Ration card correction : ರೇಷನ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ ಮತ್ತೆ ಅವಕಾಶ

WhatsApp Group Join Now
Telegram Group Join Now

ಹೌದು ಸ್ನೇಹಿತರೇ ರೇಷನ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ, ರಾಜ್ಯಾದ್ಯಂತ ‘ರೇಷನ್ ಕಾರ್ಡ್’ (Ration Card) ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ ಕ್ರಿಯೆ ಆರಂಭವಾಗಿದೆ. ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಹೊಸ ಅಥವಾ ಹಳೆಯ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಹಾಗೂ ನಿಧನರಾದವರ ಹೆಸರು ತೆಗೆದು ಹಾಕಲು ಡಿಸೆಂಬರ್ 3 ರಿಂದ ರಾಜ್ಯಾದ್ಯಂತ ಮತ್ತೆ ಅವಕಾಶ ನೀಡಲಾಗಿದೆ.

ರಾಜ್ಯದಾದ್ಯಂತ ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್ (Ration card correction) ಗೆ ಅರ್ಜಿಯನ್ನು ಹಾಕಲು ಹಾಗೂ ಈಗಾಗಲೇ ಇರುವ ಪಡಿತರ ಚೀಟಿಯಲ್ಲಿ ಸದಸ್ಯರ ಹೆಸರು, ವಿಳಾಸ ಸೇರಿದಂತೆ ವಿವಿಧ ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಾರೆ. 03 ಡಿಸೆಂಬರ್ ರಿಂದ ಅಂದರೆ ನಿನ್ನೆಯಿಂದ ಬೆಳಗ್ಗೆ 10 ರಿಂದ ಸಾಯಂಕಾಲ 5 ರವರೆಗೆ ತಿದ್ದುಪಡಿಗೆ ಅವಕಾಶ ನೀಡಿದೆ. ಪಡಿತರ ಚೀಟಿ (Ration Card)ಯಲ್ಲಿ ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ, ಸೇರಿದಂತೆ ಯಾವುದೇ ಅಪ್ಡೇಟ್ ಮಾಡಲು ಇದೀಗ ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ನೀಡಿದೆ.

Ration card correction ರೇಷನ ಕಾರ್ಡ್ ನಲ್ಲಿ ಯಾವೆಲ್ಲ ತಿದ್ದುಪಡಿ ಮಾಡಬಹುದು?

ಪಡಿತರ ಚೀಟಿದಾರರು ಹೆಸರು ತಿದ್ದುಪಡಿ.
ಹೊಸ ಸದಸ್ಯರ ಸೇರ್ಪಡೆ.
ವಿಳಾಸ ಬದಲಾವಣೆ.
ನ್ಯಾಯಬೆಲೆ ಅಂಗಡಿ ಬದಲಾವಣೆ.
ಹೆಸರು ತೆಗೆಯುವುದಕ್ಕೆ ಮತ್ತೆ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಏಲ್ಲಿ?
ರೇಷನ ಕಾರ್ಡ್ ನಲ್ಲಿ ಯಾವುದೇ ರೀತಿಯ ತಿದ್ದುಪಡಿಯನ್ನು ಮಾಡಲು ನಿಮ್ಮ ಹತ್ತಿರದ ಯಾವುದೇ ಸಿಎಸ್ಸಿ ಕೇಂದ್ರ, ಬೆಂಗಳೂರು ಒನ್, ಗ್ರಾಮಒನ್ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಯಾವುದೇ ಸೈಬರ್ ಸೆಂಟರ್ ಗಳಿಗೆ ಭೇಟಿ ನೀಡಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.

ಹಾಗೂ ಈಗಾಗಲೇ ಬಿಪಿಎಲ್ ರೇಷನ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡನ್ನು ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ನೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ರೇಷನ ಕಾರ್ಡ್ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರು ಸೇರ್ಪಡೆಗೆ (Ration card correction) ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಆಹಾರ ಇಲಾಖೆಯ https://ahara.kar.nic.in ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ಹೆಸರು ಸೇರಿಸಲು ಯಾವೆಲ್ಲಾ ದಾಖಲೆಗಳು ಬೇಕು?
ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ.
ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಹೊಂದಿರಬೇಗುತ್ತದೆ.
ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡಲು ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ.

ಪಡಿತರ ಚೀಟಿಯನ್ನು ಆನ್‌ಲೈನ್‌ ತಿದ್ದುಪಡಿ ಮಾಡುವ ವಿಧಾನ:
ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ https://ahara.kar.nic.in/home ಭೇಟಿ ನೀಡಿ.
ಮುಖ್ಯ ಪುಟದಲ್ಲಿ ಇ-ಸೇವೆಗಳು ಆಯ್ಕೆ ಮೇಲೆ ಕ್ಲಿಕ್ ಮಾಡಿ.
ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹೊಸ ಪೇಜ್ ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ.
ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮೀಟ್ ಮಾಡಿ.
ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದೆ ಎಂದು ಪರಿಶೀಲಿಸಿ.

ಸೂಚನೆ: ಮೇಲಿನ ಈ ಕುರಿತಂತೆ ಯಾವುದೇ ರೀತಯ ಗೊಂದಲಗಳು ಇದ್ದರೆ ಕರ್ನಾಟಕ ಪಡಿತರ ಚೀಟಿ ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ ನಂಬರ್ : 18004259339 ಅಥವಾ ಸಹಾಯವಾಣಿ ಸಂಖ್ಯೆ: 1967 ಗೆ ಸಂಪರ್ಕಿಸಬಹುದು.

ಬಿಪಿಎಲ್ ಕಾರ್ಡ್ ರದ್ದಾದ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net