ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಯೋಜನೆಗೆ ಅರ್ಜಿ ಆಹ್ವಾನ | Udyogini Scheme

WhatsApp Group Join Now
Telegram Group Join Now

ಈಗಾಗಲೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರಿಗಾಗಿ ಹಲವು ರೀತಿಯ ಯೋಜನೆಗಳನ್ನು ಪರಿಚಯಿಸಿವೆ. ರಾಜ್ಯ ಸರ್ಕಾರ ಮತ್ತೊಂದು ನೂತನ ಯೋಜನೆಯ ಮ‌ೂಲಕ ವ್ಯಾಪಾರ ಮತ್ತು ಉದ್ಯಮ ಆರಂಭಿಸುವವರಿಗೆ ರೂ.1.00 ಲಕ್ಷದಿಂದ ರೂ.3.00 ಲಕ್ಷದವರಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯ ಹೆಸರು (Udyogini Scheme) ಉದ್ಯೋಗಿನಿ ಯೋಜನೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ.

ಉದ್ಯೋಗಿನಿ ಯೋಜನೆಯ ಉದ್ದೇಶ?
ಸರ್ಕಾರದ ಈ ಯೋಜನೆಯಡಿ ಮಹಿಳೆಯರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ಈ ಯೋಜನೆಯನ್ನು ಪ್ರಾರಂಭಿಸಿದೆ, ಇದು ನಿರ್ಗತಿಕ ಮಹಿಳೆಯರಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು, ಸ್ವ-ಉದ್ಯೋಗ & ಮಹಿಳೆಯರಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಜೀವನಶೈಲಿಯನ್ನು ಉನ್ನತೀಕರಿಸಲು ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ.

Udyogini Scheme

ಯೋಜನೆಯ ಮೊತ್ತ.?
ಕೇಂದ್ರ ಸರ್ಕಾರದ ಈ ಸ್ಕೀಮ್ ಅಡಿಯಲ್ಲಿ ರೂ.1 ಲಕ್ಷದಿಂದ ರೂ.3 ಲಕ್ಷ ಸಾಲ ಪಡೆದುಕೊಳ್ಳಬಹುದು. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ/ ಎಸ್‌ಟಿ) ಮಹಿಳೆಯರಿಗೆ ಸರ್ಕಾರವು ಸಾಲದ ಒಟ್ಟು ಮೊತ್ತದ ಶೇ.50ರಷ್ಟು ಸಾಲವನ್ನು ಸಬ್ಸಿಡಿ (Backend Subsidy) ನೀಡುತ್ತದೆ. ಅಂದರೆ ರೂ.3 ಲಕ್ಷ ಸಾಲ ತೆಗೆದುಕೊಂಡರೆ ರೂ.1.5 ಲಕ್ಷ ಮಾತ್ರ ಹಣವನ್ನು ಮರುಪಾವತಿಸಬೇಕು. ಹಾಗೂ ಸಾಲ ಪಡೆಯುವ ಮಹಿಳೆ ವಿಶೇಷ ವರ್ಗ ಅಥವಾ ಸಾಮಾನ್ಯ ವರ್ಗದವರಾಗಿದ್ದರೆ ಸರ್ಕಾರವು ಗರಿಷ್ಠ 3 ಲಕ್ಷ ರೂ.ವರೆಗೆ ಸಾಲವನ್ನು ನೀಡುತ್ತದೆ ಅದರಲ್ಲಿ 90 ಸಾವಿರ ರೂ. ಒಟ್ಟು ಮೊತ್ತದಲ್ಲಿ ಸಬ್ಸಿಡಿ ನೀಡುತ್ತದೆ ಆದ್ದರಿಂದ ಅವರು ರೂ.2.1 ಲಕ್ಷ ಹಣವನ್ನು ಮಾತ್ರ ಹಿಂದಿರುಗಿಸಬೇಕು.

ಸಾಲ ಪಡೆಯಲು ಮಾನದಂಡಗಳು:

  1. ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರಬೇಕು.
  2. ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯ ಮಿತಿ ಇರುವುದಿಲ್ಲ.
  3. ಈ ಸಾಲ ನೀಡುವಾಗ SC/ST ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
  4. ಮಹಿಳೆಯರು ರೂ. 3 ಲಕ್ಷದವರೆಗೆ ಮಾತ್ರ ಸಾಲ ಪಡೆಯಬಹುದು.
  5. ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬಹುದು.
  6. ಸಾಲ ಪಡೆಯಬಯಸುವ ಮಹಿಳೆಯರು ಈಗಾಗಲೇ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಸಕಾಲದಲ್ಲಿ ಪಾವತಿಸಬೇಕು.

Udyogini Scheme ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜನ್ಮ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ವಿಳಾಸ ಪುರಾವೆ
  • ಆದಾಯ ಪ್ರಮಾಣಪತ್ರ
  • ಪಡಿತರ ಚೀಟಿ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ ನಕಲು
  • ಹಾಗೂ ಬ್ಯಾಂಕ್‌ ಕೆಳುವ ಇತರೆ ಅಗತ್ಯವಿರುವ ದಾಖಲೆಗಳು ಇರಬೇಕು.

