ಪದವಿ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ವಿದ್ಯಾರ್ಥಿವೇತನ | Life’s Good Scholarship Program 2024

WhatsApp Group Join Now
Telegram Group Join Now

ದೇಶದ ಯಾವುದೇ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಯಾವುದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಯಾಣವನ್ನು ಬೆಂಬಲಿಸಲು ಲೈಫ್‌ ಗುಡ್‌ ವತಿಯಿಂದ 1,00,000 ರೂ. ವರೆಗೆ ವಿದ್ಯಾರ್ಥಿವೇತನ.

ಎಲ್‌ಜಿ ಇಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸು ನೆರವನ್ನು ನೀಡಲು ‘Life’s Good’ ಸ್ಕಾಲರ್‌ಶಿಪ್‌ ಪ್ರೋಗ್ರಾಮ್‌ ಅನ್ನು ಸಿಎಸ್‌ಆರ್‌ ಉಪಕ್ರಮವಾಗಿ ಜಾರಿಗೆ ತಂದಿದೆ. ಈ ಸ್ಕಾಲರ್‌ಶಿಪ್‌ ಗೆ ಅರ್ಹರು ಯಾರೆಂದರೆ ಪ್ರಸ್ತುತ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತಾ ಮಾನದಂಡಗಳು, ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ಈ ಕೆಳಗೆ ಲೇಖನದಲ್ಲಿ ನೀಡಲಾಗಿದೆ.

Life’s Good Scholarship Program 2024 Details :

ಸ್ಕಾಲರ್‌ಶಿಪ್‌ ಹೆಸರು: ‘Life’s Good’ Scholarship Program 2024

ಸ್ಕಾಲರ್‌ಶಿಪ್‌ ಸೌಲಭ್ಯ ಅವಧಿ : 01 ವರ್ಷ

ಸ್ಕಾಲರ್‌ಶಿಪ್‌ ವೇತನ: 1,00,000 ರೂ.

  • ಅರ್ಜಿ ಸಲ್ಲಿಸಲು ಅರ್ಹತೆಗಳು:
  • ವಿದ್ಯಾರ್ಥಿಗಳು ಭಾರತ ಯಾವುದೇ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ (ಯಾವುದೇ ಶೈಕ್ಷಣಿಕ ವರ್ಷದಲ್ಲಿ) ಓದುತ್ತಿರಬೇಕು.
  • ಪದವಿ ಮೊದಲ ವರ್ಷದ ವಿದ್ಯಾರ್ಥಿಗಳು PUC ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು. ಹಾಗೂ ಪದವಿ 2ನೇ, 3ನೇ ಮತ್ತು 4ನೇ ವರ್ಷದ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾದವರು ಅರ್ಹರಾಗಿರುತ್ತಾರೆ.
  • Buddy4Study ಮತ್ತು LG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿ ಮಕ್ಕಳು ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ರೂ ದಾಟಿರಬಾರದು.

ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:

  • ಆಧಾರ್ ಕಾರ್ಡ್
  • PUC ಅಂಕಪಟ್ಟಿ ಅಥವಾ ಪದವಿ 2ನೇ, 3ನೇ, 4ನೇ ವರ್ಷದ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಸೆಮಿಸ್ಟರ್ ಅಂಕಪಟ್ಟಿಗಳು.
  • ಆದಾಯ ಪ್ರಮಾಣಪತ್ರ
  • ಬಿಪಿಎಲ್/ರೇಷನ್ ಕಾರ್ಡ್
  • ಕಾಲೇಜು ಶೈಕ್ಷಣಿಕ ಶುಲ್ಕದ ರಸೀದಿ
  • ಫಲಾನುಭವಿಗಳ ಬ್ಯಾಂಕ್ ಖಾತೆ
  • ಪಾಸ್‌ಪೋರ್ಟ್‌ ಅಳತೆ ಭಾವಚಿತ್ರಗಳು.

ಅರ್ಜಿ ಸಲ್ಲಿಸುವುದು ಹೇಗೆ:
ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ. ನಂತರ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. Apply Online ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.

ನಂತರ Buddy4Study ನಲ್ಲಿ ನಿಮ್ಮ ಇಮೇಲ್, ಜಿಮೇಲ್, ಮೊಬೈಲ್‌ ನಂಬರ್ ಮೂಲಕ ಖಾತೆಯೊಂದಿಗೆ ನೋಂದಾಯಿಸಿ.

ಈಗ ನಿಮ್ಮನ್ನು ‘ಲೈಫ್’ಸ್ ಗುಡ್’ ಸ್ಕಾಲರ್‌ಶಿಪ್ ಪ್ರೋಗ್ರಾಂ 2024 ಅರ್ಜಿ ಪುಟಕ್ಕೆ ಭೇಟಿ ನೀಡುತ್ತಿರಾ. ‘Apply Online’ ಬಟನ್ ಮೇಲೆ ಕ್ಲಿಕ್ ಮಾಡಿ.

ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ದಾಖಲಾತಿಯನ್ನು ಅಪ್ಲೋಡ್ ಮಾಡಿ. ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ದಾಖಲೆಗಳ ವಿವರಗಳು ಪೂರ್ವವೀಕ್ಷಣೆ ಪಡೆದು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಸಬ್ಮಿಟ್’ (Submit) ಬಟನ್ ಕ್ಲಿಕ್ ಮಾಡಿ.

important Dates :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-09-2024

Life’s Good Scholarship Program 2024 important Links:

ಸ್ಕಾಲರ್‌ಶಿಪ್‌ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌‌‌ ವಿಳಾಸbuddy4study.com
ಹೆಚ್ಚಿನ ಉದ್ಯೋಗ ಮಾಹಿತಿಗಾಗಿಇಲ್ಲಿ ಕ್ಲಿಕ್ ಮಾಡಿ

Leave a Comment