PM Kisan 18th Installment: ರೈತರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿನ ಹಣವನ್ನು ಬಿಡುಗಡೆಗೆ ಕೇಂದ್ರ ಸರ್ಕಾರ ದಿನಾಂಕವನ್ನು ಪ್ರಕಟಿಸಿದೆ. ಅಕ್ಟೋಬರ್ 5 ರಂದು 18 ನೇ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಕೇಂದ್ರ ತಿಳಿಸಿದೆ. ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ ಪಿಎಂ ಕಿಸಾನ್‌ನ ಮುಂದಿನ ಕಂತಿಗೆ ಚಾಲನೆ ನೀಡಲಿದ್ದಾರೆ.
PM Kisan 18th Installment PM ಕಿಸಾನ್ ಸಮ್ಮಾನ್ ನಿಧಿ:
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (Pradhan Mantri Kisan Samman Yojana) ಪ್ರತಿ ವರ್ಷ 6,000 ರೂಪಾಯಿ ನೀಡುತ್ತದೆ. ರೈತರ ಬ್ಯಾಂಕ್ ಖಾತೆಗೆ ಮೂರು ಕಂತುಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ಜಮಾ ಮಾಡಲಾಗುತ್ತದೆ.
ನೀವು ಈ ತಪ್ಪು ಮಾಡಿದರೆ 18ನೇ ಕಂತಿನ ಹಣ ಸಿಗೋದಿಲ್ಲ: ಪಿಎಂ ಕಿಸಾನ್ ಯೋಜನೆ (PM Kisan Yojana) ನೋಂದಣಿ ಮಾಡುವಾಗ ಯಾವುದೇ ರೀತಿಯ ತಪ್ಪು ಮಾಹಿತಿಯನ್ನು ನೀಡಿದರೆ ಪಿಎಂ ಕಿಸಾನ್ ಹಣ ಜಮಾ ಆಗುವುದಿಲ್ಲ. ನಿಮ್ಮ ವಿಳಾಸ, ಬ್ಯಾಂಕ್ ಖಾತೆ ಮುಂತಾದ ನಿಖರ ಮಾಹಿತಿಯನ್ನು ದಾಖಲಿಸಬೇಕು. ಇದಲ್ಲದೆ ಎನ್‌ಪಿಸಿಐ (NPCI) ನಲ್ಲಿ ಆಧಾರ್ ಸೀಡಿಂಗ್ ಇಲ್ಲದೇ ಇದ್ದಲ್ಲಿ, ಪಬ್ಲಿಕ್ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಪಿಎಫ್‌ಎಂಎಸ್) ದಾಖಲೆಗಳನ್ನು ಸ್ವೀಕರಿಸದೇ ಇದ್ದಲ್ಲಿ ಅಥವಾ ರೈತರು ಆಧಾರ ಇ-ಕೆವೈಸಿ ಮಾಡದೇ ಇದ್ದಲ್ಲಿ 18 ನೇ ಕಂತಿನ ಹಣ ತಡೆಹಿಡಿಯಲಾಗುತ್ತದೆ.
PM ಕಿಸಾನ್ ಫಲಾನುಭವಿಗಳ ಪಟ್ಟಿ ಪರಿಶೀಲಿಸುವ ವಿಧಾನ:
ಪಿಎಂ ಕಿಸಾನ್ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ.
farmer corner ಮೇಲೆ ಕ್ಲಿಕ್ ಮಾಡಿ ಹೊಸ ಪುಟ ತೆರದ ನಂತರ.
ಆನಂತರ Beneficiary List ಮೇಲೆ ಕ್ಲಿಕ್ ಮಾಡಿ, ಅಲ್ಲಿ ಫಾರ್ಮ್ ಇರುತ್ತದೆ.
ಆ ಫಾರ್ಮ್‌ನಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಹೆಸರು ಆಯ್ಕೆ ಮಾಡಿ Get Report ಮೇಲೆ ಕ್ಲಿಕ್ ಮಾಡಿ.
ಆನಂತರ ಪಟ್ಟಿಯಲ್ಲಿ ನಿಮ್ಮ ಗ್ರಾಮದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೆಸರು ಕಾಣಿಸುತ್ತದೆ.
ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ, ಹೆಸರಿದ್ದರೆ ನಿಮಗೆ ಹಣ ಬರುತ್ತದೆ, ಇಲ್ಲದಿದ್ದರೆ ತಕ್ಷಣ ತಪ್ಪನ್ನು ಸರಿಪಡಿಸಿ.
ಇದನ್ನೂ ಓದಿ: ಪಿಎಂ ಕಿಸಾನ್ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ?
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:
ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಯಾವುದೇ ಸಮಸ್ಯೆ ಇದ್ದರೆ, pmkisan-ict@gov.in ಇಮೇಲ್ ಐಡಿಗೆ ಇಮೇಲ್ ಮೂಲಕ ಸಂಪರ್ಕಿಸಿ. ಅಥವಾ, 155261, 1800115526 ಅಥವಾ 011-23381092 ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ಮೂಲಕ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್