ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿಗಳ ಸೃಜನ ಯೋಜನೆ (ಪಿ.ಎಂ.ಇ.ಜಿ.ಪಿ)ಯಡಿ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕಿನ ನಿರುದ್ಯೋಗ ಯುವಕ-ಯುವತಿಯರಿಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿ.ಎಂ.ಇ.ಜಿ.ಪಿ)ಯಡಿ ಆರ್ಥಿಕ ಸಾಲ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ಪ್ರಯೋಜನಗಳು:
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯು ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶ ಎರಡರಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಈ ಯೋಜನೆಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡಾ.35 ರಷ್ಟು ನಗರ ಪ್ರದೇಶಗಳಲ್ಲಿ ಶೇಕಡಾ.25 ರಷ್ಟು ಸಬ್ಸಿಡಿ ನೀಡಲಾಗುತ್ತದೆ.
PM Udyoga Srujana Scheme ಸಾಲದ ಮೊತ್ತ?
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಉದ್ಯೋಗ ಪ್ರಾರಂಭಿಸಲು ಸೇವಾ ಚಟುವಟಿಕೆಯಲ್ಲಿ 5,00,000 ರೂ. ಸಾಲ ಪಡೆಯುವ ಉದ್ದಿಮೆದಾರರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗಧಿಪಡಿಸಿರುವುದಿಲ್ಲ. ಹಾಗೂ 5,00,000 ರೂ. ಕ್ಕಿಂತ ಮೇಲ್ಪಟ್ಟ ಸಾಲ ಪಡೆಯುವ ಉದ್ದಿಮೆದಾರರಿಗೆ ಕನಿಷ್ಠ 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸಲು ಅರ್ಹತೆಗಳು?:
18 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ.ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಮಾಜಿ ಸೈನಿಕರು ಮತ್ತು ಅಂಗವಿಕಲರು ಈ ಯೋಜನೆಯ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ ವಿವಿಧ ಹಣಕಾಸು ಸಂಸ್ಥೆಗಳು (ಬ್ಯಾಂಕುಗಳ) ಮೂಲಕ ಸಾಲ ಸೌಲಭ್ಯ ನೀಡಲಾಗುವುದು.
ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇರುವುದಿಲ್ಲ.
ಬೇಕಾಗುವ ದಾಖಲೆಗಳು.?
- ಅರ್ಜಿ ನಮೂನೆ
- ಎರಡು ಭಾವಚಿತ್ರಗಳು
- ವಾಸಸ್ಥಳ ದೃಢೀಕರಣ ಪತ್ರ
- ಯೋಜನಾ ವರದಿ
- ಸ್ಥಾಪಿಸುವ ಘಟಕ ಗ್ರಾಮೀಣ ಪ್ರದೇಶವಾಗಿರುವುದಕ್ಕೆ ದಾಖಲಾತಿ
- ಜಾತಿ ಪ್ರಮಾಣ ಪತ್ರ/ಮಾಜಿ ಸೈನಿಕ/
- ಅಂಗವಿಕಲರು (ಅಂಗವೈಕಲ್ಯ) ಪ್ರಮಾಣ ಪತ್ರ
- ವಿದ್ಯಾಭ್ಯಾಸ/ತಾಂತ್ರಿಕ ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ.
- ಯಂತ್ರೋಪಕರಣಗಳ ದರ ಪಟ್ಟಿ
- ಪಂಚಾಯತ್ ಲೈಸೆನ್ಸ್
- ಘಟಕದ ಕಟ್ಟಡದ ದಾಖಲಾತಿಗಳು.
ಅರ್ಜಿ ಸಲ್ಲಿಸುವುದು ಹೇಗೆ?:
ಅಸಕ್ತಿ ಹೊಂದಿರುವ ಅರ್ಹ ಉದ್ಯಮಶೀಲರು (ನಿರುದ್ಯೋಗಿ ಯುವಕ-ಯುವತಿಯರು) ಪಿ.ಎಂ.ಇ.ಜಿ.ಪಿ kviconline.gov.in ವೆಬ್ ಸೈಟ್ ನಲ್ಲಿ kvib ಏಜೆನ್ಸಿ ಲಾಗಿನ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
PM Udyoga Srujana Scheme ಹೆಚ್ಚಿನ ಮಾಹಿತಿಗಾಗಿ:
ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಕಛೇರಿ ದೂರವಾಣಿ ಸಂಖ್ಯೆ. 9480825612 ಅನ್ನು ಸಂಪರ್ಕಿಸಬಹುದು. ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗೆ ಉಚಿತ `ಗ್ಯಾಸ್ ಸಿಲಿಂಡರ್’ ಪಡೆಯಲು ಅರ್ಜಿ ಆಹ್ವಾನ
ರಾಜ್ಯದ ಕಾರ್ಮಿಕರಿಗೆ ಲೇಬರ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