ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಯೋಜನೆಯಡಿ 1 ಲಕ್ಷ ರೂ. ಸಾಲ ಆರ್ಥಿಕ ನೇರವು | Karnataka Arivu Education Loan Scheme

WhatsApp Group Join Now
Telegram Group Join Now

Karnataka Arivu Education Loan Scheme: ಕರ್ನಾಟಕ ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ವತಿಯಿಂದ 2024-25ನೇ ಸಾಲಿನ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ವಿದ್ಯಾರ್ಥಿಗಳಿಗೆ ಆರ್ಥಿಕ ನೇರವು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಈ ಯೋಜನೆಯಡಿ ಸಾಲ-ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಅರಿವು ಯೋಜನೆಯ ಪ್ರಯೋಜನಗಳು:
2024-25ನೇ ಸಾಲಿನಲ್ಲಿ ಸಿ.ಇ.ಟಿ, ಹಾಗೂ ಎನ್.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿನಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ 1,00,000 ರೂ. ಸಾಲವನ್ನು ಶೇಕಡಾ.2 ರಷ್ಟು ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ಸೌಲಭ್ಯ ನೀಡಲಾಗುವುದು.
ವ್ಯಾಸಂಗ ಪೂರ್ಣಗೊಂಡ ನಂತರ ಸಾಲ ಮರುಪಾವತಿಸಲು 04 ತಿಂಗಳ ವಿರಾಮಾವಧಿ ಇರುತ್ತದೆ.
ಆನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.

ಅರ್ಜಿ ಸಲ್ಲಿಸಲು ಅರ್ಹತೆಗಳು:

  1. ಅರ್ಜಿದಾರರು ಸಾಮಾನ್ಯ ಆರ್ಯ ವೈಶ್ಯ ಸಮುದಾಯದವರು ಆಗಿರಬೇಕು.
  2. ಈ ಯೋಜನೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಕೋರ್ಸ್ ಓದುತ್ತಿರಬೇಕು.
  3. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು.
  4. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/- ಕ್ಕಿಂತ ಕಡಿಮೆ ಇರಬೇಕು.
  5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು.
  6. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಖಾಯಂ ವಿಳಾಸವು ಕರ್ನಾಟಕದಲ್ಲಿ ವಾಸವಾಗಿರಬೇಕು.
  7. ಅರ್ಜಿದಾರರ ಆಧಾರ್ ಕಾರ್ಡ್
  8. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಆಗಿರಬೇಕು.
  9. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇಕಡಾ 33%, ವಿಕಲಚೇತನರಿಗೆ ಶೇಕಡಾ.5% ರಷ್ಟು ಮತ್ತು ತೃತೀಯ ಲಿಂಗಿಗಳಿಗೆ ಶೇ.5% ಮೀಸಲಾತಿ ಇರುತ್ತದೆ.
  10. ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರು.

Karnataka Arivu Education Loan Scheme

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • 10ನೇ ತರಗತಿ ಅಂಕಪಟ್ಟಿ
  • ದ್ವೀತಿಯ ಪಿಯುಸಿ ಅಂಕಪಟ್ಟಿ
  • ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ರಶೀದಿ ಮತ್ತು ದಾಖಲೆ
  • ಸಿಇಟಿ (CET) ರಿಸಲ್ಟ್‌ ಶೀಟ್‌.
  • ನೀಟ್‌ (NEET) ರಿಸಲ್ಟ್‌ ಶೀಟ್.
  • ಪಿಹೆಚ್‌ಡಿ (PHD) ಪ್ರವೇಶ ಪರೀಕ್ಷೆ ರಿಸಲ್ಟ್‌ ಶೀಟ್.
  • ನೆಟ್‌, ಎಸ್‌ಎಲ್‌ಇಟಿ ಪಾಸ್‌ ಸರ್ಟಿಫಿಕೇಟ್‌.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್‌ ಪಾಸ್‌ ಬುಕ್‌
  • ಕಾಲೇಜುಗಳು ನೀಡಿದ ಶೈಕ್ಷಣಿಕ ವೆಚ್ಚದ ಅಂದಾಜು ಪ್ರಮಾಣಪತ್ರ.
  • ಇತ್ಯಾದಿ.

Karnataka Arivu Education Loan Scheme ಸೂಚನೆ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 15, 2024 ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 08192230934, 94484 51111

ಯೋಜನೆಯ ಪ್ರಮುಖ ಲಿಂಕ್‌ಗಳು:
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: kacdc.karnataka.gov.in

ಸ್ವಯಂ ಉದ್ಯೋಗ ಪ್ರಾರಂಭಿಸಲು 1,00,000 ರೂ. ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿ

ದನದ ಶೇಡ್ ನಿರ್ಮಾಣಕ್ಕೆ ಸರ್ಕಾರದಿಂದ 57, 000 ರೂ. ಸಹಾಯಧನ ಅರ್ಜಿ ಆಹ್ವಾನ!

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net