್ಲ್ಯೂಡಿ, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
ಎನ್ಟಿಪಿಸಿ ಆಯ್ಕೆ ಪ್ರಕ್ರಿಯೆ:
ಎನ್ಟಿಪಿಸಿ ಹಿರಿಯ ಕಾರ್ಯನಿರ್ವಾಹಕ (ವಾಣಿಜ್ಯ) ಹುದ್ದೆಗಳನ್ನು ಅಭ್ಯರ್ಥಿಗಳ ವಿದ್ಯಾರ್ಹತೆ, ಸಂದರ್ಶನ ಮತ್ತು ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
NTPC Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಜನವರಿ 21, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 4, 2025
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: ntpc.co.in
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 30 ಸಾವಿರಕ್ಕೂ ಅಧಿಕ ಬೃಹತ್ ನೇಮಕಾತಿ 2025
ಇದನ್ನೂ ಓದಿ: SSLC, PUC, ಐಟಿಐ ಪಾಸಾದವರಿಗೆ ಮೆಟ್ರೋ ದಲ್ಲಿ ಉದ್ಯೋಗ