ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ |Karnataka Sports Scholarship 2024

WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ (Karnataka Sports Scholarship 2024) ಬಹಳ ಉಪಯೋಗವಾಗು ರೀತಿಯಲ್ಲಿ ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯಬಹುದು. ಕರ್ನಾಟಕ ಸರಕಾರವು ಬಡ ಮತ್ತು ಮದ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ಹಲವು ಸೌಲಭ್ಯ ಗಳನ್ನು ನೀಡುತ್ತಿದೆ.

ಸರ್ಕಾರದಿಂದ ಉಚಿತ ಪುಸ್ತಕ, ಶೂ, ಸಮವಸ್ತ್ರ, ಬಿಸಿಯೂಟ ಜೊತೆಗೆ ಇದೀಗ ಸರ್ಕಾರದಿಂದ ವಿದ್ಯಾರ್ಥಿ ವೇತನ (Students Scholarship) ಸಹ ನೀಡಲಾಗುತ್ತಿದೆ. ‌ಇಂದು ವಿದ್ಯಾರ್ಥಿಗಳ ಶಿಕ್ಷಣ ದೃಷ್ಟಿಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಪ್ರೋತ್ಸಾಹ ಧನ ನೀಡಲಿದೆ. ಈ ವಿದ್ಯಾರ್ಥಿ ವೇತನಕ್ಕೆ 6ನೇ ತರಗತಿ ಯಿಂದ 10ನೇ ತರಗತಿ ವಿದ್ಯಾರ್ಥಿಗಳು ಅರ್ಹರರು ಈ ವಿದ್ಯಾರ್ಥಿ ವೇತನದಿಂದ 10,000 ರೂ. ವರೆಗೆ ಸ್ಕಾಲರ್‌ ಶಿಪ್ ಪಡೆಯಬಹುದು. ಹಾಗಾದರೆ ಈ ಸ್ಕಾಲರ್ಶಿಪ್ ಪಡೆಯಲು ಯಾರು ಅರ್ಹ ಎಂದು ತಿಳಿಯಲು ಈ‌ ಲೇಖನವನ್ನು ಓದಿ.

Karnataka Sports Scholarship 2024 ಮಾಹಿತಿ

ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಸಲುವಾಗಿ, ಕರ್ನಾಟಕ ಸರ್ಕಾರದಿಂದ ಕ್ರೀಡಾ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಂಬಲಿಸುವ ಸಲುವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಾದ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 10,000 ರೂ. ಕ್ರೀಡಾ ವಿದ್ಯಾರ್ಥಿ ವೇತನ (Sports Scholarship) ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಹರು:

  • ವಿದ್ಯಾರ್ಥಿ ವೇತನದ ಮೊತ್ತ: 10,000 ರೂ.
  • ವಿದ್ಯಾರ್ಥಿಗಳ 2023-24ನೇ ಸಾಲಿನಲ್ಲಿ, ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರಬೇಕು.
  • ರಾಜ್ಯ ಕ್ರೀಡಾ ಪ್ರಾಧಿಕಾರ ದಲ್ಲಿ ನೋಂದಾಯಿತವಾದ ಕ್ರೀಡಾ ಸಂಸ್ಥೆಗಳು ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿ ಭಾಗವಹಿಸಿ ಮೊದಲ ಸ್ಥಾನ ಪಡೆದಿರಬೇಕು.
  • ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ಒಂದೇ ವಿದ್ಯಾರ್ಥಿ ವೇತನಕ್ಕೆ ಪಡೆಯಲು ಅರ್ಹರಾಗಿರುತ್ತಾರೆ.
  • ಖೋಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯದ ತಂಡದಿಂದ ಪ್ರತಿನಿಧಿಸಿದ ಕ್ರೀಡಾಪಟುಗಳು ಅರ್ಹರಾಗಿರುತ್ತಾರೆ.

Karnataka Sports Scholarship 2024 ಪ್ರಮುಖ ದಾಖಲೆಗಳು:

  • ಪಾಸ್ ಪೋರ್ಟ್ ಅಳತೆ ಪೋಟೋ
  • ಆಧಾರ್ ಕಾರ್ಡ್‌
  • ಕ್ರೀಡಾಪಟು ಎಂಬುದಕ್ಕೆ ಅಗತ್ಯ ದಾಖಲಾತಿ ಮಾಹಿತಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಪ್ರಸ್ತುತ ತರಗತಿ ಪ್ರವೇಶಾತಿ ದಾಖಲೆ
  • ಅಂಕ ಪಟ್ಟಿ ಇತ್ಯಾದಿ‌

ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕೃತ ವೆಬ್‌ಸೈಟ್ ysd.karnataka.gov.in ಗೆ ಭೇಟಿ ನೀಡಿ ಮಾಹಿತಿ ಪರಿಶೀಲಿಸಬಹುದು. ಅಥವಾ ವಿದ್ಯಾರ್ಥಿಗಳು sevasindhuservices.karnataka.gov.in ವೆಬ್‌ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್, 30, 2024

ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಇತರೆ ಸ್ಕಾಲರ್‌ಶಿಪ್ ಮಾಹಿತಿ:‌

Leave a Comment