ಯಾವೆಲ್ಲ ಉದ್ಯೋಗಕ್ಕಾಗಿ ಸಾಲ ಪಡೆಯಬಹುದು?
ಬೇಕರಿ, ಕಾಫಿ -ಟೀ ಅಂಗಡಿ, ಅಗರ್‌ಬತ್ತಿ ತಯಾರಿಕೆ ಡಯೋಗೋಸ್ಟಿಕ್ ಲ್ಯಾಬರ್, ಉಪ್ಪಿನಕಾಯಿ, ಟೈಲರಿಂಗ್‌, ಪೋಟೋ ಸ್ಕೂಡಿಯೋ, ದಿನಸಿ ಅಂಗಡಿ, ಬಳೆ ಅಂಗಡಿ, ಚಪ್ಪಲಿ ಮಾರಾಟ ಮಳಿಗೆ, ಮ್ಯಾಚ್ ಬಾಕ್ಸ್ ತಯಾರಿಕೆ, ಡಿಟರ್ಜೆಂಟ್ ತಯಾರಿಕೆ, ಬ್ಯೂಟಿ ಪಾರ್ಲರ್, ಕ್ಲಿನಿಕ್, ಜಿಮ್, ಹಿಟ್ಟಿನ ಗಿರಣಿ, ನ್ಯಾಯಬೆಲೆ ಅಂಗಡಿ, ಲೀಫ್‌ ಕಪ್‌ಗಳ ತಯಾರಿಕೆ, ರಿಬ್ಬನ್ ತಯಾರಿಕೆ, ಮೀನು ಮಾರಾಟ, ಕಾಂಡಿಮೆಂಟ್ಸ್, ಸೋಪ್ ಆಯಿಲ್, ಸೋಪ್ ಪೌಡರ್, ಎಸ್‌ಟಿಡಿ ಬೂತ್ ಸೇರಿದಂತೆ 88ಕ್ಕೂ ಅಧಿಕ ಸಣ್ಣ ಪ್ರಮಾಣದ ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರದ 3 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲವನ್ನು ಉದ್ಯೋಗಿನಿ ಯೋಜನೆಯಡಿ ಒದಗಿಸುತ್ತದೆ.

Udyogini Scheme ಅರ್ಜಿ ಸಲ್ಲಿಸುವುದು ಹೇಗೆ:
ಉದ್ಯೋಗಿನಿ ಯೋಜನೆಯ ಲಾಭ ಅಥವಾ ಸಾಲವನ್ನು ಪಡೆಯಲು ಬಯಸುವ ಮಹಿಳೆಯರು ತಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ ಸಾಲ ಕೇಳಬೇಕು. ಬ್ಯಾಂಕ್ ನಲ್ಲಿ ಅಗತ್ಯ ದಾಖಲೆಗಳನ್ನು ಕೇಳುತ್ತಾರೆ. ಅವುಗಳನ್ನು ಸಲ್ಲಿಸಿದ ನಂತರ, ಬ್ಯಾಂಕ್‌ನಿಂದ ಅರ್ಜಿ ನಮೂನೆಯನ್ನೂ ನೀಡಲಾಗುವುದು. ಅದನ್ನು ಪೂರ್ಣ ಭರ್ತಿ ಮಾಡಿದ. ಬಳಿಕ ದಾಖಲೆಗಳನ್ನು ಉದ್ದೇಶ ಎಲ್ಲವನ್ನೂ ಪರಿಶೀಲಿಸಿ ಸಾಲ ಕೊಡುತ್ತಾರೆ. ಅಥವಾ ಅರ್ಜಿದಾರರು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲೂ ಅರ್ಜಿ ಸಲ್ಲಿಸಬಹುದು. ಹಾಗಾಗಿ ಆನ್‌ಲೈನ್‌ಗಿಂತ ನೇರವಾಗಿ ಬ್ಯಾಂಕ್ ಗೆ ಹೋಗಿ ಕೇಳುವ ಮೂಲಕ ಕೆಲಸವನ್ನು ವೇಗವಾಗಿ ಮುಗಿಸಬಹುದು.

ಕೇದಾರನಾಥ ಸೇರಿ ಚಾರ್‌ಧಾಮ್ ಯಾತ್ರೆ ಕೈಗೊಳ್ಳಲು ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ 

ಹೈನುಗಾರಿಕೆ ಆರಂಭಿಸಲು ಎಮ್ಮೆ, ಆಕಳು ಖರೀದಿಸಲು ಈ ಬ್ಯಾಂಕ್ ನೀಡುತ್ತಿದೆ ರೂ.10 ಲಕ್ಷ ಸಾಲ 

ಸ್ವಯಂ ಉದ್ಯೋಗ ಪ್ರಾರಂಭಿಸಲು 1,00,000 ರೂ. ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿ 

Leave a Comment