ಕರ್ನಾಟಕ ಕೆಸೆಟ್ ಅಧಿಸೂಚನೆ ಪ್ರಕಟ | Karnataka KSET Application 2024

WhatsApp Group Join Now
Telegram Group Join Now

Karnataka KSET Application 2024: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-Set 2024) ನಡೆಸುವ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್ ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ. ಕೆಸೆಟ್ 2024 ರ ಅರ್ಜಿ ಸಲ್ಲಿಸಲು ಜುಲೈ 29, 2024 ರಿಂದ ಪ್ರಾರಂಭವಾಗಲಿದೆ. ಅರ್ಹ ಮತ್ತು ಆಸಕ್ತರು ಆನ್‌ಲೈನ್ ಮೂಲಕ 22- 08- 2024 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

Karnataka State Eligibility Test- 2024
ಕೆಸೆಟ್ ( KSET) 2024ರ ಪರೀಕ್ಷೆಯನ್ನು ಒಟ್ಟು 41 ವಿಷಯಗಳನ್ನು ಕುರಿತು ನಡೆಸಲಾಗುತ್ತದೆ, ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಪದವಿ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.

ಅರ್ಹತಾ ಮಾನದಂಡಗಳು:
ಸ್ನಾತಕೋತ್ತರ ಪದವಿ ಪಡೆದವರು ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ವಿದ್ಯಾರ್ಥಿಗಳು ಕೆಸೆಟ್‌ ಪರೀಕ್ಷೆಯನ್ನು ಬೆರೆಯಲು ಅರ್ಹರಾಗಿರುತ್ತಾರೆ.
ಸ್ನಾತಕೋತ್ತರ ಪದವಿ ಪಡೆದ ಸಾಮಾನ್ಯ ವರ್ಗದ ಅಭ್ಯರ್ಥಿಗಳು 55% ರಷ್ಟು ಅಂಕಗಳನ್ನು ಪಡೆದಿರಬೇಕು.
SC, ST, OBC, PwD ಅಭ್ಯರ್ಥಿಗಳು 50% ರಷ್ಟು ಅಂಕಗಳನ್ನು ಪಡೆದಿರಬೇಕು.
ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿ ಕೆಸೆಟ್ ಪರೀಕ್ಷೆ ಬರೆಯಬೇಕು.

ವಯೋಮಿತಿ:
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಯಾವುದೇ ಗರಿಷ್ಟ ವಯೋಮಿತಿ ನಿಗದಿಪಡಿಸಿಲ್ಲ.

ಪರೀಕ್ಷಾ ಶುಲ್ಕ:
ಸಾಮಾನ್ಯ ವರ್ಗ, ಪ್ರವರ್ಗ II-A, II-B, III-A, III-B ಮತ್ತು ಇತರೆ ರಾಜ್ಯದ ಅಭ್ಯರ್ಥಿಗಳಿಗೆ: 1,000 ರೂ.
ಪ್ರವರ್ಗ- 1, SC, ST, PwD ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ: 700 ರೂ.

ಶುಲ್ಕ ಪಾವತಿಸುವ ವಿಧಾನ:
ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು. ಪ್ರವರ್ಗ-I, SC, ST, ತೃತೀಯ ಲಿಂಗ ಮತ್ತು ವಿಕಲಚೇತನರ ಅಭ್ಯರ್ಥಿಗಳಿಗೆ 40% ಶುಲ್ಕ ವಿನಾಯಿತಿ ನೀಡಲಾಗುತ್ತದೆ.

ಕೆಸೆಟ್ ಪರೀಕ್ಷಾ ವಿಧಾನ ಮತ್ತು ದಿನಾಂಕ:
ಕೆಸೆಟ್ ಪರೀಕ್ಷೆಯಲ್ಲಿ ಒಟ್ಟು ಎರಡು ಪರೀಕ್ಷೆಗಳನ್ನು ಬರೆಯಬೇಕು. ಎರಡು ಪತ್ರಿಕೆಗಳು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಪರೀಕ್ಷೆ ದಿನಾಂಕ: 24-112024

Karnataka KSET Application 2024

ಪ್ರಮುಖ ದಿನಾಂಕಗಳು
ಅಧಿಸೂಚನೆ ಹೊರಡಿಸಲಾದ ದಿನಾಂಕ: 13/07/2024
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 29/07/2024
ಆನ್‌ಲೈನ್ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 22/08/2024
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 26/08/2024
ಪರೀಕ್ಷಾ ದಿನಾಂಕ : 24/11/2024

Karnataka KSET Application 2024 ಪ್ರಮುಖ ಲಿಂಕ್‌ಗಳು:

ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಹೊಸ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ: kea.kar.nic.in

ಇತರೆ ಉದ್ಯೋಗ ಮಾಹಿತಿ:‌

Leave a Comment