Pradhan Mantri Fasal Bima Yojana Registration: 2024-25 ನೇ ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ (PM Fasal Bima) ಯೋಜನೆಯ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ.
ಪ್ರಮುಖ ಬೆಳೆಗಳು ಹಾಗೂ ಹಂಗಾಮು:
ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆ ಜೋಳ, ನೀರಾವರಿ ಮತ್ತು ಮಳೆಯಾಶ್ರಿತ ಬೆಳೆ ಕಡಲೆ ಮತ್ತು ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ನೀರಾವರಿ ಬೆಳೆಗಳಾದ ನೆಲಗಡಲೆ(ಶೇಂಗಾ), ಭತ್ತ .
ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ನೀರಾವರಿ ಬೆಳೆಗಳಾದ ಮುಸುಕಿನ ಜೋಳ, ನೀರಾವರಿ/ಮಳೆಯಾಶ್ರಿತ ಬೆಳೆ ಸೂರ್ಯಕಾಂತಿ, ಕುಸುಮೆ, ಈರುಳ್ಳಿ ಮತ್ತು ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಸೂರ್ಯಕಾಂತಿ, ಈರುಳ್ಳಿ ಜಿಲ್ಲೆಯ ಬೆಳೆಗಳಾಗಿವೆ.
Pradhan Mantri Fasal Bima Yojana Registration ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು:
ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ ಬೆಳೆಗಳಿಗೆ ಡಿಸೆಂಬರ್ 16 ಹಾಗೂ ಮಳೆಯಾಶ್ರಿತ ಬೆಳೆ ಜೋಳ ನವೆಂಬರ್ 15, ಈರುಳ್ಳಿ ಬೆಳೆಗೆ ನವೆಂಬರ್ 30 ಆಗಿರುತ್ತದೆ.
ಬೇಸಿಗೆ ಬೆಳೆಗಳಾದ ಭತ್ತ, ನೆಲಗಡಲೆ(ಶೇಂಗಾ), ಸೂರ್ಯಕಾಂತಿ ಮತ್ತು ಈರುಳ್ಳಿ ಬೆಳೆಗಳಿಗೆ 2025 ರ ಫೆಬ್ರವರಿ 28 ಕೊನೆಯ ದಿನವಾಗಿದೆ.
ನೋಂದಣಿ ಮಾಡುವುದು ಎಲ್ಲಿ?
ಪ್ರಸ್ತುತ ಬ್ಯಾಂಕ್, ಕರ್ನಾಟಕಒನ್, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಣಿ ಪ್ರಾರಂಭವಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಎಲ್ಲಾ ರೈತರು ಬೆಳೆ ವಿಮೆ ಯೋಜನೆಯಡಿ ನೊಂದಣಿ ಮಾಡಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಭೂಮಿ ದಾಖಲೆಗಳಾದ ಪಹಣಿ
ಆದಾರ್ ಕಾರ್ಡ್
ಕಂದಾಯ ರಶೀತಿ
ಖಾತೆ ಪುಸ್ತಕ
ಬ್ಯಾಂಕ್ ಪಾಸ್ ಬುಕ್
ಹೆಚ್ಚಿನ ಮಾಹಿತಿಗಾಗಿ:
Pradhan Mantri Fasal Bima Yojana Registration: ರೈತರು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಬೆಳೆ ವಿಮಾ ಸಂಸ್ಥೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರ ಇಲಾಖೆ ಹಾಗೂ ಬೆಳೆ ಸಾಲ ನೀಡುವ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳನ್ನು, ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08172-267158 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರಿಗೆ ಗುಡ್ ನ್ಯೂಸ್ ಶೇ. 90ರಷ್ಟು ಸಹಾಯಧನದಲ್ಲಿ ಹನಿ ನೀರಾವರಿ ಸೌಲಭ್ಯ
ರೈತರಿಗೆ ಗುಡ್ ನ್ಯೂಸ್ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 25,000 ರೂ. ಸಹಾಯಧನ