ಕರ್ನಾಟಕ ಸರ್ಕಾರದ ವತಿಯಿಂದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಅದಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸ್ಕಾಲರ್ಶಿಪ್ ಅನ್ನು 1ನೇ ತರಗತಿ ಯಿಂದ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಬಹುದು. ಅರ್ಹತೆ, ಅರ್ಜಿ ವಿಧಾನ ವಿಧಾನ, ಪ್ರಮುಖ ದಾಖಲೆಗಳ ಸಮಗ್ರ ಮಾಹಿತಿ ಇಲ್ಲಿದೆ ನೋಡಿ.
2024-25ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಸಮುದಾಯದ 1 ರಿಂದ 8 ನೇ ತರಗತಿಯಲ್ಲಿ (ssp pre matric scholarship) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
SSP Pre Matric Scholarship 2024 Apply Online Now:
ಅರ್ಜಿ ಸಲ್ಲಿಸಲು ಅರ್ಹತೆಗಳು:
ವಿದ್ಯಾರ್ಥಿಗಳು 1 ರಿಂದ 8 ನೇ ತರಗತಿಯಲ್ಲಿ ಓದುತ್ತಿರಬೇಕು.
ಅರ್ಜಿದಾರರು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯಕ್ಕೆ ಸೇರಿರಬೇಕು.
ವಿದ್ಯಾರ್ಥಿಗಳು ಕರ್ನಾಟಕ ನಿವಾಸಿಗಳು ಆಗಿರಬೇಕು.
ಎಲ್ಲಾ ಮೂಲಗಳಿಂದ ವಿದ್ಯಾರ್ಥಿ ಪಾಲಕರ ವಾರ್ಷಿಕ ಆದಾಯ 1 ಲಕ್ಷ ರೂ. ಮೀರಿರಬಾರದು.
ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:
- ವಿದ್ಯಾರ್ಥಿಗಳ ಆಧಾರ್ ಕಾರ್ಡ್
- ಪೋಷಕರ ಮೊಬೈಲ್ ಸಂಖ್ಯೆ
- ವಿದ್ಯಾರ್ಥಿ ಹೆಸರಿನ ಇ-ಮೇಲ್ ಐಡಿ
- ವಿದ್ಯಾರ್ಥಿಗಳ ಶಾಲಾ ನೋಂದಣಿ ಸಂಖ್ಯೆ
- ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಅರ್ಜಿದಾರರು ಅಂಗವಿಕಲರಾಗಿದ್ದಲ್ಲಿ ಯುಡಿಐಡಿ ಗುರುತಿನ ಸಂಖ್ಯೆ
- ವಿದ್ಯಾರ್ಥಿಗಳ ಜಿಲ್ಲೆ, ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
- ಹಾಸ್ಟೆಲ್ ವಿವರಗಳು ( ಅನ್ವಯವಾದಲ್ಲಿ)
ಇದನ್ನೂ ಓದಿ: ಪಿಎಂ ಕಿಸಾನ್ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ?
ಅರ್ಜಿ ಸಲ್ಲಿಸುವ ವಿಧಾನ:
- ಮೊದಲಿಗೆ ವೆಬ್ ವಿಳಾಸ ssp.postmatric.karnataka.gov.in ಗೆ ಭೇಟಿ ನೀಡಿ.
- ಆನಂತರ ಮುಖ್ಯ ಪುಟ್ಟದಲ್ಲಿ ಕಾಣುವ ‘ಹೊಸ ಖಾತೆಯನ್ನು ತೆರೆಯಲು (ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಬ್ಬರಿಗೂ ಅನ್ವಯ) ಮೇಲೆ ಇಲ್ಲಿ ಕ್ಲಿಕ್ ಮಾಡಿ.
- (ಇಲ್ಲಿಯವರೆಗೂ ಎಸ್ಎಸ್‌ಪಿ ತಂತ್ರಾಂಶದಲ್ಲಿ ಖಾತೆ ತೆರೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಖಾತೆ ಸೃಜಿಸಬೇಕು).
- ಖಾತೆ ತೆರೆದ ನಂತರ ಮತ್ತೆ ssp.postmatric.karnataka.gov.in ಗೆ ಭೇಟಿ ನೀಡಿ.
- ಆನಂತರ ಅಲ್ಲಿರುವ 2024-25ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (ಈಗಾಗಲೇ ಎಸ್‌ಎಸ್‌ಪಿ ಅಲ್ಲಿ ಖಾತೆ ಸೃಜಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ) ‘ ಎಂದಿರುವ ಲಿಂಕ್ ಮಾಡಿ.
- ನಂತರ ಹಂತದಲ್ಲಿ ತೆರೆಯುವ ವೆಬ್‌ಪೇಜ್‌ನಲ್ಲಿ ಕೇಳಲಾಗುವ ಸಂಪೂರ್ಣ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ಕೃಷಿ ಇಲಾಖೆಯಿಂದ ವಿವಿಧ ಸಬ್ಸಿಡಿ ಯೋಜನೆ ಅರ್ಜಿ ಆಹ್ವಾನ
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 29/08/2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-10-2024
SSP Pre Matric Scholarship 2024 Apply Online Now ಪ್ರಮುಖ ಲಿಂಕ್‌ಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: ssp.postmatric.karnataka.gov.in ಅಥವಾ dom.karnataka.gov.in
ಇದನ್ನೂ ಓದಿ: ದನದ ಶೇಡ್ ನಿರ್ಮಾಣಕ್ಕೆ ಸರ್ಕಾರದಿಂದ 57, 000 ರೂ. ಸಹಾಯಧನ ಅರ್ಜಿ ಆಹ್ವಾನ!