ಹೈನುಗಾರಿಕೆ ಆರಂಭಿಸಲು ಎಮ್ಮೆ, ಆಕಳು ಖರೀದಿಸಲು ಈ ಬ್ಯಾಂಕ್ ನೀಡುತ್ತಿದೆ ರೂ.10 ಲಕ್ಷ ಸಾಲ | SBI Pashupalan loan Yojana

WhatsApp Group Join Now
Telegram Group Join Now

ಪಶುಪಾಲನ್ ಯೋಜನೆ ಹೈನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಮತ್ತು ಬೆಂಬಲ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಂದ ಪಶುಪಾಲನೆ ಯೋಜನೆಯಡಿ (Pashupalan loan) ಅಧಿಕ ಮೊತ್ತದ ಸಾಲ ಯೋಜನೆಯನ್ನು ಪರಿಚಯಿಸಿದೆ.

ಏನಿದು ಯೋಜನೆ?.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮತ್ತು ರೈತರಿಗೆ ಪಶುಪಾಲನೆ, ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಎಸ್ ಬಿಐ ವಿಶೇಷ ಯೋಜನೆ ಪಶುಪಾಲನ್ ಸಾಲ (SBI Pashupalan loan Yojana) ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ರೈತರು ಹಸು, ಎಮ್ಮೆ ಸಾಕಲು ಅಗತ್ಯವಿರುವ ಆರ್ಥಿಕ ನೆರವನ್ನು ಬ್ಯಾಂಕ್ ಒದಗಿಸುತ್ತಿದ್ದು. ಈ ಯೋಜನೆಯಡಿ ರೂ 1 ರಿಂದ 10 ಲಕ್ಷದ ವರಗೆಸಾಲವನ್ನು ಪಡೆಯಬಹುದು. ರೈತರು ಮತ್ತು ಬಡ ಕುಟುಂಬದವರು ಹಸು, ಎಮ್ಮೆ ಇತರೆ ಪ್ರಾಣಿಗಳನ್ನು ಸಾಕಣೆ ಮಾಡುವವರಿಗೆ ಈ ಯೋಜನೆ ತುಂಬಾ ಉಪಯುಕ್ತ.

ಸಾಲದ ಮೊತ್ತ ಮಂಜೂರು ?
SBI ಪಶುಪಾಲನಾ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಹಸುಗಳಿಗೆ ರೂ. 60,000, ಮತ್ತು ಎಮ್ಮೆಗಳಿಗೆ ರೂ‌ 70,000 ಸಾಲವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ಅರ್ಹತೆಗಳು:
ಭಾರತದ ಪ್ರಜೆ ಆಗಿರಬೇಕು.
ಅರ್ಜಿದಾರರು ತಮ್ಮಲ್ಲಿರುವ ಎಲ್ಲಾ ಪಶುಗಳ ಸಂಖ್ಯೆಯನ್ನು ಬ್ಯಾಂಕಿಗೆ ತಿಳಿಸಬೇಕು.
ಪಶುಪಾಲನೆಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು.
ಬೇರೆ ಬ್ಯಾಂಕಿನಲ್ಲಿ ಸಾಲ ಇದ್ದರೆ ಅದನ್ನು ತೀರಿಸಿರಬೇಕು. ಅಂದರೆ ಬೇರೆ ಯಾವ ಬ್ಯಾಂಕಿನಲ್ಲಿ ಯಾವುದೇ ಸಾಲವನ್ನು ಹೊಂದಿರಬಾರದು.
ಪಶುಪಾಲನ ಯೋಜನೆಯ ಸಾಲವನ್ನು ಪಶುಪಾಲನೆಗೆ ಮಾತ್ರ ಬಳಸಬೇಕು.
SBI ಸಿಬ್ಬಂದಿಯಿಂದ ಪರಿಶೀಲನೆ ಕಾರ್ಯವೂ ಸಹ ನಡೆಯುತ್ತದೆ.

SBI ಸಾಲ ಪಡೆಯುವುದು ಹೇಗೆ?
ರೈತರು ಮತ್ತು ಈಗಾಗಲೇ ಖಾತೆಯನ್ನು ಹೊಂದಿರುವ ಗ್ರಾಹಕರು ನಿಮ್ಮ ಹತ್ತಿರದ SBI ಶಾಖೆಗೆ ಹೋಗಿ ಪಶುಪಾಲನೆ ಯೋಜನೆಯ ಅರ್ಜಿ ಪಡೆದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ತುಂಬಿ, ದಾಖಲೆಗಳನ್ನು ಲಗತ್ತಿಸಬೇಕು. ಇದಾದನಂತರ ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿ ನಂತರ ಸಾಲ ಮಂಜೂರು ಮಾಡಲಾಗುತ್ತದೆ.

ಕರ್ನಾಟಕ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5000 ರೂ. ಆರ್ಥಿಕ ಸಹಾಯಧನ 

ಸ್ವಯಂ ಉದ್ಯೋಗ ಪ್ರಾರಂಭಿಸಲು 1,00,000 ರೂ. ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿ

ದನದ ಶೇಡ್ ನಿರ್ಮಾಣಕ್ಕೆ ಸರ್ಕಾರದಿಂದ 57, 000 ರೂ. ಸಹಾಯಧನ ಅರ್ಜಿ ಆಹ್ವಾನ!

Leave a Comment